Saturday, January 1, 2022

* ಅಂದು /ಇಂದು*

 ಅಂದು /ಇಂದು

*********


ಅಂದು ನಾವು ನಮ್ಮದು ಎಂಬ ಭಾವನೆ ಜನರಲ್ಲಿತ್ತು..

ಇಂದು ನಾನು ನನ್ನದು ಎಂಬ ಭಾವನೆ ಜನ ಜನಿತವಾಗಿದೆ.


ಅಂದು ಬದುಕಿನ ಬವಣೆ ನೀಗಿಸಲು ಪರಸ್ಪರ ಸಹಕಾರ

ಮಮಕಾರವಿತ್ತು.

ಇಂದು ಬದುಕಿನ ಬವಣೆಯನ್ನು

ಪ್ರೇರೇಪಿಸುವ ಅಹಂಕಾರದ

ಮರ್ಮವಿಕಾರವಿದೆ


ಅಂದು ಬಳಸಿಕೊಂಡ

ಜನರನ್ನು ಬೆಳೆಸುತ್ತಿದ್ದರು.

ಇಂದು ಜನರನ್ನು ಸ್ವಾರ್ಥಕ್ಕೆ

ಬಳಸಿಕೊಂಡು ಬೀಳಿಸುತ್ತಿದ್ದಾರೆ.


ಅಂದು ಒಬ್ಬರು ಎಲ್ಲರಿಗಾಗಿ

ಎಲ್ಲರೂ ಒಬ್ಬರಿಗಾಗಿದ್ದರು

ಇಂದು ಬಲ್ಲಿದರು ಬಹುಜನರ

ಪೀಡಕರಾಗಿದ್ದಾರೆ


ಅಂದು ಒಬ್ಬ ವ್ಯಕ್ತಿಯ ಬೆಳವಣಿಗೆಗೆ ಪುಷ್ಠೀಕರಿಸುವ

ಜನರಿದ್ದರು.

ಇಂದು ಒಬ್ಬ ವ್ಯಕ್ತಿಯ ಅವಸಾನಕ್ಕೆ ಸಿದ್ದ ಜನರಿದ್ದಾರೆ.


ಅಂದು ಬೆಳೆಸುವವರಿದ್ದರು

ಇಂದು ಮುಗಿಸುವವರಿದ್ದಾರೆ.


ಅಂದು ನಿನಗಾಗಿ ನಾವು ಎಂಬ ಜನರಿದ್ದರು.

ಇಂದು ನಿನಗಾಗಿ ನೀವು & ನಿಮ್ಮ ಶ್ರಮ ಎಂಬ ಜನರಿದ್ದಾರೆ.


ಅಂದು ಸಾಮಾಜಿಕ ಸಾಮರಸ್ಯ

ಸಹಬಾಳ್ವೆ ಇತ್ತು

ಇಂದು ಅಂಜಿಕೆಯ ವಿರಸಕ್ಕೆ

ಬಲು ಮೇಲ್ಮೆ ಇದೆ.


ಅಂದು ಜೀವನಕಲೆಯ ಒಲವು

ಗೆಲುವಿನ ಬಲವಿತ್ತು.

ಇಂದು ಜೀವನ ಕಳೆ, ನೆಲೆ, ಬೆಲೆ

ಮಲೀನವಾಗಿದೆ


ಅಂದು ಜೀವನ ಸುಂದರ ಹಾಗೂ ಮಹದಾನಂದಕರವಾಗಿತ್ತು

ಇಂದು ಜೀವನ ಆಡಂಬರ

ಹಾಗೂ ಆಕ್ರಂದನ ಕಾರಿಯಾಗಿದೆ.


ಅಂದು ನಿರಾಳ ದಿನಗಳು.

ಇಂದು ಕರಾಳ ದಿನಗಳು.


      ಜಿ. ಎಂ. ಆರ್.

ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ.

ಆನೇಕಲ್

No comments:

Post a Comment