Saturday, January 1, 2022

Dr.GMR, ಆನೇಕಲ್ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಇಂದು ಗುರುಭವನದಲ್ಲಿ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆ.



ಆನೇಕಲ್ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಇಂದು ಗುರುಭವನದಲ್ಲಿ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆ ಹಾಗೂ 2022 ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕುವೆಂಪು ರವರ ವಿಚಾರಧಾರೆಯನ್ನು ಅಭಿವ್ಯಕ್ತ ಪಡಿಸಿದ ಸನ್ನಿವೇಶ.







 

ಕಾವೇರಿ ನದಿಯ ಪರಂಪರೆ

 ಕಾವೇರಿ ನದಿಯ ಪರಂಪರೆ

*********

ಆ ಕಾ ಶ ದ ನಡು.

ವೇ ದದ ಆದಿ

ನಾ ರಿ ಯ ಅಂತ್ಯ ಅದುವೇ ನಮ್ಮ ಜೀವನದಿ, ಪಾವನ ತೀರ್ಥ ಹಾಗೂ ದಕ್ಷಿಣ ಗಂಗೆಯ

ನಾಮ ವಿಶೇಷ.

      ಇಂತಹ ಪರಮ ಪಾವನವಾದ ಕಾವೇರಿ ನದಿಯ ಉಗಮೋತ್ಥಾನದ ರಹಸ್ಯ ಬಲು ಸ್ವಾರಸ್ಯಕರ.

           ಒಮ್ಮೆ ಅಗಸ್ತ್ಯ ಮಹರ್ಷಿ ದೇವಲೋಕದಲ್ಲಿ ಸಂಚಾರ ಮಾಡುತ್ತಿದ್ದಾಗ ಅವರ ಮಾತಾ-ಪಿತರಾದ ಹವಿರ್ಭುಕ್ಕು ಹಾಗೂ ಬ್ರಹ್ಮರ್ಷಿ ಪುಲಸ್ತ್ಯ ರು

ನತೋವದನರಾಗಿ ನೇತಾಡುತ್ತಿರುವುದನ್ನು ಕಂಡು ಅದಕ್ಕೆ ಕಾರಣ ಕೇಳಿದಾಗ ಅಗಸ್ತ್ಯರು ಮದುವೆ ಆಗದೆ ವಂಶೋದ್ಧಾರದ ಸಂತತಿ ಇಲ್ಲವಾದ್ದರಿಂದ ಆ ಋಷಿ ದಂಪತಿಗಳು ಮುಕ್ತಿ ದೊರೆಯದೆ ನೇತಾಡುತ್ತಿರುವುದಾಗಿ ತಿಳಿಸಿದರು.

            ಅಂತೆಯೇ, ಮದುವೆಯಾಗಲು ನಿರ್ದರಿಸಿದ

ಅಗಸ್ತ್ಯರು ಲೋಪರಹಿತ ಕನ್ಯೆಯನ್ನು ಸೃಷ್ಟಿಸಿ ವಿದರ್ಭದ ರಾಜನಿಗೆ ಒಪ್ಪಿಸಿದಂತೆ ಕಾಲಾನಂತರ ಯಥಾ ಲಾವಣ್ಯವತಿಯನ್ನು ಅಗಸ್ತ್ಯರಿಗೆ ಕೊಟ್ಟು ಮದುವೆ ಮಾಡುವಂತೆ ತಿಳಿಸಿದರು.

          ಯಥಾ ನಿಬಂಧನೆಯಾನುಸಾರ ವಿದರ್ಭದ ರಾಜ ಕವೇರನ ಸಾಕುಮಗಳಾದ ಲೋಪಾಮುದ್ರೆ ತನ್ನನ್ನು ವಿರಮಿಸಿದ ಆ ಕ್ಷಣದಲ್ಲಿ ತಾನು ನದಿಯಾಗಿ ಹರಿದು ಹೋಗುವುದಾಗಿ ನಿಬಂಧನೆಯಾನುಸಾರ ಅಗಸ್ತ್ಯ ರನ್ನು ವಿವಾಹವಾದಳು.

           ಅಂತೆಯೇ ಒಂದು ದಿನ

ಮುಂಜಾನೆ ಅಗಸ್ತ್ಯರು ತೀರ್ಥದಲ್ಲಿ ಸ್ನಾನಕ್ಕೆ ಹೊರಟವರು ಸಕಾಲದಲ್ಲಿ ಬಾರದಿರಲು ಲೋಪಾಮುದ್ರೆಯು ನದಿಯಾಗಿ ಪ್ರವಹಿಸಿ ತನ್ನ ಸಾಕು ತಂದೆಯ ಹೆಸರಿನ್ನು

ಖ್ಯಾತಿಗೊಳಿಸಲು  ಕಾವೇರಿ

ನದಿಯಾಗಿ ನಮ್ಮ ಹೆಮ್ಮೆಯ ಜೀವನದಿಯಾಗಿರುವುದು ಉಪಾಸನಾರ್ಹ.

ಪ್ರಣಾಮಗಳೊಂದಿಗೆ:

         ಜಿ. ಎಂ. ಆರ್.

ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ.

ಆನೇಕಲ್

* ಅಂದು /ಇಂದು*

 ಅಂದು /ಇಂದು

*********


ಅಂದು ನಾವು ನಮ್ಮದು ಎಂಬ ಭಾವನೆ ಜನರಲ್ಲಿತ್ತು..

ಇಂದು ನಾನು ನನ್ನದು ಎಂಬ ಭಾವನೆ ಜನ ಜನಿತವಾಗಿದೆ.


ಅಂದು ಬದುಕಿನ ಬವಣೆ ನೀಗಿಸಲು ಪರಸ್ಪರ ಸಹಕಾರ

ಮಮಕಾರವಿತ್ತು.

ಇಂದು ಬದುಕಿನ ಬವಣೆಯನ್ನು

ಪ್ರೇರೇಪಿಸುವ ಅಹಂಕಾರದ

ಮರ್ಮವಿಕಾರವಿದೆ


ಅಂದು ಬಳಸಿಕೊಂಡ

ಜನರನ್ನು ಬೆಳೆಸುತ್ತಿದ್ದರು.

ಇಂದು ಜನರನ್ನು ಸ್ವಾರ್ಥಕ್ಕೆ

ಬಳಸಿಕೊಂಡು ಬೀಳಿಸುತ್ತಿದ್ದಾರೆ.


ಅಂದು ಒಬ್ಬರು ಎಲ್ಲರಿಗಾಗಿ

ಎಲ್ಲರೂ ಒಬ್ಬರಿಗಾಗಿದ್ದರು

ಇಂದು ಬಲ್ಲಿದರು ಬಹುಜನರ

ಪೀಡಕರಾಗಿದ್ದಾರೆ


ಅಂದು ಒಬ್ಬ ವ್ಯಕ್ತಿಯ ಬೆಳವಣಿಗೆಗೆ ಪುಷ್ಠೀಕರಿಸುವ

ಜನರಿದ್ದರು.

ಇಂದು ಒಬ್ಬ ವ್ಯಕ್ತಿಯ ಅವಸಾನಕ್ಕೆ ಸಿದ್ದ ಜನರಿದ್ದಾರೆ.


ಅಂದು ಬೆಳೆಸುವವರಿದ್ದರು

ಇಂದು ಮುಗಿಸುವವರಿದ್ದಾರೆ.


ಅಂದು ನಿನಗಾಗಿ ನಾವು ಎಂಬ ಜನರಿದ್ದರು.

ಇಂದು ನಿನಗಾಗಿ ನೀವು & ನಿಮ್ಮ ಶ್ರಮ ಎಂಬ ಜನರಿದ್ದಾರೆ.


ಅಂದು ಸಾಮಾಜಿಕ ಸಾಮರಸ್ಯ

ಸಹಬಾಳ್ವೆ ಇತ್ತು

ಇಂದು ಅಂಜಿಕೆಯ ವಿರಸಕ್ಕೆ

ಬಲು ಮೇಲ್ಮೆ ಇದೆ.


ಅಂದು ಜೀವನಕಲೆಯ ಒಲವು

ಗೆಲುವಿನ ಬಲವಿತ್ತು.

ಇಂದು ಜೀವನ ಕಳೆ, ನೆಲೆ, ಬೆಲೆ

ಮಲೀನವಾಗಿದೆ


ಅಂದು ಜೀವನ ಸುಂದರ ಹಾಗೂ ಮಹದಾನಂದಕರವಾಗಿತ್ತು

ಇಂದು ಜೀವನ ಆಡಂಬರ

ಹಾಗೂ ಆಕ್ರಂದನ ಕಾರಿಯಾಗಿದೆ.


ಅಂದು ನಿರಾಳ ದಿನಗಳು.

ಇಂದು ಕರಾಳ ದಿನಗಳು.


      ಜಿ. ಎಂ. ಆರ್.

ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ.

ಆನೇಕಲ್

:: Treading on the Water ::

 :: Treading on the Water ::

++++++++++++++++++++


I'm Treading on the

                             Water.

Through out my Career.

I know nothing about

                       the Future.

As I had lost my Tenure.


I rendered my unique

service for beneficiars

As they utilised it for

increase the tresure.

They failed to know the

                 it's measure.

I least bothered about

             their favour.


I lost my pleasure of

                           Sleeping.

I missed my chances of

                          Enjoying.

I neglected my system of

                          dining.

I rejected the opportunity

        of illegal Earning.


Hypocritic Society used

             me as the Ladder.

It doesn't care it's Labour.

I keep on serving for ever.

Beneficiar of this turned

                  into a cheater.


I mend my mind.

I bend my body.

I tend my soul

I grind my head to render

my service as Savvy.


Fair is Foul. Foul is Fair.

Itis revolving in Society.

I never knew it earlier.

So, enduring it's Brutality.


                      G. M. R.

Academic Resource Person.         Anekal.