Saturday, January 1, 2022

ಕಾವೇರಿ ನದಿಯ ಪರಂಪರೆ

 ಕಾವೇರಿ ನದಿಯ ಪರಂಪರೆ

*********

ಆ ಕಾ ಶ ದ ನಡು.

ವೇ ದದ ಆದಿ

ನಾ ರಿ ಯ ಅಂತ್ಯ ಅದುವೇ ನಮ್ಮ ಜೀವನದಿ, ಪಾವನ ತೀರ್ಥ ಹಾಗೂ ದಕ್ಷಿಣ ಗಂಗೆಯ

ನಾಮ ವಿಶೇಷ.

      ಇಂತಹ ಪರಮ ಪಾವನವಾದ ಕಾವೇರಿ ನದಿಯ ಉಗಮೋತ್ಥಾನದ ರಹಸ್ಯ ಬಲು ಸ್ವಾರಸ್ಯಕರ.

           ಒಮ್ಮೆ ಅಗಸ್ತ್ಯ ಮಹರ್ಷಿ ದೇವಲೋಕದಲ್ಲಿ ಸಂಚಾರ ಮಾಡುತ್ತಿದ್ದಾಗ ಅವರ ಮಾತಾ-ಪಿತರಾದ ಹವಿರ್ಭುಕ್ಕು ಹಾಗೂ ಬ್ರಹ್ಮರ್ಷಿ ಪುಲಸ್ತ್ಯ ರು

ನತೋವದನರಾಗಿ ನೇತಾಡುತ್ತಿರುವುದನ್ನು ಕಂಡು ಅದಕ್ಕೆ ಕಾರಣ ಕೇಳಿದಾಗ ಅಗಸ್ತ್ಯರು ಮದುವೆ ಆಗದೆ ವಂಶೋದ್ಧಾರದ ಸಂತತಿ ಇಲ್ಲವಾದ್ದರಿಂದ ಆ ಋಷಿ ದಂಪತಿಗಳು ಮುಕ್ತಿ ದೊರೆಯದೆ ನೇತಾಡುತ್ತಿರುವುದಾಗಿ ತಿಳಿಸಿದರು.

            ಅಂತೆಯೇ, ಮದುವೆಯಾಗಲು ನಿರ್ದರಿಸಿದ

ಅಗಸ್ತ್ಯರು ಲೋಪರಹಿತ ಕನ್ಯೆಯನ್ನು ಸೃಷ್ಟಿಸಿ ವಿದರ್ಭದ ರಾಜನಿಗೆ ಒಪ್ಪಿಸಿದಂತೆ ಕಾಲಾನಂತರ ಯಥಾ ಲಾವಣ್ಯವತಿಯನ್ನು ಅಗಸ್ತ್ಯರಿಗೆ ಕೊಟ್ಟು ಮದುವೆ ಮಾಡುವಂತೆ ತಿಳಿಸಿದರು.

          ಯಥಾ ನಿಬಂಧನೆಯಾನುಸಾರ ವಿದರ್ಭದ ರಾಜ ಕವೇರನ ಸಾಕುಮಗಳಾದ ಲೋಪಾಮುದ್ರೆ ತನ್ನನ್ನು ವಿರಮಿಸಿದ ಆ ಕ್ಷಣದಲ್ಲಿ ತಾನು ನದಿಯಾಗಿ ಹರಿದು ಹೋಗುವುದಾಗಿ ನಿಬಂಧನೆಯಾನುಸಾರ ಅಗಸ್ತ್ಯ ರನ್ನು ವಿವಾಹವಾದಳು.

           ಅಂತೆಯೇ ಒಂದು ದಿನ

ಮುಂಜಾನೆ ಅಗಸ್ತ್ಯರು ತೀರ್ಥದಲ್ಲಿ ಸ್ನಾನಕ್ಕೆ ಹೊರಟವರು ಸಕಾಲದಲ್ಲಿ ಬಾರದಿರಲು ಲೋಪಾಮುದ್ರೆಯು ನದಿಯಾಗಿ ಪ್ರವಹಿಸಿ ತನ್ನ ಸಾಕು ತಂದೆಯ ಹೆಸರಿನ್ನು

ಖ್ಯಾತಿಗೊಳಿಸಲು  ಕಾವೇರಿ

ನದಿಯಾಗಿ ನಮ್ಮ ಹೆಮ್ಮೆಯ ಜೀವನದಿಯಾಗಿರುವುದು ಉಪಾಸನಾರ್ಹ.

ಪ್ರಣಾಮಗಳೊಂದಿಗೆ:

         ಜಿ. ಎಂ. ಆರ್.

ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ.

ಆನೇಕಲ್

No comments:

Post a Comment