Showing posts with label Organisation. Show all posts
Showing posts with label Organisation. Show all posts

Saturday, January 1, 2022

Dr.GMR, ಆನೇಕಲ್ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಇಂದು ಗುರುಭವನದಲ್ಲಿ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆ.



ಆನೇಕಲ್ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಇಂದು ಗುರುಭವನದಲ್ಲಿ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆ ಹಾಗೂ 2022 ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕುವೆಂಪು ರವರ ವಿಚಾರಧಾರೆಯನ್ನು ಅಭಿವ್ಯಕ್ತ ಪಡಿಸಿದ ಸನ್ನಿವೇಶ.







 

ಕಾವೇರಿ ನದಿಯ ಪರಂಪರೆ

 ಕಾವೇರಿ ನದಿಯ ಪರಂಪರೆ

*********

ಆ ಕಾ ಶ ದ ನಡು.

ವೇ ದದ ಆದಿ

ನಾ ರಿ ಯ ಅಂತ್ಯ ಅದುವೇ ನಮ್ಮ ಜೀವನದಿ, ಪಾವನ ತೀರ್ಥ ಹಾಗೂ ದಕ್ಷಿಣ ಗಂಗೆಯ

ನಾಮ ವಿಶೇಷ.

      ಇಂತಹ ಪರಮ ಪಾವನವಾದ ಕಾವೇರಿ ನದಿಯ ಉಗಮೋತ್ಥಾನದ ರಹಸ್ಯ ಬಲು ಸ್ವಾರಸ್ಯಕರ.

           ಒಮ್ಮೆ ಅಗಸ್ತ್ಯ ಮಹರ್ಷಿ ದೇವಲೋಕದಲ್ಲಿ ಸಂಚಾರ ಮಾಡುತ್ತಿದ್ದಾಗ ಅವರ ಮಾತಾ-ಪಿತರಾದ ಹವಿರ್ಭುಕ್ಕು ಹಾಗೂ ಬ್ರಹ್ಮರ್ಷಿ ಪುಲಸ್ತ್ಯ ರು

ನತೋವದನರಾಗಿ ನೇತಾಡುತ್ತಿರುವುದನ್ನು ಕಂಡು ಅದಕ್ಕೆ ಕಾರಣ ಕೇಳಿದಾಗ ಅಗಸ್ತ್ಯರು ಮದುವೆ ಆಗದೆ ವಂಶೋದ್ಧಾರದ ಸಂತತಿ ಇಲ್ಲವಾದ್ದರಿಂದ ಆ ಋಷಿ ದಂಪತಿಗಳು ಮುಕ್ತಿ ದೊರೆಯದೆ ನೇತಾಡುತ್ತಿರುವುದಾಗಿ ತಿಳಿಸಿದರು.

            ಅಂತೆಯೇ, ಮದುವೆಯಾಗಲು ನಿರ್ದರಿಸಿದ

ಅಗಸ್ತ್ಯರು ಲೋಪರಹಿತ ಕನ್ಯೆಯನ್ನು ಸೃಷ್ಟಿಸಿ ವಿದರ್ಭದ ರಾಜನಿಗೆ ಒಪ್ಪಿಸಿದಂತೆ ಕಾಲಾನಂತರ ಯಥಾ ಲಾವಣ್ಯವತಿಯನ್ನು ಅಗಸ್ತ್ಯರಿಗೆ ಕೊಟ್ಟು ಮದುವೆ ಮಾಡುವಂತೆ ತಿಳಿಸಿದರು.

          ಯಥಾ ನಿಬಂಧನೆಯಾನುಸಾರ ವಿದರ್ಭದ ರಾಜ ಕವೇರನ ಸಾಕುಮಗಳಾದ ಲೋಪಾಮುದ್ರೆ ತನ್ನನ್ನು ವಿರಮಿಸಿದ ಆ ಕ್ಷಣದಲ್ಲಿ ತಾನು ನದಿಯಾಗಿ ಹರಿದು ಹೋಗುವುದಾಗಿ ನಿಬಂಧನೆಯಾನುಸಾರ ಅಗಸ್ತ್ಯ ರನ್ನು ವಿವಾಹವಾದಳು.

           ಅಂತೆಯೇ ಒಂದು ದಿನ

ಮುಂಜಾನೆ ಅಗಸ್ತ್ಯರು ತೀರ್ಥದಲ್ಲಿ ಸ್ನಾನಕ್ಕೆ ಹೊರಟವರು ಸಕಾಲದಲ್ಲಿ ಬಾರದಿರಲು ಲೋಪಾಮುದ್ರೆಯು ನದಿಯಾಗಿ ಪ್ರವಹಿಸಿ ತನ್ನ ಸಾಕು ತಂದೆಯ ಹೆಸರಿನ್ನು

ಖ್ಯಾತಿಗೊಳಿಸಲು  ಕಾವೇರಿ

ನದಿಯಾಗಿ ನಮ್ಮ ಹೆಮ್ಮೆಯ ಜೀವನದಿಯಾಗಿರುವುದು ಉಪಾಸನಾರ್ಹ.

ಪ್ರಣಾಮಗಳೊಂದಿಗೆ:

         ಜಿ. ಎಂ. ಆರ್.

ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ.

ಆನೇಕಲ್

* ಅಂದು /ಇಂದು*

 ಅಂದು /ಇಂದು

*********


ಅಂದು ನಾವು ನಮ್ಮದು ಎಂಬ ಭಾವನೆ ಜನರಲ್ಲಿತ್ತು..

ಇಂದು ನಾನು ನನ್ನದು ಎಂಬ ಭಾವನೆ ಜನ ಜನಿತವಾಗಿದೆ.


ಅಂದು ಬದುಕಿನ ಬವಣೆ ನೀಗಿಸಲು ಪರಸ್ಪರ ಸಹಕಾರ

ಮಮಕಾರವಿತ್ತು.

ಇಂದು ಬದುಕಿನ ಬವಣೆಯನ್ನು

ಪ್ರೇರೇಪಿಸುವ ಅಹಂಕಾರದ

ಮರ್ಮವಿಕಾರವಿದೆ


ಅಂದು ಬಳಸಿಕೊಂಡ

ಜನರನ್ನು ಬೆಳೆಸುತ್ತಿದ್ದರು.

ಇಂದು ಜನರನ್ನು ಸ್ವಾರ್ಥಕ್ಕೆ

ಬಳಸಿಕೊಂಡು ಬೀಳಿಸುತ್ತಿದ್ದಾರೆ.


ಅಂದು ಒಬ್ಬರು ಎಲ್ಲರಿಗಾಗಿ

ಎಲ್ಲರೂ ಒಬ್ಬರಿಗಾಗಿದ್ದರು

ಇಂದು ಬಲ್ಲಿದರು ಬಹುಜನರ

ಪೀಡಕರಾಗಿದ್ದಾರೆ


ಅಂದು ಒಬ್ಬ ವ್ಯಕ್ತಿಯ ಬೆಳವಣಿಗೆಗೆ ಪುಷ್ಠೀಕರಿಸುವ

ಜನರಿದ್ದರು.

ಇಂದು ಒಬ್ಬ ವ್ಯಕ್ತಿಯ ಅವಸಾನಕ್ಕೆ ಸಿದ್ದ ಜನರಿದ್ದಾರೆ.


ಅಂದು ಬೆಳೆಸುವವರಿದ್ದರು

ಇಂದು ಮುಗಿಸುವವರಿದ್ದಾರೆ.


ಅಂದು ನಿನಗಾಗಿ ನಾವು ಎಂಬ ಜನರಿದ್ದರು.

ಇಂದು ನಿನಗಾಗಿ ನೀವು & ನಿಮ್ಮ ಶ್ರಮ ಎಂಬ ಜನರಿದ್ದಾರೆ.


ಅಂದು ಸಾಮಾಜಿಕ ಸಾಮರಸ್ಯ

ಸಹಬಾಳ್ವೆ ಇತ್ತು

ಇಂದು ಅಂಜಿಕೆಯ ವಿರಸಕ್ಕೆ

ಬಲು ಮೇಲ್ಮೆ ಇದೆ.


ಅಂದು ಜೀವನಕಲೆಯ ಒಲವು

ಗೆಲುವಿನ ಬಲವಿತ್ತು.

ಇಂದು ಜೀವನ ಕಳೆ, ನೆಲೆ, ಬೆಲೆ

ಮಲೀನವಾಗಿದೆ


ಅಂದು ಜೀವನ ಸುಂದರ ಹಾಗೂ ಮಹದಾನಂದಕರವಾಗಿತ್ತು

ಇಂದು ಜೀವನ ಆಡಂಬರ

ಹಾಗೂ ಆಕ್ರಂದನ ಕಾರಿಯಾಗಿದೆ.


ಅಂದು ನಿರಾಳ ದಿನಗಳು.

ಇಂದು ಕರಾಳ ದಿನಗಳು.


      ಜಿ. ಎಂ. ಆರ್.

ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ.

ಆನೇಕಲ್

:: Treading on the Water ::

 :: Treading on the Water ::

++++++++++++++++++++


I'm Treading on the

                             Water.

Through out my Career.

I know nothing about

                       the Future.

As I had lost my Tenure.


I rendered my unique

service for beneficiars

As they utilised it for

increase the tresure.

They failed to know the

                 it's measure.

I least bothered about

             their favour.


I lost my pleasure of

                           Sleeping.

I missed my chances of

                          Enjoying.

I neglected my system of

                          dining.

I rejected the opportunity

        of illegal Earning.


Hypocritic Society used

             me as the Ladder.

It doesn't care it's Labour.

I keep on serving for ever.

Beneficiar of this turned

                  into a cheater.


I mend my mind.

I bend my body.

I tend my soul

I grind my head to render

my service as Savvy.


Fair is Foul. Foul is Fair.

Itis revolving in Society.

I never knew it earlier.

So, enduring it's Brutality.


                      G. M. R.

Academic Resource Person.         Anekal.

Monday, December 13, 2021

*ಹುತಾತ್ಮ ಸೈನಿಕರಿಗೆ ಸಲಾಂ*

 🌹 ಹುತಾತ್ಮ ಸೈನಿಕರಿಗೆ ಸಲಾಂ 🌹


ಓ ನನ್ನ ಹುತಾತ್ಮ ಸೈನಿಕ.

ನೀನು ದೇಶಭಕ್ತಿಗೆ ಪ್ರೇರಕ

ನಾನು ನಿನ್ನ ಆದರ್ಶಾರಾಧಕ

ಅದುವೇ ನನ್ನ ಬದುಕಿಗೆ ತಾರಕ.


ನಿನ್ನ ದೇಶ ಭಕ್ತಿಯ ಮಿಡಿತ

ಶತೃ ರಾಷ್ಟ್ರಕ್ಕೆ ಎದೆ ಬಡಿತ

ನಿನ್ನ ಸೇವಾತತ್ಪರತೆಯ ಒಲವು

ನಮ್ಮ ರಾಷ್ಟ್ರಭದ್ರತೆಗೆ ಸೆಳೆವು


ನಿನ್ನ ತೀಕ್ಷ್ಣ ಸೇವೆಯ ಆಸರೆ

ಭವ್ಯ ಭಾರತದ ದಿವ್ಯ ಪರಂಪರೆ

ನಿನ್ನ ದೇಶ ಭಕ್ತಿಯ ಉದ್ಗಾರ

ನನ್ನ ಯುಕ್ತ ಬದುಕಿನ ಸ್ವೀಕಾರ


ನಿನ್ನ ಸಾತ್ವಿಕ ಜೀವನ ಸಂದೇಶ

ನವಯುವಪುಂಜಕ್ಕೆ ಉಪದೇಶ

ನಿನ್ನ ದೇಶ ಭಕ್ತಿಯ ಸಾಕಾರ

ನನ್ನ ರಾಷ್ಟ್ರೀಯತೆಗೆ ಜೈಕಾರ


ನಿನ್ನ ದೇಶ ಸೇವಾ ತಾಳ್ಮೆ

ನನ್ನ ಮುಕ್ತ ಬಾಳ್ವೆಯ ಮೇಲ್ಮೆ

ನಿನ್ನ ಹಂಬಲ ನನಗೆ ಬೆಂಬಲ

ನಿನ್ನ ಛಲದಫಲ ನನ್ನ ಪ್ರಜ್ವಲ


ನಿನ್ನ ದೇಶ ಭಕ್ತಿಯ ಒಲವೆ

ನನ್ನಯ ಉಳಿವಿಗೆ ಬಲವು

ನಿನ್ನ ದೇಶಹಿತದ ತಾರಕ

ನನ್ನ ಉಲ್ಲಾಸಕ್ಕೆ ಪೂರಕ


ಭಾರತದ ಅಣು-ರೇಣು ನಮ್ಮೊಡಲ ಪರಮಾಣು

ಆ ಧಮನೀಯ ನೆತ್ತರು ಈ ಪುಣ್ಯ ಭೂಮಿಯ ತಿಳಿನೀರು

ಎಂಬುದು ನಿನ್ನ ಮನಮಿಡಿತ


ಭಾರತೀಯರೆಲ್ಲಾ ನಗುತಿರಲಿ

ಮನುಕುಲದ ಅಳಲು ನನಗಿರಲಿ ಎಂಬುದು ನಿನ್ನ ಸತ್ವಯುತ ತತ್ವ.


ಈ ನಿನ್ನ ಅಮೂಲ್ಯ ಆದರ್ಶ

ನನ್ನನ್ನು ಪ್ರೇರೇಪಿಸಿ ರೂಪಿಸಿತು

ನಿನ್ನ ಶಾಶ್ವಿತ ಮೌನದಮುಸುಕು

ನನ್ನ ಮನೋವೇದನೆಗೆ  ತಳಕು


ನಿನ್ನ ರಕ್ಷಣಾ ಸೇವೆಯ ಮೆಲುಕು

ನಿತ್ಯ ಸತ್ಯ ಚಿರಂತನ ಪಲುಕು

ನಿನ್ನ ದೇಶ ಭಕ್ತಿಯನಿಷ್ಠೆ ಅಪಾರ

ನಿನ್ನ ಹುತಾತ್ಮತೆ ಸದಾ ಅಮರ.


     ಜೈ ಅಮರ್ ಜವಾನ್

🌹🙏🙏🙏🙏🙏🙏🙏🙏🙏🌹.


ಹುತಾತ್ಮ ಸೈನಿಕರಿಗೆ ಸಲಾಂ..

ಪ್ರಣಾಮಗಳೊಂದಿಗೆ:

          ಜಿ. ಎಂ. ಆರ್.

ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ.

ಆನೇಕಲ್.

*ಜ್ಞಾನೋದ್ದೀಪನ *

 *ಜ್ಞಾನೋದ್ದೀಪನ *

×××××××××××××××××××××


:ಅವಿವೇಕದ   ಪರಮಾವಧಿ :

++++++++++++++++++++


        ಆತ್ಮೀಯ ಬಂಧು_ಭಗಿನಿಯರೇ,

                 ತಮ್ಮ ಆತ್ಮಾವಲೋಕನಪೂರ್ವಕ ಯೋಚನಾಲಹರಿಗಾಗಿ :

ನಾವು ಮಾನವಧರ್ಮ ಪಥವನ್ನೇಕೆ ಧಿಕ್ಕರಿಸಿದ್ದೇವೆ?


ನಮಗೆ ಹಣ ಬೇಕು! ಗುಣಬೇಢ!


ನಮಗೆ ದುಡ್ಡುಬೇಕು! ಶಾಂತಿ ಬೇಡ!


ನಮಗೆ ದುಡ್ಡುಬೇಕು! ಸುಖ ಬೇಡ!


ನಮಗೆ ನಿಧಿ ಬೇಕು!

 ನೀತಿ - ನಿಯತ್ತು ಬೇಡ!


ನಮಗೆ ಧನ ಬೇಕು! ಧರ್ಮ ಬೇಡ!


ನಮಗೆ ಸಂಪತ್ತು ಬೇಕು!

ಸಮಾಧಾನ ಬೇಡ!


ನಮಗೆ ಮೊಬಲಗಿನ ಮೊತ್ತ ಬೇಕು!

ಮನೋಮೌಲ್ಯ ಬೇಡ!


ನಮಗೆ ವಿತ್ತ ಬೇಕು! ವಿಚಾರ ಬೇಡ!


ನಮಗೆ ಅಧಿಕಾರ ಬೇಕು!

ಜನಾಭಿವೃದ್ಧಿ ಬೇಡ!


ನಮಗೆ ಸನ್ಮಾನ ಬೇಕು!

      ಸಂಸ್ಕಾರ ಬೇಡ!


ಅಂತೆಯೇ,

               ನಮಗೆ ಮೂಗು ಕೊಟ್ಟ ದೇವರು ಬೇಡ!

ಆದರೆ,

         ಮೂಗುತಿ ಕೊಡುವ ದೇವರು ಬೇಕು!


ಇದೆಂಥಾ ವಿಪರ್ಯಾಸ ಸ್ವಾಮಿ?


ಪ್ರಣಾಮಗಳೊಂದಿಗೆ :

                   ಜಿ. ಎಂ. ಆರ್.

ಆನೇಕಲ್

Tuesday, December 7, 2021

ಓಂ ಕಾರ ನಾದವೇ ಸೃಷ್ಟಿಯ ಮೂಲ

 ಓಂ ಕಾರ ನಾದವೇ ಸೃಷ್ಟಿಯ ಮೂಲ.

*********


ಜಗವೆಲ್ಲಾ ಶೂನ್ಯ ಆವರಿಸಿ, ಚರಾಚರವೆಲ್ಲ ಮೌನಕ್ಕೆ ಶರಣಾಗಿದ್ದಾಗ ಆಕಾಶ - ಭೂಮಿಯ ನಡುವೆ ಆಕಾರವಿಲ್ಲದ ದೈವ ಶಕ್ತಿಯೊಂದು ನಾದದ ಎಳೆಯನ್ನು ಮೀಟುತ್ತಿರಲು ಓಂ ಕಾರದ ನಾದವು ಇಡೀ ಲೋಕವನ್ನೆ ಆವರಿಸಿತು.

ಏಳು ತಂತಿಗಳು ಮಿಡಿದ ನಾದೋಪಾಸನೆಯಿಂದ ಸಪ್ತ ಸ್ವರಗಳು ಸೃಷ್ಟಿಯಾಗಿದೆ.

ಅಂತೆಯೇ, ಆ ಏಳು ಸ್ವರಗಳ ನಾದದಿಂದ ಏಳು ಲೋಕಗಳು ಸೃಷ್ಟಿಯಾಗಿದೆ.

ಓಂ ಕಾರ ಶಕ್ತಿಯು ಜಗವೆಲ್ಲಾ ತುಂಬಿದಂತೆ ಸಮಸ್ತ ಜೀವ ಸಂಕುಲಕ್ಕೆ ಪ್ರಾಣ ಶಕ್ತಿ ಪ್ರಾಪ್ತವಾಗಿದೆ.

ತ್ರಿಮೂರ್ತಿ ಸ್ವರೂಪಿ ಓಂ ಕಾರವೇ ದೇವರ ಆಕಾರ.

ಪ್ರಕೃತಿಯಲ್ಲಿ ಪಂಚಭೂತಗಳೊಂದಿಗೆ ಓಂ

ಕಾರ ಮಿಲನವಾದಂತೆ ಸಂಗೀತ ಕ್ಷೇತ್ರಕ್ಕೆ ನಾನಾ ರಾಗಗಳು ಪ್ರಾಪ್ತವಾಗಿರುವುದೂ ಸಹ ಸೃಷ್ಟಿಯ ಮೂಲವೆ ಆಗಿದೆ.

          ಓಂ ಕಾರ ನಾದದ ಝೇಂಕಾರವು ಮನುಕುಲದ ಮಮಕಾರವಾಗಿದ್ದು ಯಥಾ ಪ್ರಣವ ಸ್ವರ ನಾದೋಪಾಸನೆಯ ಭಕ್ತಿಯೆ ಮುಕ್ತಿಗೆ ಶಕ್ತಿ ಎಂಬುದನ್ನು ಅರಿತು ಅಧ್ಯಾತ್ಮಿಕ ಅನುಸಂಧಾನ ಹೊಂದುವುದು ಯುಕ್ತ.

ಪ್ರಣಾಮಗಳೊಂದಿಗೆ:

       ಜಿ. ಎಂ. ಆರ್.

ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ.

ಆನೇಕಲ್.

Friday, November 26, 2021

Dr.GMR inspiring words about Astonishment of Awareness 6

 Astonishment of Awareness

*********


Rathnaavali w/o Thulasidasa Transformed his infatuation on her into the deep devotion about Lord Shree Raama and ignited his insight.

So, India Transformed to realised the deep Spirituality and devotion is the power for Salvation

through the Thulasi Raamaayana and Shree Hanumaan Chaalis.


Vidhyaadhare, Princess of Ujjaini and w/o Kaalidaasa Transformed him to Kavi Rathna Kaalidaasa by inspiration and persuasion to get the boon of Wisdom from Kaalikaambha.

So, Indianity Transformed with his Spiritual Literary work of Abhijnaana Shaakunthala, Meghadootha and Kumaara Sambhava.

With Pranaams:

         G. M. R.

Academic Resource Person. Anekal

Dr.GMR Gold words about Astonishment of Awareness 5

 Astonishment of Awareness


Thimmappa Nayaka Transformed into Kanakadaasa.

      So, India Transformed to realised the Spirituality, equality and divinity through his devotional Revolution.


Shreemathi Saavithribaai Phule Transformed into the first Female Teacher and taught for the Children of downtrodden class of the Society.

      So, India Transformed to realised the importance of Education for Classes and masses for the enlightenment and self sustainability.

       With Pranaams:

            Dr:G.M.R.

Academic Resource Person. Anekal.

Dr.GMR inspiring words about Astonishment of Awareness 4

 Astonishment of Awareness

*********


Vishnu Guptha / Kautilya

Transformed into Chaanakya.

    So, India Transformed

by the Mauryan Empire with his directions and Artha Shaasthra.


The Father of Modern India Mohana Roy Transformed into Raajaa Raam Mohan Roy.

      So, India Transformed to realised Superstitious beliefs and turned towards the Modernity.

With Pranaams :

          Dr:G.M.R.

Academic Resource Person. Anekal

Dr.GMR Gold words about Astonishment of Awareness 3

 Astonishment of Awareness

*********


The Forest way robber Rathnaakara had been realised his dacoit deeds by Sage Naarada and Transformed into Vaalmeeki.

So, Indianity Transformed with his Spiritual Literary work of Epic Raamaayana.


Poor and illiterate weaver Kabeer had been Transformed into a Saint Kabeer daasa by the grace of Swaami Ramaananda.

So, India Transformed into a universal path for both Hindus and Muslims by bhakthi and sufi ideas.

With Pranaams :

         Dr:G.M.R.

Academic Resource Person. Anekal

Dr.GMR inspiring words about Astonishment of Awareness 2

 Astonishment of Awareness

********


Siddhaartha Transformed into Gauthama Buddha and Preached Mankind Values.

So, India Transformed and embraced the Compassion as Human Value.


Raveendra Naath Tagore Transformed into Gurudev R. N. Tagore.

So, India Transformed to realised the INDIANITY and Patriotism.

With Pranaams:

       Dr:G.M.R.

Academic Resource Person. Anekal

Dr.GMR Gold words about Astonishment of Awareness 1

 Astonishment of

                  Awareness

*********


My dear Visionary Thinkers,

        The continuous and comprehensive Change is the rule of the Universe.

So, It is need of the hour for us to keenly consider the Transformation of INDIA by the Transformers

Pertaining to this I have decided to share about it with you through the caption of Astonishment of Awareness in daily Series.


Action without Vision is Confusion.

Vision without Action is

Imagination.

            So,

Vision with Action is the

Transformation.


Who were those Transformers of India?


How did they Transform of our Mother Land India?


.............. Next serie. !


With Pranaams :

            Dr:G.M.R.

Academic Resource Person. Anekal

ನಮ್ಮ ನಾಡಿನ ಸಮಸ್ತ ಬಂಧು_ಭಗಿನಿಯರಿಗೂ ವಿಜಯ ದಶಮಿ ( ದಸರಾ) ಹಬ್ಬದ ಶುಭಾಶಯಗಳು.

 ನಮ್ಮ ನಾಡಿನ ಸಮಸ್ತ ಬಂಧು_ಭಗಿನಿಯರಿಗೂ ವಿಜಯ ದಶಮಿ ( ದಸರಾ) ಹಬ್ಬದ ಶುಭಾಶಯಗಳು.


     ನಿಮ್ಮ ಯಶಸ್ಸಿನ ಗುರಿಯ ಕಡೆಗೆ ಸಾಗುವ ಹಾದಿಯಲ್ಲಿ ನವರಾತ್ರಿ ಅಧಿದೇವತೆ _ನವನವೋನ್ಮೇಷಶಾಲಿನಿ ಶಕ್ತಿ ಸ್ವರೂಪಿಣಿ. ತೇಜೋಸ್ವರೂಪಿಣಿ. ಸಂಪತ್ ಸ್ವರೂಪಿಣಿ. ಅಸುರ ಸಂಹಾರಿಣಿ

ಶ್ರೀ ದುರ್ಗಾದೇವಿಯ ಅನುಗ್ರಹ ಸದಾ ನಿಮಗೆ ಇರಲೆಂದು ಹಾರೈಸುತ್ತೇನೆ.

ಯಾ ದೇವಿ ಸರ್ವ ಭೂತೇಷು ಮಾತೃ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮ:


ಶುಭಾರೈಕೆಗಳೊಂದಿಗೆ :

              ಡಾ:ಜಿ. ಎಂ. ಆರ್.

ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ.

ಆನೇಕಲ್.

*ಶ್ರೀ ನವ ದುರ್ಗಾ ಉಪಾಸನೆ & ಮನಸ್ಥಿತಿ*

 🕉️ಶ್ರೀ ನವ ದುರ್ಗಾ ಉಪಾಸನೆ &  ಮನಸ್ಥಿತಿ🕉️


ಜಗಜ್ಜನನಿ ದುರ್ಗಾದೇವಿಯ ಶ್ರದ್ಧಾಭಕ್ತಿಪೂರ್ವಕ ಉಪಾಸನೆಯೊಂದಿಗೆ ಯೋಗಿವರೇಣ್ಯರು ತಮ್ಮ ಮನಸ್ಸನ್ನು ನೆಲೆಗೊಳಿಸುವ ಸಪ್ತ ಚಕ್ರಗಳ ವಿವರ ಇಂತಿದೆ:


1. ಶ್ರೀ ಶೈಲಪುತ್ರಿ ಆರಾಧನಾ ಯೋಗಿವರೇಣ್ಯರು ತಮ್ಮ ಮನಸ್ಸನ್ನು ಮೂಲಾಧಾರ ಚಕ್ರದಲ್ಲಿ ನೆಲೆಗೊಳಿಸುತ್ತಾರೆ.


2. ಶ್ರೀ ಬ್ರಹ್ಮಚಾರಿಣಿ ಉಪಾಸನಾ ಯೋಗಿವರೇಣ್ಯರು ತಮ್ಮ ಮನಸ್ಸನ್ನು ಸ್ವಾಧಿಷ್ಠಾನ ಚಕ್ರದಲ್ಲಿ ನೆಲೆಗೊಳಿಸುತ್ತಾರೆ.


3.ಶ್ರೀ ಚಂದ್ರಘಂಟಾದೇವಿ ಆರಾಧನಾ ನಿರತ ಯೋಗಿವರೇಣ್ಯರು ತಮ್ಮ ಮನಸ್ಸನ್ನು ಮಣಿಪೂರ ಚಕ್ರದಲ್ಲಿ ನೆಲೆಗೊಳಿಸುತ್ತಾರೆ.


4.ಶ್ರೀ ಕೂಷ್ಮಾಂಡದೇವಿ ಉಪಾಸನೆಯ ಯೋಗಿವರೇಣ್ಯರು ತಮ್ಮ ಮನಸ್ಸನ್ನು ಅನಾಹತ ಚಕ್ರದಲ್ಲಿ ನೆಲೆಗೊಳಿಸುತ್ತಾರೆ.


5.ಸ್ಕಂದಮಾತಾ ಆರಾಧನಾ ಯೋಗಿವರೇಣ್ಯರು ತಮ್ಮ ಮನಸ್ಸನ್ನು ವಿಶುದ್ಧ ಚಕ್ರದಲ್ಲಿ ನೆಲೆಗೊಳಿಸುತ್ತಾರೆ.


6.ಶ್ರೀ ಕಾತ್ಯಾಯನೀದೇವಿ ಉಪಾಸನಾ ಯೋಗಿವರೇಣ್ಯರು ತಮ್ಮ ಮನಸ್ಸನ್ನು ಆಜ್ಞಾ ಚಕ್ರದಲ್ಲಿ ನೆಲೆಗೊಳಿಸುತ್ತಾರೆ.


7.ಶ್ರೀ ಕಾಲರಾತ್ರಿದೇವಿ ಆರಾಧನಾ ಯೋಗಿವರೇಣ್ಯರು ತಮ್ಮ ಮನಸ್ಸನ್ನು ಸಹಸ್ರಾರ

ಚಕ್ರದಲ್ಲಿ ನೆಲೆಗೊಳಿಸುತ್ತಾರೆ.


✡️ಯಾ ದೇವಿ ಸರ್ವ ಭೂತೇಷು ಮಾತೃ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮ:✡️

ಭಕ್ತಿ ಪೂರ್ವಕ ಪ್ರಣಾಮಗಳೊಂದಿಗೆ:

         ಜಿ. ಎಂ. ಆರ್.

ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ.

ಆನೇಕಲ್.

ಸೊರಗುತ್ತಿರುವ ಮಾನವೀಯತೆಯ ಮಹಿಮೆ

 ಸೊರಗುತ್ತಿರುವ ಮಾನವೀಯತೆಯ ಮಹಿಮೆ


*ಇದು ಕಲಿಗಾಲ - - ಆವರಿಸಿದೆ ಮಾಯಾಜಾಲ.


*ಸರ್ವವ್ಯಾಪಿಯಾಗಿದೆ - - ಹಾಲಾಹಲಾ.


*ಸರ್ವರಲ್ಲೂ - ಕೋಲಾಹಲ


*ಸಮಾಜವೆಲ್ಲಾ - ಅಲ್ಲೋಲ - ಕಲ್ಲೋಲ.


*ಹಣದಾಸೆ - ಹೆಚ್ಚಾಯ್ತು


*ಅಧಿಕಾರದಾಸೆ - ಅಧಿಕವಾಯ್ತು


*ಅಕ್ರಮ ಗಳಿಕೆಯ ಅಟ್ಟಹಾಸ

--- ಹುಚ್ಚಾಯ್ತು


*ಪಾಶವೀಕೃತ್ಯಗಳು - ಹೇರಳವಾಯ್ತು


*ಆದರ್ಶ - - ಅಳಿದೋಯ್ತು


*ತತ್ವ ಪಾಲನೆ ಕಮರಿ - - ಪೆಚ್ಚಾಯ್ತು


*ಜೀವನದ ಮೌಲ್ಯಗಳು - - ಸತ್ತೋಯ್ತು


*ಮುಖವಾಡ - ಮರ್ಧಿಸಿತು


*ಮಾಡಬಾರದ್ದು - - ಮಾಡಾಯ್ತು


*ಆಗಬಾರದ್ದು - - ಆಗಾಯ್ತು


*ಮನುಷತ್ವ - - ಕರಗೋಯ್ತು


*ಜಗವೇ ಸ್ವಾರ್ಥಿಗಳ ಸಂತೆ - -

     ನಿಮಗೇಕೆ ಮತ್ತೊಬ್ಬರ

      ಚಿಂತೆ ಎಂಬುವರ ಸಂಖ್ಯೆ - -

           - - ಹೆಚ್ಚಾಯ್ತು.

ಇನ್ನು ಸಮಾಜದ ಭವಿಷ್ಯ ಏನಾಗಬಹುದು?

ಇದು ನನ್ನ ಕೌತುಕ ಹಾಗೂ ಆತಂಕ.

               ಜಿ. ಎಂ. ಆರ್.

ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ.

ಆನೇಕಲ್.

Dr.GMR Golden worlds about rama nama

  ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೆ ಸಹಸ್ರ ನಾಮ ತತ್ತುಲ್ಯಂ ರಾಮನಾಮ ವರಾನನೆ 🕉️


   ಸಕಲ ಜೀವ ಸಂಕುಲದ ಪಾಲನ ಕರ್ತೃವಾದ ಆ ದಯಾಮಯ ಭಗವಂತ ಶ್ರೀ ವಿಷ್ಣು ಹಾಗೂ ದುಷ್ಠಶಕ್ತಿ ಲಯ ಕರ್ತೃವಾದ ಮಹಾಶಿವನ ದ್ವಿನಾಮ ಸಮ್ಮಿಳಿತ ರಾಮ ನಾಮ ತಾರಕ ಮಂತ್ರೋಚ್ಛಾರ ಹಾಗೂ ಶ್ರೀ ರಾಮ ನಾಮ ಕೋಟಿ ಲೇಖನ ಮನುಕುಲ ಜನ್ಮದ ಸಾತ್ವಿಕ-ಸಾರ್ಥಕತೆಗೆ ಪಾವನ.


ನಲಿವಿನ ಹೊನಲು ಮನುಜನ ಬಾಳೆಲ್ಲಾ ಮೊಳಗಿ ಬೆಳಗಲು ಶ್ರೀ ರಾಮ ನಾಮ ಮಹಿಮೆಯ ಸಾರಸುಧೆಯೆಲ್ಲಾ.

        ಯಥಾನುಸಾರ ಇಂದಿನ ಈ ಶುಭ ಸಂಧ್ಯಾ ವೇಳೆಗೆ ನನ್ನ ಸಂಕಲ್ಪಿತ ಭಗವನ್ನಾಮೋಪಾಸನಾಯುಕ್ತ

ಶ್ರೀ ರಾಮ ಕೋಟಿ ನಾಮ ಲೇಖನ ದೈವಾನುಗ್ರಹದಿಂದ

ಸುಸಂಪನ್ನವಾಗಿ ಪೂರ್ಣವಾಗಿದೆ.

ಇಂತಹ ದೈವೋಪಾಸನ ಪೂರ್ವಕ - ಆತ್ಮೋಲ್ಲಾಸದಾಯಕ ಸಂತಸವನ್ನು ಸದ್ಭಕ್ತರಾದ ತಮ್ಮಲ್ಲಿ ಭಕ್ತಿಪೂರ್ವಕವಾಗಿ ಹಂಚಿಕೊಳ್ಳಲು ಬಯಸುತ್ತೇನೆ.

ಶ್ರೀ ರಾಮ ನಾಮ ತಾರಕಂ

    ಭಕ್ತಿ-ಮುಕ್ತಿದಾಯಕಂ

🕉️🙏🙏🙏🙏🙏🕉️

Sunday, September 29, 2019

Dr. GMR Inspirational Speeches in Different Events

Dr. GMR Inspirational Speeches in Different Events






DR.GMR Speech In MES Institutions



*ಗುಣಾತ್ಮಕ ಶಿಕ್ಷಣದ ವಿನಾಶವ ವೇ ರಾಷ್ಟ್ರದ ವಿನಾಶ. *


*ಗುಣಾತ್ಮಕ ಶಿಕ್ಷಣದ ವಿನಾಶವ
ವೇ  ರಾಷ್ಟ್ರದ  ವಿನಾಶ. *
++++++++++++++++++++

                  ಯಾವುದೇ ಒಂದು ರಾಷ್ಟ್ರದ ನಾಶಕ್ಕೆ ಅಣುಬಾಂಬ್
ಅಥವಾ ಬೃಹತ್ ಗಾತ್ರದ ಕ್ಷಿಪಣಿಗಳ ಬಳಕೆ ಅಗತ್ಯವಿರುವುದಿಲ್ಲ. ಬದಲಾಗಿ ಗುಣಾತ್ಮಕ ಶಿಕ್ಷಣವನ್ನು ಕೆಳಮಟ್ಠಕ್ಕೆ ಇಳಿಸುವುದರೊಂದಿಗೆ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ನಕಲು ಮಾಡಿ ಮೋಸಮಾಡಲು ಅನುವಾಗಿಸುವುದೊಂದೇ ಸಾಕು. (ಮಹಾಮಾನವತಾವಾದಿಯಾಗಿದ್ಧ ನೆಲ್ಸನ್ ಮಂಡೇಲಾ ರವರ
ಪ್ರಖ್ಯಾತ ಹೇಳಿಕೆ.)

ರಾಷ್ಟ್ರದ ಸರ್ವೋನ್ನತಿಯ  ಸಾಧಕ _ಬಾಧಕಗಳು ಆ ರಾಷ್ಟ್ರದಲ್ಲಿ ದೊರೆಯುವ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಅವಲಂಬಿಸಿರುತ್ತದೆ.

ಡೋಂಗಿ/ಅರೆಬುದ್ಧಿಯ ವೈಧ್ಯರ ಕೈಯಲ್ಲಿ ಸಾಯುವ ರೋಗಿಗಳನ್ನು, ಸ್ಪುಟವಾಗದ/ಸಂದೇಹಾಸ್ಪದವಾದ ಸ್ತಪತಿಗಳ
ಯೋಜನೆ ನಿರ್ಮಿಸಿದ ಕಟ್ಟಡಗಳು ಉರುಳುವ ಅಪಾಯವನ್ನು, ಅಪ್ರಾಮಾಣಿಕ ಬ್ಯಾಂಕ್ ಅಧಿಕಾರಿಗಳು, ಆರ್ಥಿಕ ತಜ್ಞರು. & ಲೆಕ್ಕಾಧಿಕಾರಿಗಳಿಂದ ಸೋರಿಕೆಯಾಗುವಂತಹ ಸಾರ್ವಜನಿಕರ ಹಣ, ಮಿಥ್ಯ /ಕಲ್ಪಿತ ಧಾರ್ಮಿಕ ವಿಧ್ವಾಂಸರ ಕೈಯಲ್ಲಿ ಹತ್ಯೆಯಾಗುತ್ತಿರುವ
ಮಾನವೀಯತೆ, ಭ್ರಷ್ಟ ಪೋಲೀಸ್ ಪಡೆಯಿಂದ ಕ್ಷೀಣಿಸುತ್ತಿರುವ ಕಾನೂನು & ಸುವ್ಯವಸ್ಥೆ. ಹಾಗೂ ಭ್ರಷ್ಠ ನ್ಯಾಯಮೂರ್ತಿಗಳ ಕೈಯಿಂದ ಕಣ್ಮರೆಯಾಗುತ್ತಿರುವ ನಿಷ್ಪಕ್ಷಪಾತವಾದ ನ್ಯಾಯವನ್ನು ನಿಗ್ರಹಿಸುವ ಸಲುವಾಗಿ ಶೀಲಸಂವರ್ಧಿಸುವ. ರಾಷ್ಟ ನಿರ್ಮಾಣ ಮಾಡುವಂತಹ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡುವ ಅನಿವಾರ್ಯತೆಯ 
ತೀವ್ರತೆ ಇದೆ. ಆದರೆ, ಪ್ರಸ್ತುತ ಲಭಿಸುತ್ತಿರುವ ಭೂಷಣ ರೂಪದ ಶಿಕ್ಷಣ ವ್ಯವಸ್ಥೆಯೇ
ರಾಷ್ಟ್ರವನ್ನು ವಿನಾಶದೆಡೆಗೆ ನೂಕುತ್ತಿರುವುದು ಶೋಚನೀಯ ಸಂಗತಿ ಆಗಿದೆ.

ಪ್ರಸ್ತುತ ನಮ್ಮ ಶಿಕ್ಷಣ ವ್ಯವಸ್ಥೆ ಪದವಿ /ಯೋಗ್ಯತಾ ಪತ್ರಗಳನ್ನು ನೀಡುತ್ತಿದೆಯೇ ಹೊರತು ಯೋಗ್ಯತೆಯನ್ನು ಪುಷ್ಟೀಕರಿಸುತ್ತಿಲ್ಲ.

ಪ್ರಸ್ತುತವಾಗಿರುವ ನಮ್ಮ ಡೋಂಗಿ ಶಿಕ್ಷಣ ವ್ಯವಸ್ಥೆ ಪರೀಕ್ಷೆ
ಗಳ ಕೇಂದ್ರಿತ ಶಿಕ್ಷಣ ಮತ್ತು ಅಂಕಗಳನ್ನು ಆಧರಿಸಿರುವ ಪರೀಕ್ಷೆಗಳಿಗೆ ಮಾತ್ರ ಸೀಮಿತವಾಗಿದೆಯೇ ಹೊರತು ಫಲಪ್ರಧಾಯಕ. ಪರಿಣಾಮಕಾರಿ. ಸೃಜನಶೀಲ.
ಶೀಲಸಂವರ್ಧಿಸುವ. ಮಾನವೀಯ ಮೌಲ್ಯಗಳನ್ನು ಅನುಸರಿಸುವಂತಹ ದೂರದೃಷ್ಟಿಯುಳ್ಳ ಶಿಕ್ಷಣ ಪೂರೈಕೆಯನ್ನು ಮೌಢ್ಯತೆಯಿಂದ ತಿರಸ್ಕರಿಸಿದೆ.

ಇಂದು ನಾವು ಹೇಗೆ & ಏನಾಗಿದ್ದೇವೆಯೋ? ಅದು ಹಿಂದೆ ನಾವು ಪಡೆದಿರುವ ಗುಣಾತ್ಮಕ ಶಿಕ್ಷಣದ ಪ್ರತಿಫಲವೇ ಆಗಿದೆ.
ಆದರೆ, ಇಂದಿನ ಶಿಕ್ಷಣ ಸಾಗುತ್ತಿರುವ ಹಾದಿಯ ಭವಿಷ್ಯ...........?

ಪ್ರಣಾಮಗಳೊಂದಿಗೆ :
 ಜಿ. ಎಂ. ಆರ್.
ಆನೇಕಲ್.

The collapse of Education is the Collapse of Nation :


The collapse of Education is
the Collapse of Nation :
*********

          Destroying any Nation does not require the use of the Atomic bombs or the long range Missiles. It requires only
lowering the Quality of Education & allowing cheating in the Examination by the students. (Efficacious & Eternal statement of the
Humanist NELSON MANDELA.)

Possibility & Impossibility of all round Development of the Nation is depending on the Quality of Education
availed in the Nation.

Qualitative, Efficacious and Effective Education is need of the hour in order to avoid the death of patients in the hands of Quack and Fake Doctors, Collapse of buildings at the hands of
Dubious Engineers, Leakage of money in the hands of dishonest Bankers. Economists &
Accountants, Humanity assassinates at the hands of pseudo Religious Scholars, Law&
Order determinates at the hands of Corrupted Police force. So, Justice
diminishes at the hands of Corrupted Judges. But
Education collapse the Nation by the Ornamental system of Education while neglecting the Efficacious Instrumental system of Education.

The present System of our Education is providing Marks Cards and Degree Certificates But not the Humanity, Quality, Gratitude, Attitude, Efficiency and Proficiency.

This dubious system of Education confines only to the process of Examinations oriented Education and Marks oriented Examinations.
So, Nobody is aware & caring the future Prosperity of our Nation.

What are We today? It is the outcome of the Education which We got in the Past.
The plight of the Future...?

With my Pranaams :
G. M. R.
Anekal.