Friday, November 26, 2021

ಸೊರಗುತ್ತಿರುವ ಮಾನವೀಯತೆಯ ಮಹಿಮೆ

 ಸೊರಗುತ್ತಿರುವ ಮಾನವೀಯತೆಯ ಮಹಿಮೆ


*ಇದು ಕಲಿಗಾಲ - - ಆವರಿಸಿದೆ ಮಾಯಾಜಾಲ.


*ಸರ್ವವ್ಯಾಪಿಯಾಗಿದೆ - - ಹಾಲಾಹಲಾ.


*ಸರ್ವರಲ್ಲೂ - ಕೋಲಾಹಲ


*ಸಮಾಜವೆಲ್ಲಾ - ಅಲ್ಲೋಲ - ಕಲ್ಲೋಲ.


*ಹಣದಾಸೆ - ಹೆಚ್ಚಾಯ್ತು


*ಅಧಿಕಾರದಾಸೆ - ಅಧಿಕವಾಯ್ತು


*ಅಕ್ರಮ ಗಳಿಕೆಯ ಅಟ್ಟಹಾಸ

--- ಹುಚ್ಚಾಯ್ತು


*ಪಾಶವೀಕೃತ್ಯಗಳು - ಹೇರಳವಾಯ್ತು


*ಆದರ್ಶ - - ಅಳಿದೋಯ್ತು


*ತತ್ವ ಪಾಲನೆ ಕಮರಿ - - ಪೆಚ್ಚಾಯ್ತು


*ಜೀವನದ ಮೌಲ್ಯಗಳು - - ಸತ್ತೋಯ್ತು


*ಮುಖವಾಡ - ಮರ್ಧಿಸಿತು


*ಮಾಡಬಾರದ್ದು - - ಮಾಡಾಯ್ತು


*ಆಗಬಾರದ್ದು - - ಆಗಾಯ್ತು


*ಮನುಷತ್ವ - - ಕರಗೋಯ್ತು


*ಜಗವೇ ಸ್ವಾರ್ಥಿಗಳ ಸಂತೆ - -

     ನಿಮಗೇಕೆ ಮತ್ತೊಬ್ಬರ

      ಚಿಂತೆ ಎಂಬುವರ ಸಂಖ್ಯೆ - -

           - - ಹೆಚ್ಚಾಯ್ತು.

ಇನ್ನು ಸಮಾಜದ ಭವಿಷ್ಯ ಏನಾಗಬಹುದು?

ಇದು ನನ್ನ ಕೌತುಕ ಹಾಗೂ ಆತಂಕ.

               ಜಿ. ಎಂ. ಆರ್.

ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ.

ಆನೇಕಲ್.

No comments:

Post a Comment