Monday, December 13, 2021

*ಹುತಾತ್ಮ ಸೈನಿಕರಿಗೆ ಸಲಾಂ*

 🌹 ಹುತಾತ್ಮ ಸೈನಿಕರಿಗೆ ಸಲಾಂ 🌹


ಓ ನನ್ನ ಹುತಾತ್ಮ ಸೈನಿಕ.

ನೀನು ದೇಶಭಕ್ತಿಗೆ ಪ್ರೇರಕ

ನಾನು ನಿನ್ನ ಆದರ್ಶಾರಾಧಕ

ಅದುವೇ ನನ್ನ ಬದುಕಿಗೆ ತಾರಕ.


ನಿನ್ನ ದೇಶ ಭಕ್ತಿಯ ಮಿಡಿತ

ಶತೃ ರಾಷ್ಟ್ರಕ್ಕೆ ಎದೆ ಬಡಿತ

ನಿನ್ನ ಸೇವಾತತ್ಪರತೆಯ ಒಲವು

ನಮ್ಮ ರಾಷ್ಟ್ರಭದ್ರತೆಗೆ ಸೆಳೆವು


ನಿನ್ನ ತೀಕ್ಷ್ಣ ಸೇವೆಯ ಆಸರೆ

ಭವ್ಯ ಭಾರತದ ದಿವ್ಯ ಪರಂಪರೆ

ನಿನ್ನ ದೇಶ ಭಕ್ತಿಯ ಉದ್ಗಾರ

ನನ್ನ ಯುಕ್ತ ಬದುಕಿನ ಸ್ವೀಕಾರ


ನಿನ್ನ ಸಾತ್ವಿಕ ಜೀವನ ಸಂದೇಶ

ನವಯುವಪುಂಜಕ್ಕೆ ಉಪದೇಶ

ನಿನ್ನ ದೇಶ ಭಕ್ತಿಯ ಸಾಕಾರ

ನನ್ನ ರಾಷ್ಟ್ರೀಯತೆಗೆ ಜೈಕಾರ


ನಿನ್ನ ದೇಶ ಸೇವಾ ತಾಳ್ಮೆ

ನನ್ನ ಮುಕ್ತ ಬಾಳ್ವೆಯ ಮೇಲ್ಮೆ

ನಿನ್ನ ಹಂಬಲ ನನಗೆ ಬೆಂಬಲ

ನಿನ್ನ ಛಲದಫಲ ನನ್ನ ಪ್ರಜ್ವಲ


ನಿನ್ನ ದೇಶ ಭಕ್ತಿಯ ಒಲವೆ

ನನ್ನಯ ಉಳಿವಿಗೆ ಬಲವು

ನಿನ್ನ ದೇಶಹಿತದ ತಾರಕ

ನನ್ನ ಉಲ್ಲಾಸಕ್ಕೆ ಪೂರಕ


ಭಾರತದ ಅಣು-ರೇಣು ನಮ್ಮೊಡಲ ಪರಮಾಣು

ಆ ಧಮನೀಯ ನೆತ್ತರು ಈ ಪುಣ್ಯ ಭೂಮಿಯ ತಿಳಿನೀರು

ಎಂಬುದು ನಿನ್ನ ಮನಮಿಡಿತ


ಭಾರತೀಯರೆಲ್ಲಾ ನಗುತಿರಲಿ

ಮನುಕುಲದ ಅಳಲು ನನಗಿರಲಿ ಎಂಬುದು ನಿನ್ನ ಸತ್ವಯುತ ತತ್ವ.


ಈ ನಿನ್ನ ಅಮೂಲ್ಯ ಆದರ್ಶ

ನನ್ನನ್ನು ಪ್ರೇರೇಪಿಸಿ ರೂಪಿಸಿತು

ನಿನ್ನ ಶಾಶ್ವಿತ ಮೌನದಮುಸುಕು

ನನ್ನ ಮನೋವೇದನೆಗೆ  ತಳಕು


ನಿನ್ನ ರಕ್ಷಣಾ ಸೇವೆಯ ಮೆಲುಕು

ನಿತ್ಯ ಸತ್ಯ ಚಿರಂತನ ಪಲುಕು

ನಿನ್ನ ದೇಶ ಭಕ್ತಿಯನಿಷ್ಠೆ ಅಪಾರ

ನಿನ್ನ ಹುತಾತ್ಮತೆ ಸದಾ ಅಮರ.


     ಜೈ ಅಮರ್ ಜವಾನ್

🌹🙏🙏🙏🙏🙏🙏🙏🙏🙏🌹.


ಹುತಾತ್ಮ ಸೈನಿಕರಿಗೆ ಸಲಾಂ..

ಪ್ರಣಾಮಗಳೊಂದಿಗೆ:

          ಜಿ. ಎಂ. ಆರ್.

ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ.

ಆನೇಕಲ್.

*ಜ್ಞಾನೋದ್ದೀಪನ *

 *ಜ್ಞಾನೋದ್ದೀಪನ *

×××××××××××××××××××××


:ಅವಿವೇಕದ   ಪರಮಾವಧಿ :

++++++++++++++++++++


        ಆತ್ಮೀಯ ಬಂಧು_ಭಗಿನಿಯರೇ,

                 ತಮ್ಮ ಆತ್ಮಾವಲೋಕನಪೂರ್ವಕ ಯೋಚನಾಲಹರಿಗಾಗಿ :

ನಾವು ಮಾನವಧರ್ಮ ಪಥವನ್ನೇಕೆ ಧಿಕ್ಕರಿಸಿದ್ದೇವೆ?


ನಮಗೆ ಹಣ ಬೇಕು! ಗುಣಬೇಢ!


ನಮಗೆ ದುಡ್ಡುಬೇಕು! ಶಾಂತಿ ಬೇಡ!


ನಮಗೆ ದುಡ್ಡುಬೇಕು! ಸುಖ ಬೇಡ!


ನಮಗೆ ನಿಧಿ ಬೇಕು!

 ನೀತಿ - ನಿಯತ್ತು ಬೇಡ!


ನಮಗೆ ಧನ ಬೇಕು! ಧರ್ಮ ಬೇಡ!


ನಮಗೆ ಸಂಪತ್ತು ಬೇಕು!

ಸಮಾಧಾನ ಬೇಡ!


ನಮಗೆ ಮೊಬಲಗಿನ ಮೊತ್ತ ಬೇಕು!

ಮನೋಮೌಲ್ಯ ಬೇಡ!


ನಮಗೆ ವಿತ್ತ ಬೇಕು! ವಿಚಾರ ಬೇಡ!


ನಮಗೆ ಅಧಿಕಾರ ಬೇಕು!

ಜನಾಭಿವೃದ್ಧಿ ಬೇಡ!


ನಮಗೆ ಸನ್ಮಾನ ಬೇಕು!

      ಸಂಸ್ಕಾರ ಬೇಡ!


ಅಂತೆಯೇ,

               ನಮಗೆ ಮೂಗು ಕೊಟ್ಟ ದೇವರು ಬೇಡ!

ಆದರೆ,

         ಮೂಗುತಿ ಕೊಡುವ ದೇವರು ಬೇಕು!


ಇದೆಂಥಾ ವಿಪರ್ಯಾಸ ಸ್ವಾಮಿ?


ಪ್ರಣಾಮಗಳೊಂದಿಗೆ :

                   ಜಿ. ಎಂ. ಆರ್.

ಆನೇಕಲ್

Tuesday, December 7, 2021

ಓಂ ಕಾರ ನಾದವೇ ಸೃಷ್ಟಿಯ ಮೂಲ

 ಓಂ ಕಾರ ನಾದವೇ ಸೃಷ್ಟಿಯ ಮೂಲ.

*********


ಜಗವೆಲ್ಲಾ ಶೂನ್ಯ ಆವರಿಸಿ, ಚರಾಚರವೆಲ್ಲ ಮೌನಕ್ಕೆ ಶರಣಾಗಿದ್ದಾಗ ಆಕಾಶ - ಭೂಮಿಯ ನಡುವೆ ಆಕಾರವಿಲ್ಲದ ದೈವ ಶಕ್ತಿಯೊಂದು ನಾದದ ಎಳೆಯನ್ನು ಮೀಟುತ್ತಿರಲು ಓಂ ಕಾರದ ನಾದವು ಇಡೀ ಲೋಕವನ್ನೆ ಆವರಿಸಿತು.

ಏಳು ತಂತಿಗಳು ಮಿಡಿದ ನಾದೋಪಾಸನೆಯಿಂದ ಸಪ್ತ ಸ್ವರಗಳು ಸೃಷ್ಟಿಯಾಗಿದೆ.

ಅಂತೆಯೇ, ಆ ಏಳು ಸ್ವರಗಳ ನಾದದಿಂದ ಏಳು ಲೋಕಗಳು ಸೃಷ್ಟಿಯಾಗಿದೆ.

ಓಂ ಕಾರ ಶಕ್ತಿಯು ಜಗವೆಲ್ಲಾ ತುಂಬಿದಂತೆ ಸಮಸ್ತ ಜೀವ ಸಂಕುಲಕ್ಕೆ ಪ್ರಾಣ ಶಕ್ತಿ ಪ್ರಾಪ್ತವಾಗಿದೆ.

ತ್ರಿಮೂರ್ತಿ ಸ್ವರೂಪಿ ಓಂ ಕಾರವೇ ದೇವರ ಆಕಾರ.

ಪ್ರಕೃತಿಯಲ್ಲಿ ಪಂಚಭೂತಗಳೊಂದಿಗೆ ಓಂ

ಕಾರ ಮಿಲನವಾದಂತೆ ಸಂಗೀತ ಕ್ಷೇತ್ರಕ್ಕೆ ನಾನಾ ರಾಗಗಳು ಪ್ರಾಪ್ತವಾಗಿರುವುದೂ ಸಹ ಸೃಷ್ಟಿಯ ಮೂಲವೆ ಆಗಿದೆ.

          ಓಂ ಕಾರ ನಾದದ ಝೇಂಕಾರವು ಮನುಕುಲದ ಮಮಕಾರವಾಗಿದ್ದು ಯಥಾ ಪ್ರಣವ ಸ್ವರ ನಾದೋಪಾಸನೆಯ ಭಕ್ತಿಯೆ ಮುಕ್ತಿಗೆ ಶಕ್ತಿ ಎಂಬುದನ್ನು ಅರಿತು ಅಧ್ಯಾತ್ಮಿಕ ಅನುಸಂಧಾನ ಹೊಂದುವುದು ಯುಕ್ತ.

ಪ್ರಣಾಮಗಳೊಂದಿಗೆ:

       ಜಿ. ಎಂ. ಆರ್.

ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ.

ಆನೇಕಲ್.