Friday, July 19, 2019

30 Steps to be keenly considered for all sorts Learners














Knowledge Article 2

ಪೂಜ್ಯನೀಯ ಗುರುವರೇಣ್ಯರೆ /ಪೋಷಕರೆ,

"You Plan for the Academic Excellence or Perish" ಎಂಬ ಸೂಕ್ತಿಯನ್ನು ಯುಕ್ತವಾಗಿ ಪರಿಗಣಿಸಿ ನಿಮ್ಮ ಮಕ್ಕಳ ಉತ್ಕೃಷ್ಟಶೀಲ ಶೈಕ್ಷಣಿಕ       ಸಾಧನೆಗೆ ಪೂರಕವಾದ ಈ 30     ಪ್ರೇರಣಧಾಯಕ ಅಂಶಗಳನ್ನು ಗಂಭೀರವಾಗಿ ಪರಿಪಾಲಿಸಿ ಯಶಸ್ವಿಯಾಗಲು ತಮ್ಮ ಸಲಹೆ - ಸೂಚನೆ & ಪ್ರಚೋದನೆ  ಸದಾ ಕಲಿಕಾರ್ಥಿಗಳಿಗೆ ದೊರೆಯಲೆಂಬುದು ನನ್ನ ಮಹದಾಸೆ.
ಪ್ರಣಾಮಗಳೊಂದಿಗೆ :
    ಜಿ. ಎಂ. ಆರ್.  ಆನೇಕಲ್.

Knowledge Article 1

*ಜ್ಞಾನೋದ್ದೀಪನ *
:::::::::::::::::::::::::::::::::::::::::

*ಪಂಚ - ಪಾಂಡವರ ಗಹನತೆ *
*********

              ಯತೋಧರ್ಮ:
ತ ತೋ ಜಯ: ಎಂಬ ಸಾರಸುಧೆಯನ್ನು ಧರ್ಮ ತ ತ್ಪರತೆಗಾಗಿ ವ್ಯಕ್ತಪಡಿಸಿರುವ ಮಹಾಭಾರತದ ಮಹಿಮಾನ್ವಿರಾದ ಪಾಂಡವರ ಪೂರ್ವ ನಾಮಧೇಯಗಳೊಂದಿಗೆ ಅವರ ಮಹಿಮೆ ಗಳನ್ನು ತಮ್ಮ ಅಮೂಲ್ಯ ಅವಗಾಹನೆಗಾಗಿ ಉಲ್ಲೇಖಿಸಲಾಗಿದೆ :

* ಪೂರ್ವ ಜನ್ಮದಲ್ಲಿ ವಿಶ್ವಭುಕ್ ಆಗಿದ್ದು, ಯಮನ ಅಂಶದಲ್ಲಿ      ಜನಿಸಿದ ಪಾಂಡುವಿನ ಹಿರಿಯ ಪುತ್ರ ಯುಧಿಷ್ಠಿರ (ಧರ್ಮರಾಜ) ಮಹಾಧರ್ಮಿಷ್ಠನಾಗಿದ್ದನು.

*ಪೂರ್ವ ಜನ್ಮದಲ್ಲಿ ಭೂತಧಾಮಾ ಆಗಿದ್ದು, ವಾಯು ಅಂಶದಲ್ಲಿ ಜನಿಸಿದ ಪಾಂಡುವಿನ ದ್ವಿತೀಯ ಪುತ್ರ ಭೀಮ ಮಹಾಬಲಶಾಲಿಯಾಗಿದ್ದನು.

*ಪೂರ್ವ ಜನ್ಮದಲ್ಲಿ ಶಿಬಿ ಆಗಿದ್ದು, ಇಂದ್ರನ ಅಂಶದಲ್ಲಿ ಪಾಂಡುವಿನ ತೃತೀಯ ಪುತ್ರನಾಗಿ ಜನಿಸಿದ ಅರ್ಜುನ ಮಹಾಪರಾಕ್ರಮಿಯಾಗಿದ್ದನು.

* ಪೂರ್ವ ಜನ್ಮದಲ್ಲಿ ಶಾಂತಿ ಆಗಿದ್ದು, ಅಶ್ವಿನಿ ದೇವತೆಗಳ ಅಂಶದಲ್ಲಿ ಪಾಂಡುವಿನ ಚತುರ್ಥ ಪುತ್ರನಾಗಿ ಜನಿಸಿದ       ನಕುಲ ಮಹಾ ಜ್ಞಾನಿಯಾಗಿದ್ದನು.

*ಪೂರ್ವ ಜನ್ಮದಲ್ಲಿ ತೇಜಸ್ವಿ ಆಗಿದ್ದು, ಅಶ್ವಿನಿ ದೇವತೆಗಳ ಅಂಶದಲ್ಲಿ ಪಾಂಡುವಿನ ಪಂಚಮ ಪುತ್ರನಾಗಿ ಜನಿಸಿದ ಸಹದೇವ ಮಹಾ ಸುಂದರನಾಗಿದ್ದನು.

               ಪ್ರಣಾಮಗಳೊಂದಿಗೆ :
               ಜಿ. ಎಂ. ಆರ್.
               ಆನೇಕಲ್.