Friday, August 23, 2019

Dr.GMR Enlights the Youngsters in Endeavour Academy





Dr.GMR felicitating Anekal Guinnes Record Holder.



Knowledge Article 11


:ಸಕಲ ಜೀವ ಸಂಕುಲ ರಹಸ್ಯ :
********* 
ಪ್ರಜಾಪತಿ ಬ್ರಹ್ಮನ ಅಣತಿಯಂತೆ ಸೃಷ್ಟಿಯ ಜಾಲದಲ್ಲಿ ದಕ್ಷಬ್ರಹ್ಮನ 13ಮಂದಿ ಪುತ್ರಿಯರನ್ನು ವಿವಾಹವಾಗಿದ್ದಂತಹ ಕಶ್ಯಪ ಬ್ರಹ್ಮನೇ ಜೀವ ಸಂಕುಲದ ಮೂಲ ಕರ್ತೃ ಆಗಿದ್ದು ಸಕಲ ಜೀವ ಸಂಕುಲದ ಒಡೆಯನಾಗಿದ್ದಾನೆ ಎಂಬುದಕ್ಕೆ ಪುಷ್ಠಿಧಾಯಕ ಸಂಗತಿ ಇಂತಿದೆ :

ಕಶ್ಯಪ & ಅದಿತಿ:ದ್ವಾದಶಾದಿತ್ಯರಾದ ದೇವತೆಗಳು.

ಕಶ್ಯಪ & ದಿತಿ : ದೈತ್ಯರು

ಕಶ್ಯಪ & ದನು :ದಾನವರು

ಕಶ್ಯಪ & ಕಾಲೆ :ಕಾಲಕೇಯರು

ಕಶ್ಯಪ & ದನಾಯು :ಸಿದ್ಧರು

ಕಶ್ಯಪ & ಕ್ರೋಧೆ :ಮಾಂಸಾಹಾರಿ ಪ್ರಾಣಿಗಳು.

ಕಶ್ಯಪ & ಪ್ರಾಧೆ :ಗಂಧರ್ವರು

ಕಶ್ಯಪ & ವಿನತೆ : ಅರುಣ <>ಗರುಡ

ಕಶ್ಯಪ & ಕದ್ರು :ಸರ್ಪಗಳು

ಕಶ್ಯಪ & ಕಫಿಲೆ : ಗೋವುಗಳು

ಕಶ್ಯಪ & ಸುರಸೆ :ಯಕ್ಷ. ನಾಗ. ಕಿನ್ನರ. ಕಿಂಪುರುಷ

ಕಶ್ಯಪ & ತಾಮ್ರೆ :ಅಶ್ವ. ಗರ್ಧಭ. ಪಕ್ಷಿ ಸಂಕುಲ

ಕಶ್ಯಪ & ಇಲೆ :  ಮರ. ಬಳ್ಳಿ. ಹೂವು. ಕಾಯಿಗಳು.

ಪ್ರಣಾಮಗಳೊಂದಿಗೆ :
ಜಿ. ಎಂ. ಆರ್.
ಆನೇಕಲ್.

Knowledge Article 7 :ಅವಿವೇಕದ ಪರಮಾವಧಿ :

ಜ್ಞಾನೋದ್ದೀಪನ *
×××××××××××××××××××××

:ಅವಿವೇಕದ   ಪರಮಾವಧಿ :
++++++++++++++++++++

        ಆತ್ಮೀಯ ಬಂಧು_ಭಗಿನಿಯರೇ,
                 ತಮ್ಮ ಆತ್ಮಾವಲೋಕನಪೂರ್ವಕ ಯೋಚನಾಲಹರಿಗಾಗಿ :
ನಾವು ಮಾನವಧರ್ಮ ಪಥವನ್ನೇಕೆ ಧಿಕ್ಕರಿಸಿದ್ದೇವೆ?

ನಮಗೆ ಹಣ ಬೇಕು! ಗುಣಬೇಢ!

ನಮಗೆ ದುಡ್ಡುಬೇಕು! ಶಾಂತಿ ಬೇಡ!

ನಮಗೆ ದುಡ್ಡುಬೇಕು! ಸುಖ ಬೇಡ!

ನಮಗೆ ನಿಧಿ ಬೇಕು!
 ನೀತಿ - ನಿಯತ್ತು ಬೇಡ!

ನಮಗೆ ಧನ ಬೇಕು! ಧರ್ಮ ಬೇಡ!

ನಮಗೆ ಸಂಪತ್ತು ಬೇಕು!
ಸಮಾಧಾನ ಬೇಡ!

ನಮಗೆ ಮೊಬಲಗಿನ ಮೊತ್ತ ಬೇಕು!
ಮನೋಮೌಲ್ಯ ಬೇಡ!

ನಮಗೆ ವಿತ್ತ ಬೇಕು! ವಿಚಾರ ಬೇಡ!

ನಮಗೆ ಅಧಿಕಾರ ಬೇಕು!
ಜನಾಭಿವೃದ್ಧಿ ಬೇಡ!

ನಮಗೆ ಸನ್ಮಾನ ಬೇಕು!
      ಸಂಸ್ಕಾರ ಬೇಡ!

ಅಂತೆಯೇ,
               ನಮಗೆ ಮೂಗು ಕೊಟ್ಟ ದೇವರು ಬೇಡ!
ಆದರೆ,
         ಮೂಗುತಿ ಕೊಡುವ ದೇವರು ಬೇಕು!

ಇದೆಂಥಾ ವಿಪರ್ಯಾಸ ಸ್ವಾಮಿ?

ಪ್ರಣಾಮಗಳೊಂದಿಗೆ :
  ಜಿ. ಎಂ. ಆರ್.
ಆನೇಕಲ್

Knowledge Article 14:ಚಂದ್ರನ 16 ಬಣ್ಣಗಳ ಆದರ್ಶ


*ಜ್ಞಾನೋದ್ದೀಪನ *
:::::::::::::::::::::::::::::::::::::::::::
:ಚಂದ್ರನ 16 ಬಣ್ಣಗಳ ಆದರ್ಶ
*********
ಅವಧೂತ ಪರಂಪರೆಯ ಕಾಲಜ್ಞಾನಿ ಕೈವಾರದ ಯೋಗಿ ನಾರಾಯಣಪ್ಪನವರ ಕವನ  
"ಹಣಬಣ್ಣ" ದಲ್ಲಿ ಉಲ್ಲೇಖಿಸಿರುವ ಚಂದ್ರನ ಬೆಳಕಿನ 16 ಬಣ್ಣಗಳೂ ಸಹಾ ಪರಿಪೂರ್ಣ ಆದರ್ಶ ವ್ಯಕ್ತಿಯ ಯುಕ್ತ ಗುಣಗಳನ್ನು ಪ್ರತಿನಿಧಿಸುವುದರೊಂದಿಗೆ 16 ಆಣೆಗಳೂ ಸೇರಿ ಒಂದು ರೂಪಾಯಿ ಆಗಿರುವುದೂ ಪ್ರಸ್ತುತ.
ಅಂತೆಯೇ,  ಆ 16 ಬಣ್ಣಗಳ ಉಲ್ಲೇಖ ಇಂತಿದೆ :

*ಅಮೃತ. *ಅಂಗದ. *ಕಾಂತಿ. *ಚಂದ್ರಿಕ. *ಜ್ಯೋತ್ಸ್ನಾ. *ತುಷ್ಠಿ.
*ಧೃತಿ. *ಪ್ರೀತಿ. *ಪುಷ್ಠಿ. *ಪೂರ್ಣ. *ಪೂಣರ್ಣಾಮೃತ.
*ಪೂಷ. *ಮಾನದ. * ರತಿ.    
*ಶಶಿನಿ. *ಶ್ರೀ.

*ಓಂ ನಮೋ ನಾರಾಯಣಾಯ 
ಪ್ರಣಾಮಗಳೊಂದಿಗೆ :
ಜಿ. ಎಂ. ಆರ್.
ಆನೇಕಲ್.

Knowledge Article 12 :ಮೋಹದ ಪಾಶ:


ಜ್ಞಾನೋದ್ದೀಪನ *:::::::::::::::::::::::::::::::::::::::
:ಮೋಹದ ಪಾಶ:
*****

ನಮ್ಮ ವ್ಯಕ್ತಿತ್ವವನ್ನು ಯುಕ್ತವಾಗಿ ಪ್ರಸನ್ನಗೊಳಿಸುವ ಸಲುವಾಗಿ ನಮ್ಮ ಪಂಚೇಂದ್ರಿಯಗಳನ್ನು ಪ್ರಜ್ಙಾಪೂರ್ವಕವಾಗಿ ಎಚ್ಚರಿಕೆಯಿಂದ ಬಳಸಿದರೆ ಬದುಕು ಭವ್ಯ. ಬದಲಾಗಿ ಮರೆತು ಮರ್ಧಿಸಿದರೆ ಯಥಾ  ಜ್ಙಾನೇಂದ್ರಿಯಗಳಿಗೆ ನಮ್ಮ ಬದುಕು ಮುಡುವಾಗುತ್ತದೆ ಎಂಬುದಕ್ಕೆ ಪುರಾವೆ ಇಂತಿದೆ :

*ಕಣ್ಣು :  ಚಿಟ್ಟೆ/ಪತಂಗ ತನ್ನ ಮೋಹಪರವಶತೆಯಿಂದ ಪ್ರಖರ ಬೆಳಕಿನ ವೀಕ್ಷಣೆಯ ಆಕರ್ಷಣೆಗೆ ಬಲಿಯಾಗಿ ನಶಿಸಿತು.

*ಕಿವಿ:ಸಂಗೀತ ನಾದ ವಿನೋದಕ್ಕೆ ಮನಸೋತು ಮೈಮರೆತು ಬೇಟೆಗಾರನ ಸದ್ದನ್ನು ಆಲಿಸದೆ ಎಚ್ಚರಿಕೆ ವಹಿಸದ ಜಿಂಕೆ ಬೇಟೆಗೆ ಬಲಿಯಾಗಿ ನಶಿಸಿತು.

*ಮೂಗು: ಹೂವಿನ ಪರಿಮಳದ ವಾಸನೆಯಿಂದ ಮೈಮರೆತ ದುಂಬಿ ಆ ಹೂವಿನ ಗಿಡವನ್ನು ತುಳಿದ ಆನೆಯ ಆಕ್ರಮಣಕ್ಕೆ ಬಲಿಯಾಗಿ ನಶಿಸಿತು.

*ನಾಲಿಗೆ : ಗಾಳಕ್ಕೆ ಪೋಣಿಸಿದ್ದ ಎರೆಹುಳುವಿನ ರುಚಿಯ ಚಾಪಲ್ಯದಿಂದ ಗಾಳಕ್ಕೆ ಸಿಲುಕಿದ ಮೀನು, ಮೀನುಗಾರನ ಬೇಟೆಗೆ ಬಲಿಯಾಗಿ ನಶಿಸಿತು.

*ಚರ್ಮ : ಹೆಣ್ಣು ಆನೆಯ ಸ್ಪರ್ಶದ ಮೋಹಕ್ಕೆ ಬಲಿಯಾಗಿ ಖೆಡ್ಡದಲ್ಲಿ ಬಿದ್ದಂತಹ ಗಂಡು ಆನೆ ನಶಿಸಿತು.
           
ಅಂತೆಯೇ, ಭಗವಂತನಿಂದ ಪ್ರಾಪ್ತಿಯಾಗಿರುವ  ನಮ್ಮ ಪಂಚೇಂದ್ರಿಯಗಳನ್ನು ಪ್ರಜ್ಙಾಪೂರ್ವಕವಾಗಿ ಎಚ್ಚರಿಕೆಯಿಂದ ಬಳಸಿದರೆ ಬದುಕು ಭವ್ಯ. ಇಲ್ಲವಾದರೆ ಅತಿ ಹೇಯ.

ಪ್ರಣಾಮಗಳೊಂದಿಗೆ :
ಜಿ. ಎಂ. ಆರ್.
ಆನೇಕಲ್.

Knowledge Article 10 :ಜ್ಞಾನದ - ಮಹಿಮೆ :

:ಜ್ಞಾನದ - ಮಹಿಮೆ :
*******
ಜ್ಞಾನವಂತನಾಗಿ, ಜ್ಞಾನಿಗಳಿಗೆ ತಲೆಬಾಗಿ, ಜ್ಞಾನವೆಂಬ ದೀಪದಿಂದ ಅಜ್ಞಾನವನ್ನು ನೀಗುವ ಪರಿಯ ಸಿರಿ ಜ್ಞಾನಿಯ ಭವ್ಯ ಬಾಳಿಗೆ ಗಮ್ಯ ನಾಂದಿಯಾಗಿದೆ.
ಜ್ಞಾನವಿದ್ದರೆ ಮನುಜ. ಜ್ಞಾನವಿಲ್ಲದಿದ್ದರೆ ದನುಜ. ಅಂತೆಯೇ, ಮಾನವ&ದಾನವನ ನಡುವಿನ ವ್ಯತ್ಯಾಸವೇ ಜ್ಞಾನ.              

 ಅಷ್ಠ ಜ್ಞಾನದ ಆಗರ :
1*ಅಕ್ಷರ ಜ್ಞಾನ.
2*ಆತ್ಮ ಜ್ಞಾನ.
3*ಧಾರ್ಮಿಕ ಜ್ಞಾನ.
4*ಯೋಚನಾ ಜ್ಞಾನ.
5*ವಿವೇಚನಾಶೀಲ ಜ್ಞಾನ.
6*ಕರ್ತವ್ಯದ ಜ್ಞಾನ.
7*ಜೀವನ ಜ್ಞಾನ.
8*ಪ್ರಾಪಂಚಿಕ ಜ್ಞಾನ.

ಜ್ಞಾನ ಪೀಠ /ಗದ್ದುಗೆ :-

1-ಸಾಮಾಜಿಕ
2- ಸಾಂಸಾರಿಕ
3-ಸಾಂಪ್ರದಾಯಿಕ
4-ಧಾರ್ಮಿಕ
5-ಧಾರ್ಶನಿಕ
6-ವೈಚಾರಿಕ
7-ವೈಜ್ಞಾನಿಕ
8-ಶಾಸ್ತ್ರಾಚಾರ
9-ಆರ್ಷಾಚಾರ
10-ಸದಾಚಾರ

            ಜ್ಞಾನಸಾಗರ ಒಂದು ತವನಿಧಿ. ಅಂದರೆ ಎಂದೆಂದಿಗೂ ಮುಗಿಯದ ಜ್ಞಾನ ನಿಧಿ. ಜ್ಞಾನ ಗಳಿಕೆಯ ಸಾರ್ವಭೌಮತ್ವದ ಏಕಸ್ವಾಮ್ಯತೆ ಹೊಂದಿರುವ ಮಾನವನ ಜೀವಿತಾವಧಿಯಲ್ಲಿ
ಕೊನೆಯಪಕ್ಷ ಒಂದ…


Knowledge Article 9:ಮಾನವನ ಜೀವನ ಸುಗ್ಗಿ :

*ಜ್ಞಾನೋದ್ದೀಪನ *
:::::::::::::::::::::::::::::::::::::::::::::

:ಮಾನವನ ಜೀವನ ಸುಗ್ಗಿ :
*********

         ತಮಿಳುನಾಡಿನ  ದಾರ್ಶನಿಕ ಕವಿ ತಿರುವಳ್ಳುವರ್ ರವರು  ಸುಗ್ಗಿ ಹಬ್ಬದಂತಹ ಹಿಗ್ಗಿ ನ ಜೀವನ ಶೈಲಿಯನ್ನು ಪುಷ್ಕರಿಸುವ ವಿಚಾರಧಾರೆ ಇಂತಿದೆ :

            ನಮ್ಮ ದೇಹದ ಹೃದಯವೈಶಾಲತೆಯು ಮೈದಾನವಿದ್ದಂತೆ.
     
               ನಮ್ಮಲ್ಲಿನ ಸ್ವಯಂ ಶಿಸ್ತು ಆ ಮೈದಾನದಕ್ಕೆ ಬೇಲಿಯಿದ್ದಂತೆ.

               ನಮ್ಮಲ್ಲಿರುವ ಲೌಕಿಕ ಲಾಲಸೆಯನ್ನು ತೊರೆಯುವುದು ಹಸನಾದ ಬೆಳೆಯಿಂದ ಕಸವ        (ಕಳೆಯ) ನ್ನು ಬೇರ್ಪಡಿಸಿದಂತೆ.

             ಭಾವೋದ್ಧೀಪನವನ್ನು       ಅನ್ವಯಿಸಿಕೊಳ್ಳುವುದೆಂದರೆ ಬೆಳೆಯನ್ನು ಬೆಳೆಯಲು ಮೈದಾನ ವನ್ನು ಉಳುಮೆ ಮಾಡಿದಂತೆ.

            ನಮ್ಮ ಪವಿತ್ರ ಆಲೋಚನೆಯು ಬಿತ್ತನೆ ಬೀಜವಿದ್ದಂತೆ.

                  ನಾವು ಬೆಳೆದಂತಹ ಬೆಳೆಯು ತೀವ್ರವಾದ ಉತ್ಸಾಹ - ಸಂಭ್ರಮ ದಂತೆ.

          ನಮ್ಮಲ್ಲಿನ  ದೈವಿಕ ಹರ್ಷೋನ್ಮಾದವೇ ಸುಗ್ಗಿ  ಆಗಿದೆ.

ಪ್ರಣಾಮಗಳೊಂದಿಗೆ :
 ಜಿ. ಎಂ. ಆರ್.
ಆನೇಕಲ್.

Knowledge Article 8::ಪಂಚ ತಂತ್ರಗಳ ಪರಿಪಾಲನೆ :

*ಜ್ಞಾನೋದ್ದೀಪನ *
:::::::::::::::::::::::::::::::::::::::::::

:ಪಂಚ ತಂತ್ರಗಳ  ಪರಿಪಾಲನೆ :
*********

             ಸಕಲ ಜೀವ ಸಂಕುಲ ದಲ್ಲಿ ಮನುಷ್ಯ ಅತ್ಯಂತ ಪ್ರಜ್ಞಾವಂತ ಹಾಗೂ ಬುದ್ಧಿ ಜೀವಿ ಎಂದು ಪರಿಗಣಿಸಿದ್ದಾಗ್ಯೂ ಪ್ರಸ್ತುತ ಮಾನವ ತಾನು ಪಾಲಿಸಿ ಮೇಲ್ಮೆಗೊಳಿಸ ಬೇಕಾದಂತಹ ಮಾನವೀಯತೆ ಖಂಡಿಸಿ. ಸಮಾಜದ ಮೌಲ್ಯಗಳನ್ನು ಧಿಕ್ಕರಿಸಿ. ಪರಮ ಪಾವನವಾದ ಮಾನವ ಜನ್ಮದ ಸಾತ್ವಿಕತೆಯ ಬಗ್ಗೆ ಲವಲೇಶವೂ ಭಯ - ಭಕ್ತಿ  ಇಲ್ಲದಂತೆ ಕ್ಷಣಿಕ ಉನ್ಮಾದಕ್ಕಾಗಿ ಮರ್ಧಿಸಿ ಅತಂತ್ರ. ಕುತಂತ್ರ. ಷಡ್ಯಂತ್ರ & ಪಾರತಂತ್ರಗಳಲ್ಲಿ ನಿರತನಾಗಿರುವ ಈ ಸಂಧಿಗ್ಧ ಪರಿಸ್ಥಿತಿಯಲ್ಲಿ ವಿಷ್ಣುಶರ್ಮಾ   
ವಿವೇಚನಾಶೀಲತೆಯಿಂದ ವಿಶ್ಲೇಷಿಸಿರುವ   ಪಂಚತಂತ್ರದ 
ಸಾರಸುಧೆಯನ್ನು ಸವಿದು ಸರ್ವರ ಬದುಕನ್ನು ಬಂಗಾರವಾಗಿಸೀಕೊಂಡು          ಸತ್ವೋತ್ಕೃಷ್ಠ ಆದರ್ಶ ಜೀವನ ಶೈಲಿಯ ನ್ನು ಔನ್ನತ್ಯಗೊಳಿಸುವುದಕ್ಕೆ ಪೂರಕ ಈ ಉಲ್ಲೇಖಿತ ಪಂಚತಂತ್ರ ಸಾರ :

1* ಮಿತ್ರಬೇದ :   ಆಪತ್ಕಾಲಕ್ಕಾದವನೆ ಆಪ್ತಮಿತ್ರ.
      ಆದರೆ, ಸ್ವಾರ್ಥವೇ ತುಂಬಿತುಳುಕುತ್ತಿರುವ ಪ್ರಸ್ತುತ ಸಮಾಜದಲ್ಲಿ ನಿಷ್ಕಪಟ ಮಿತ್ರರ
ಲಭ್ಯತೆ ಮರೀಚಿಕೆಯಾಗಿದೆ.
ಆದುದರಿಂದ, ಯಾರೊಂದಿಗೆ ಮಿತ್ರತ್ವ ಬೆಳೆಸಬೇಕು - ಯಾರೊಂದಿಗೆ ಮಿತ್ರತ್ವ ಬೆಳೆಸ  ಲ ಬಾರದು ಎಂಬ ವಿವೇಚನೆ ಅನಿವಾರ್ಯವಾಗಿದೆ.

*2.ಮಿತ್ರಪ್ರಾಪ್ತಿ :
         ಅಂತರಂಗದ ಮೋಸಗಾರ - ಬಹಿರಂಗದ ವೇಷಗಾರರೇ ಹೇರಳವಾಗಿರುವ ಪ್ರಸ್ತುತ ಸಮಾಜದಲ್ಲಿ ನಿಷ್ಕಪಟ. ನಿಸ್ವಾರ್ಥ & ನಿಷ್ಠಾವಂತ ಸ್ನೇಹಿತರನ್ನು ಹಂಸ ಪಕ್ಷಿ ನೀರಿನಲ್ಲಿ ಅಡಕವಾಗಿರುವ ಕ್ಷೀರವ (ಹಾಲ) ನ್ನು ಹೀರುವಂತೆ   ಅತ್ಯುತ್ತಮರೊಂದಿಗೆ ಗೆಳೆತನ ಬೆಳೆಸುವುದು ಯುಕ್ತ.

*3.ಕಾಕೋಲುಕೀಯಮ್ :
           ಕಾಗೆ&ಗೂಬೆಯ ನಡುವಿನ ವೈರತ್ವ ತಾರಕಕ್ಕೇರಿದ ವಿಚಾರ ಧಾರೆಯನ್ನು ಅರಿತು ಮಿತ್ರತ್ವ ಬೆಳೆಸಬೇಕು ಎಂಬ ವಿವೇಚನೆ ಪ್ರಸ್ತುತ.

*4.ಲಬ್ದ ಪ್ರಣಾಶನಮ್ :
          ಪ್ರಾಪ್ತಿಯಾದ ಹಣ /ಸಂಪತ್ತು ಹೇಗೆ ನಾಶವಾಗುತ್ತದೆ. ಸಕ್ರಮವಾಗಿ ಧರ್ಮ ರೀತಿಯಿಂದ ಶ್ರಮಿಸಿ ಗಳಿಸಿದ್ದು ಮಾತ್ರ ನಮ್ಮದಾಗಿರುತ್ತದೆ.          ಆದರೆ, ಮೋಸ - ವಂಚನಾಪೂರ್ವಕ ಅಧರ್ಮದ ಗಳಿಕೆ ನಮ್ಮ ಆತ್ಮಸಾಕ್ಷಿಗೂ ದ್ರೋಹ ಮಾಡಿದಂತೆ ನಮ್ಮನ್ನು ಬರಿದಾಗಿಸಿ ನಶಿಸುತ್ತದೆ.

*5. ಅಪರೀಕ್ಷಿತಕಾರಕಮ್ :
               ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಿ ನಿರ್ಧರಿಸಬೇಕು. ಆದರೆ, ಇಂದು ಬಹುಪಾಲು ಸಮಯೋಚಿತ ಸ್ವಾರ್ಥ ಕಾರ್ಯ ಸಾಧಕರ ಆಷಾಢ ಭೂತಿ ದೂರಿನ ಮಾತುಗಳಿಗೆ ಮರಳಾಗಿ ಉತ್ತಮೋತ್ತಮ ಸ್ನೇಹಿತರ ತೇಜೋವಧೆ ಮಾಡಿ ಗೆಳೆತನಕ್ಕೆ ಭಂಗ ತರುವ ಸಂಗತಿ ಅರಿತು ಅಂತಹ ಲಭ್ಯ ಉತ್ತಮ ಸ್ನೇಹಿತರ ಬಗ್ಗೆ ಸಮಗ್ರವಾಗಿ      ವಿಚಾರ ಮಾಡಿ ಸ್ವಂತ ವಿವೇಚನೆ ಯಿಂದ ವರ್ತಿಸುವುದು ಯುಕ್ತ.

ಪ್ರಣಾಮಗಳೊಂದಿಗೆ :
 ಜಿ. ಎಂ. ಆರ್.
ಆನೇಕಲ್.

Knowledge Article 6 :ಶೂನ್ಯ ಫಲಶೃತಿ :

+ಜ್ಞಾನೋದ್ದೀಪನ +
           ******

          :ಶೂನ್ಯ ಫಲಶೃತಿ :
          ++++++++++++

*ನೀತಿ ಸಾರ ಇಲ್ಲದ ಶಿಕ್ಷಣ.
       
*ಭೀತಿ ಇಲ್ಲದ ಶಾಸನ.

*ಸೀಮಿತ ಇಲ್ಲದ ಸ್ವಾತಂತ್ರ್ಯ.

*ರೀತಿ ಇಲ್ಲದ ಜೀವನ.

*ತತ್ವ ರಹಿತ ರಾಜಕೀಯ.

*ಪುಷ್ಪವಿಲ್ಲದ ಪೂಜೆ.

*ಮೌಲ್ಯ ಇಲ್ಲದ ಮಾತು.

*ಬಲವಿಲ್ಲದ ಬಾಳು.

*ನಿಷ್ಠೆಯಿಲ್ಲದ ಭಕ್ತಿ.

*ಮನೋನಿಗ್ರಹ ಇಲ್ಲದ ಧ್ಯಾನ.

*ಆತ್ಮೋತ್ಥಾನ ಇಲ್ಲದ ಜ್ಞಾನ.

*ಭವಿಷ್ಯ ಇಲ್ಲದ ಬದುಕು.

*ತ್ಯಾಗಶೀಲತೆ ಇಲ್ಲದ ಆದರ್ಶ.

*ಸಾಫಲ್ಯ ರಹಿತ ಸಂಪತ್ತು.

*ಸನ್ನಡತೆ ಇಲ್ಲದ ಕೀರ್ತಿ.

*ಆನಂದ ಇಲ್ಲದ ಜೀವನ.

*ನಿಷ್ಕಪಟ ಇಲ್ಲದ ಪ್ರೀತಿ.

*ಯೋಗ ಇಲ್ಲದ ಯೋಗ್ಯತೆ.

*ಆರೋಗ್ಯ ಇಲ್ಲದ ಭಾಗ್ಯ.

*ಸ್ವಯಂ ಸ್ಪೂರ್ತಿ ಇಲ್ಲದ ಕಲಿಕೆ.

*ಪರಿಶ್ರಮ ಇಲ್ಲದ ಗಳಿಕೆ.

*ಗುರಿ ಇಲ್ಲದ ಜೀವನ.

*ಸತ್ವ ಇಲ್ಲದ ಸಂಸ್ಕಾರ.

*ದಯೆಯೇ ಇಲ್ಲದ ಧರ್ಮ.

*ಮಾನಿನಿ ಇಲ್ಲದ ಮನೆ.

*ಪರಿಶುದ್ಧತೆ ಇಲ್ಲದ ಮನ.

*ಗುರು ಕೃಫೆ ಇಲ್ಲದ ವಿದ್ಯಾಭ್ಯಾಸ.

*ಕಳೆ ಇಲ್ಲದ ಕಲೆ.

*ಆಪತ್ಕಾಲಕ್ಕಾಗದ ಆಪ್ತಮಿತ್ರ.

*ಅನುಕೂಲ ಕ್ಕೆಟುಕದ ಹಣ.

*ಸೌಹಾರ್ದತೆ ಇಲ್ಲದ ಸಂಘ.

*ನಿಯತ್ತಿಲ್ಲದ ನೆಂಟಸ್ಥಿಕೆ.

*ಅಧಿಕಾರ ಇಲ್ಲದ ಅರ್ಹತೆ.

*ಮಾನವ ಕಲ್ಯಾಣ ರಹಿತ ಕಾಯಕ.

*ಬ್ರಹ್ಮ ಜ್ಞಾನ ರಹಿತ ಬದುಕು.

                   ಇವೆಲ್ಲವೂ ಸಹಾ ನಿರೂಪಯುಕ್ತ ಹಾಗೂ ಫಲಶೃತಿ ಶೂನ್ಯವಾದ್ದರಿಂದ ಇದ್ದೂಇಲ್ಲದಂತೆ. ಆದುದರಿಂದ     ಅವೆಲ್ಲವನ್ನೂ ಸಕಾರಾತ್ಮಕವಾಗಿ ಸಾರ್ಥಕಗೊಳಿಸಿಕೊಳ್ಳುವುದು    ಯುಕ್ತ.

ಪ್ರಣಾಮಗಳೊಂದಿಗೆ :
ಜಿ. ಎಂ. ಆರ್.
ಆನೇಕಲ್.

Dr:G. M. R "s Academic Proficiency has been recognised & honored by the D. P. I. of Government of Tamil Nadu





Dr:G. M. R "s Academic Proficiency has been recognised & honored by the D. P. I. of Government of Tamil Nadu through designate as Reviewer in the Social Studies Text Book of 10th class.

Knowledge Article 5: Self Control

 Self Control :
*****

Be careful my little Eyes
What you are seeing.

Be careful my little Ears
What you are listening.

Be careful my little Tongue
What you are speaking.

Be careful my little Heart
What you are feeling.

Be careful my little Mind.
What you are thinking.

Be careful my little Hands
What you are doing.

Be careful my little Legs
Where you are going.

There is the GOD above all.

With Pranaams :
G. M. R.
Anekal.

Knowledge Article 4:ಗೃಹಸ್ಥ ಜೀವನದ ಗರಿಮೆ :

*ಜ್ಞಾನೋದ್ದೀಪನ *
====================

:ಗೃಹಸ್ಥ ಜೀವನದ ಗರಿಮೆ :
×××××××××××××××××××

 ಏಕ ಪತ್ನಿ /ಪತಿ ಶ್ರೇಯ:
ದ್ವಿಪತ್ನಿ /ಪತಿ ಭಯಾವಹ:

Two Lovers meet in the morning.
They marry in the afternoon.
But, They divorced in the
evening.
               ಈ ರೀತಿಯ Aculturation ಪಾಶ್ಚಿಮಾತ್ಯ ದೇಶಗಳಲ್ಲಿ ಓತಾಪ್ರೋತವಾಗಿ ರೂಡಿಯಲ್ಲಿರುವುದು ಅವರ ಅಭಿರುಚಿಗೆ ಸೀಮಿತ.

             ಕೃಣ್ವಂತೋ ವಿಶ್ವಮಾರ್ಯಂ    ಅರ್ಥಾತ್       ವಿಶ್ವದ ಜನರನ್ನೆಲ್ಲಾ ಸುಸಂಸ್ಕಾರಸ್ಥರನ್ನಾಗಿಸೋಣ ಎಂದು ಬಯಸಿ ವಿಶ್ವ ಗುರುವಿನಂತಿರುವ ಭಾರತದಲ್ಲಿ      ದುರಾದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಹಿಂದೂ ವಿವಾಹದ ಪರಮ ಪಾವನವಾದ ಪದ್ಧತಿ ಅನುಸಾರ ಗೃಹಸ್ಥ ಜೀವನಕ್ಕೆ ಕಾಲಿಟ್ಟ ನವಪೀಳಿಗೆಯ ವಧುವರಮಹಿಮಾನ್ವಿತರು ತಮ್ಮ ಜನ್ಮಧಾತರು ಹಾಗೂ ಗುರು-ಹಿರಿಯರಸಮ್ಮುಖದಲ್ಲಿ ಶುಭಮಂಗಳಕರವಾಗಿ ಮಾಂಗಲ್ಯಧಾರಣೆ ಮೂಲಕ ಪತಿಪತ್ನಿಯಾಗಿ ಧಾಂಪತ್ಯ ಜೀವನವೆಂಬ ನೌಕೆಯನ್ನು ಗೃಹಸ್ಥ ಆಶ್ರಮವೆಂಬ ಸಾಗರದಲ್ಲಿ ಸಾಗಿಸಿ ಯುಕ್ತ ಜೀವನವನ್ನು ಶಕ್ತಗೊಳಿಸುವ ಬದಲಾಗಿ ಪಾಶ್ಚಿಮಾತ್ಯ ಗೊಡ್ಡು ಸಂಸ್ಕೃತಿಗೆ ಮಾರು ಹೋಗಿ ಕ್ಷುಲ್ಲಕ ಕಾರಣಗಳಿಗಾಗಿ ಗಂಡನಾದವ ತನ್ನ ಹೆಂಡತಿಯನ್ನು ಅಥವಾ ಹೆಂಡತಿಯಾದವಳು ತನ್ನ ಗಂಡನನ್ನು ಧಿಕ್ಕರಿಸಿ ತೊರೆಯುವುದು ನಮ್ಮ ಧರ್ಮ ಹಾಗೂ ಸಂಸ್ಕೃತಿಗೆ ದ್ರೋಹ ಬಗೆದಂತಾಗುತ್ತದೆ.

ಗಂಡನೇ ಆಗಲಿ ಇಲ್ಲವೇ ಹೆಂಡತಿಯೇ ಆಗಲಿ ತನಗೆ ಬೇರೆ ತಾಯಿ ಬೇಕೆಂದು ಬದಲಿಸಲು ಸಾಧ್ಯವೇ? ನನ್ನ ತಾಯಿ ಸುಂದರವಾಗಿಲ್ಲ. ಶ್ರೀಮಂತಳಲ್ಲ. ನಾನು ಬಯಸಿದಂತಿಲ್ಲ ಎಂದು ತಾಯಿಯನ್ನು ಎಂದಿಗೂ ಬದಲಿಸಲು ಸಾಧ್ಯವೇ ಇಲ್ಲ. ಏಕೆಂದರೆ, ನಮ್ಮ ಜನನ ಪೂರ್ವದಲ್ಲಿಯೇ ಆಕೆ ನಮ್ಮನ್ನು ಮಗುವಾಗಿ ಸ್ವೀಕರಿಸಿ  ಹೇಗೆ ಆಕೆ ನಮ್ಮ ಜೀವನ ಪರ್ಯಂತ ತಾಯಿಯಾಗಿರುತ್ತಾಳೆಯೋ        ಹಾಗೆಯೇ ದೈವಾನುಗ್ರಹಯುಕ್ತ
ಪತಿಗೆ ಪತ್ನಿ ಹಾಗೂ ಪತ್ನಿಗೆ ಪತಿ ಆಗಿ ಗಂಡ - ಹೆಂಡತಿ ಆದವರೂ ಸಹಾ ಗೃಹಸ್ಥರಾಗಿ ಸಾಕ್ಷಾತ್ಕಾರದಿಂದ ಒಲವಿನ ಅನುಬಂಧದಿಂದ ಆದರ್ಶನೀಯವಾಗಿ ಬದುಕಿ ಹಿಂದೂ  ಸಂಸ್ಕೃತಿಯನ್ನು ಉಳಿಸಿ ಶ್ರೀಮಂತಗೊಳಿಸುವುದರೊಂದಿಗೆ ಕುಟುಂಬಗಳಲ್ಲಿ ಶಾಂತಿ. ನೆಮ್ಮದಿ ಸಾಮರಸ್ಯಕ್ಕೆ ಪುಷ್ಠಿಧಾಯಕರಾಗುವುದು         ಪರಮೋತ್ಕಷ್ಠ.

ಮಾನಿನಿಗೆ ಗಂಜೀಯ ಕುಡಿದಾರೂ ಗಂಡನಾ ಮನೆ ಲೇಸು ಎಂಬ ಅರಿವಿನೊಂದಿಗೆ ತಾಳ್ಮೆ ಇರಬೇಕು.
           ಅಂತೆಯೇ "
ಗಂಡನಾದ ಮಹನಿಯನಿಗೆ          ತನ್ನ ಹೆಂಡತಿಯೇ ಜೀವನದ ಸಂಗಾತಿಯಾಗಿದ್ದು ಕೊನೇ ಕ್ಷಣದಲ್ಲಿಯೂ ಸನಿಹವಿದ್ದು ಸಂತೈಸುವ ಸಾಧ್ವಿಮಣಿಯಾಗಿರುತ್ತಾಳೆಂಬ ಅರಿವಿನೊಂದಿಗೆ ಗಂಭೀರ ಜವಾಬ್ದಾರಿ ಇರಲೇಬೇಕು.

ಕುಟುಂಬ ಕೌಸ್ತುಭ ಮಸ್ತು.

ಪ್ರಣಾಮಗಳೊಂದಿಗೆ :
 ಜಿ. ಎಂ. ಆರ್.
ಆನೇಕಲ್.

Knowledge Article 3: Library is the Temple of Knowledge: ಮೊಬೈಲ್ ಫೋನ್ ಬಿಡಿ. ಪುಸ್ತಕ ಹಿಡಿ.


 * ಅಕ್ಷರ ಲಕ್ಷ ಶಾಸ್ತ್ರ *
:::::::::::::::::::::::::::::::::::::::

           ಇದು  ಸರ್ವಶಾಸ್ತ್ರ ಗ್ರಂಥ /ಸರ್ವ ಜ್ಞಾನ ಕೋಶ (Encyclopedia) ಆಗಿದೆ.
ಇದನ್ನು ಭಗವಾನ್ ವಾಲ್ಮೀಕಿ ಮಹರ್ಷಿ ಬರೆದಿದ್ದಾರೆ.

ಈ ಸಮಗ್ರ ಗ್ರಂಥದಲ್ಲಿ ಈ ಕೈಳಗೆ ನಮೂದಿಸಿರುವ ಜ್ಞಾನ ಶಾಖೆಗಳಿವೆ :

*325 ಗಣಿತ ಪ್ರಕ್ರಿಯೆಗಳು

*ರೇಖಾ ಗಣಿತ

,*ತ್ರಿಕೋನ ಗಣಿತ

*ಬೀಜ ಗಣಿತ

*ಖನಿಜ ಶಾಸ್ತ್ರ

*ಭೌತಿಕ ಶಾಸ್ತ್ರ

*ಜಲ ಯಂತ್ರ ಶಾಸ್ತ್ರ

*ಭೂಗರ್ಭ ಶಾಸ್ತ್ರ

*ವಾಯು ಶಾಸ್ತ್ರ

*ಉಷ್ಣ ಶಾಸ್ತ್ರ

*ವಿದ್ಯುತ್ ಶಾಸ್ತ್ರ
                         ಗಳನ್ನೊಳಗೊಂಡಂತೆ ಇದೊಂದು ಪರಿಶುದ್ಧ ವಿಜ್ಞಾನ
(Pure Science) ಶಾಸ್ತ್ರವಾಗಿದೆ.

                 ಸಶೇಷ..........

ಪ್ರಣಾಮಗಳೊಂದಿಗೆ :
ಜಿ. ಎಂ. ಆರ್.
ಆನೇಕಲ್.


2.*ಅರ್ಥಶಾಸ್ತ್ರ.

ಮಾನವನ ಸುಖಕರ ಜೀವನಾಂಶದ ಗಳಿಕೆ. ಬಳಕೆ. ಉಳಿಕೆ ಗಳಿಗೆ ಸಂಬಂಧಿಸಿದಂತಹ 82 ವಿಧಾನಗಳನ್ನು ಅರ್ಥಶಾಸ್ತ್ರದಲ್ಲಿ ತಿಳಿಸಲಾಗಿದೆ.

ವಿಷ್ಣುಶರ್ಮಾ /ಚಾಣಕ್ಯ /ಕೌಟಿಲ್ಯ ಈ ಭಾರತೀಯ ಮಾದರಿಯಲ್ಲಿ ಅರ್ಥಶಾಸ್ತ್ರವನ್ನು ಬರೆದಿದ್ದಾರೆ.

ಕೌಟಿಲ್ಯನ ಅರ್ಥಶಾಸ್ತ್ರ ಕೇವಲ ಆರ್ಥಿಕ ವಿಷಯಗಳನ್ನೇ ಅಲ್ಲದೆ ಸರ್ವ ಕ್ಷೇತ್ರಗಳ ವಿಚಾರಗಳನ್ನೊಳಗೊಂಡಿರುವ ಸಮಗ್ರ ಶಾಸ್ತ್ರವಾಗಿದೆ.

ಮಾನವನ ಆರ್ಥಿಕ ಚಟುವಟಿಕೆಗಳನ್ನು ಪ್ರತ್ಯೇಕವಾಗಿ ಅರಿಯಲು ಪೂರಕವಾದಂತೆ ಅರ್ಥಶಾಸ್ತ್ರವನ್ನು " ಸಂಪತ್ತಿನ ರಾಷ್ಟ್ರಗಳು" ಎಂಬ ಶೀರ್ಷಿಕೆಯಲ್ಲಿ ಬರೆದು 1776 ರಲ್ಲಿಯೇ ವ್ಯಾಖ್ಯಾನಿಸಿರುವವರು ಇಂಗ್ಲೆಂಡ್ ನ  ಆಡಂ ಸ್ಮಿತ್ ರವರು.

ವ್ಯಕ್ತಿ ಜೀವಂತವಾಗಿರಲು ರಕ್ತಪರಿಚಲನೆ ಎಷ್ಟು ಪ್ರಮುಖವೋ, ರಾಷ್ಟ್ರ ದ   ಸರ್ವಾಭಿವೃದ್ಧಿಗೆ ಆರ್ಥಿಕ ಚಟುವಟಿಕೆಗಳು ಅಷ್ಟೇ ಪ್ರಮುಖವಾಗಿವೆ.


2.*ಅರ್ಥಶಾಸ್ತ್ರ.

ಮಾನವನ ಸುಖಕರ ಜೀವನಾಂಶದ ಗಳಿಕೆ. ಬಳಕೆ. ಉಳಿಕೆ ಗಳಿಗೆ ಸಂಬಂಧಿಸಿದಂತಹ 82 ವಿಧಾನಗಳನ್ನು ಅರ್ಥಶಾಸ್ತ್ರದಲ್ಲಿ ತಿಳಿಸಲಾಗಿದೆ.

ವಿಷ್ಣುಶರ್ಮಾ /ಚಾಣಕ್ಯ /ಕೌಟಿಲ್ಯ ಈ ಭಾರತೀಯ ಮಾದರಿಯಲ್ಲಿ ಅರ್ಥಶಾಸ್ತ್ರವನ್ನು ಬರೆದಿದ್ದಾರೆ.

ಕೌಟಿಲ್ಯನ ಅರ್ಥಶಾಸ್ತ್ರ ಕೇವಲ ಆರ್ಥಿಕ ವಿಷಯಗಳನ್ನೇ ಅಲ್ಲದೆ ಸರ್ವ ಕ್ಷೇತ್ರಗಳ ವಿಚಾರಗಳನ್ನೊಳಗೊಂಡಿರುವ ಸಮಗ್ರ ಶಾಸ್ತ್ರವಾಗಿದೆ.

ಮಾನವನ ಆರ್ಥಿಕ ಚಟುವಟಿಕೆಗಳನ್ನು ಪ್ರತ್ಯೇಕವಾಗಿ ಅರಿಯಲು ಪೂರಕವಾದಂತೆ ಅರ್ಥಶಾಸ್ತ್ರವನ್ನು " ಸಂಪತ್ತಿನ ರಾಷ್ಟ್ರಗಳು" ಎಂಬ ಶೀರ್ಷಿಕೆಯಲ್ಲಿ ಬರೆದು 1776 ರಲ್ಲಿಯೇ ವ್ಯಾಖ್ಯಾನಿಸಿರುವವರು ಇಂಗ್ಲೆಂಡ್ ನ  ಆಡಂ ಸ್ಮಿತ್ ರವರು.

ವ್ಯಕ್ತಿ ಜೀವಂತವಾಗಿರಲು ರಕ್ತಪರಿಚಲನೆ ಎಷ್ಟು ಪ್ರಮುಖವೋ, ರಾಷ್ಟ್ರ ದ   ಸರ್ವಾಭಿವೃದ್ಧಿಗೆ ಆರ್ಥಿಕ ಚಟುವಟಿಕೆಗಳು ಅಷ್ಟೇ ಪ್ರಮುಖವಾಗಿವೆ.

3.*ಅಶ್ವ ಶಾಸ್ತ್ರ.
::::::::::::::::::::::
                    ಈ ಶಾಸ್ತ್ರವನ್ನು
ಅಗ್ನಿವರ್ಮ   ಬರೆದಿದ್ದಾರೆ.
ಅಶ್ವ (ಕುದುರೆ) ಗಳ    ವಿಧಗಳು
ಶುಭಾಶುಭ ಚಿಹ್ನೆಗಳು. ಅವುಗಳ ಓಟದ ರೀತಿಗಳು
ಅವು ಎತ್ತರಕ್ಕೆ ಹತ್ತುವ ಮತ್ತು ನದಿಗಳನ್ನು ದಾಟುವ ಸಾಹಸಗಳನ್ನು ತಿಳಿಸಿದೆ.

 ಸಾಮಂತ ರಾಜಮಹಾರಾಜರು
ಕುದುರೆಗಳನ್ನು ಯಜ್ಞ_ಯಾಗಾದಿಗಳಿಗೆ ಕುದುರೆ ಗಳನ್ನು ಬಳಸುತ್ತಿದ್ದಂತಹ ವಿಚಾರಧಾರೆ ಈ ಶಾಸ್ತ್ರದ ವಿಚಾರ ವಿನಿಮಯವಾಗಿದೆ.

4* ಅಸ್ತ್ರ ಶಾಸ್ತ್ರ *
******

ಈ ಶಾಸ್ತ್ರವನ್ನು ಬ್ರಹ್ಮರ್ಷಿವರೇಣ್ಯರಾದ ವಿಶ್ವಾಮಿತ್ರ  ಬರೆದಿದ್ದಾರೆ.

ಮಂತ್ರಪೂರಿತ ಧನಸ್ಸಿಗೆ ಅಸ್ತ್ರ ಎನ್ನಲಾಗಿದೆ.
ಬ್ರಹ್ಮಾಸ್ತ್ರ. ವಾರುಣಾಸ್ತ್ರ. ನಾರಾಯಣಾಸ್ತ್ರ. ಆಗ್ನೇಯಾಸ್ತ್ರ
ಮತ್ತು  ಪಾಶುಪತಾಸ್ತ್ರ ಮುಂತಾದವು ಮಹಾಮಹಿಮೆಯುಳ್ಳ ದಿವ್ಯಾಸ್ತ್ರಗಳಾಗಿವೆ.

ಇಂತಹ ಮಹಾ  ಅಸ್ತ್ರಗಳ ಪ್ರಯೋಗ ಮತ್ತು ಉಪಸಂಹಾರಗಳನ್ನು ಉಪ     ವೇದವಾದ ಧನುರ್ವೇದದಲ್ಲಿ ವಿವರಿಸಲಾಗಿದೆ.

5*  ಇಂದ್ರಜಾಲ  ಶಾಸ್ತ್ರ
********

ಈ ತಂತ್ರ ಶಾಸ್ತ್ರವನ್ನು ವೀರಬಾಹು ಬರೆದಿದ್ದಾರೆ.
ಇದರಲ್ಲಿ ಗಾರುಡಿ ವಿದ್ಯೆಗಳು.
ಅನುಸರಿಸಬೇಕಾದ ಕ್ರಮಗಳು. ಪದ್ಧತಿಗಳು ಮತ್ತು ಜಾಗ್ರತೆಗಳನ್ನು ವಿವರಿಸಲಾಗಿದೆ.
ನೀರಿನ ಮೇಲೆ & ಬೆಂಕಿಯ ಮೇಲೆ ನಡೆಯುವುದು. ಅಂತೆಯೇ  ಆಧಾರವಿಲ್ಲದೆ ಗಾಳಿಯಲ್ಲಿ ನಿಲ್ಲುವುದು ಮುಂತಾದ ಮಾಯಾಜಾಲ ವಿದ್ಯೆಗಳ ಬಗ್ಗೆ ಈ ಶಾಸ್ತ್ರದಲ್ಲಿ ತಿಳಿಸಲಾಗಿದೆ.

6* ಕನ್ಯಾಲಕ್ಷಣ ಶಾಸ್ತ್ರ.
:::::::::::::::::::::::::::::::::

ಈ ಶಾಸ್ತ್ರವನ್ನು ಬಬ್ರು ಮಹರ್ಷಿ
ಬರೆದಿದ್ದಾರೆ.
ಈ ಶಾಸ್ತ್ರದಲ್ಲಿ ವಿವಿಧ ರೀತಿಯ ಕನ್ಯೆಯರ ಗುಣಲಕ್ಷಣ. ಅವಲಕ್ಷಣ ಮತ್ತು ಗುಣಸಂಪನ್ನ ಮತ್ತು ಗುಣವಿಹೀನತೆಗಳ ಬಗ್ಗೆ ತಿಳಿಸಲಾಗಿದೆ.

ಪದ್ಮಿನಿ ಸ್ತೀಯ ಲಕ್ಷಣ :
******

ಹಂಸ ನಡಿಗೆ. ಮೃದು_ಮಧುರ     
ಭಾಷಿಣಿ. ಸ್ತೀಕುಲದಲ್ಲಿಯೇ ಪರಮಶ್ರೇಷ್ಟಳಾಗಿದ್ದು ನೋಡಿದವರಿಗೆ ಪೂಜ್ಯಭಾವನೆ ಉಂಟಾಗುತ್ತದೆ.
ಮಿತಾಹಾರಿ. ಮಿತ ಕಾಮಾಸಕ್ತಳಾಗಿ ಪತಿಗೆ ಸಂಭಾವಿತ ಸಹಧರ್ಮಿಣಿಯಾಗಿ ಮಹಾಪತಿವ್ರತೆಯಾಗಿರುತ್ತಾಳೆ.

ಚಿತಿನಿ ಸ್ತೀಯ ಲಕ್ಷಣ :
******

ಚಂಚಲ ದೃಷ್ಟಿ & ಸ್ವಭಾವದವಳಾಗಿರುತ್ತಾಳೆ.
ದಪ್ಪ ತುಟಿಗಳು& ಮೀನಿನ ಕಣ್ಣುಗಳುಳ್ಳವಳಾಗಿರುತ್ತಾಳೆ.
ಕಾಮನೆಗಳ ಮಿಡಿತದಲ್ಲಿ ಮನೋನಿಯಂತ್ರಣವಿಲ್ಲದೆ         ವರ್ತಿಸುವವಳಾಗಿರುತ್ತಾಳೆ.

ಶಂಖಿನಿ ಸ್ತೀಯ ಲಕ್ಷಣ :
*******

ಪರರಬಗ್ಗೆ ಓರೆನೋಟ ಬರುವವಳು.
ರಕ್ತನೇತ್ರಗಳನ್ನುಳ್ಳವಳು. ಲಜ್ಜೆಯಿಲ್ಲದ ನಗುಮುಖದವಳು ಗೊಗ್ಗರ ಧ್ವನಿ ಯುಳ್ಳವಳು. ಅತಿಕಾಮಾಸಕ್ತಳಾಗಿರುತ್ತಾಳೆ.

ಹಸ್ತಿನಿ ಸ್ತೀಯ ಲಕ್ಷಣ:
*******
ದೊಡ್ಡಮುಖ. ಡೊಂಕಾದ ಕಾಲು ಬೆರಳುಗಳನ್ನುಳ್ಳವಳಾಗಿದ್ದು ಲಜ್ಜಾಹೀನಳು & ಅತೀಮಾತುಗಾರಳಾಗಿರುತ್ತಾಳೆ. ಅತಿ ಶೃಂಗಾರ ಪ್ರಿಯಳಾಗಿ  ಸದಾ ಕಾಮೋನ್ಮಾದದಲ್ಲಿ ತೊಡಗಿರುತ್ತಾಳೆ.


7.*ಕಾಮಶಾಸ್ತ್ರ.
:::::::::::::::::::::::::

ಈ ಶಾಸ್ತ್ರವನ್ನು ವಾತ್ಸಾಯನ ಮಹರ್ಷಿ ಬರೆದಿದ್ದಾರೆ
ಇದರಲ್ಲಿ ರತಿಕ್ರಿಯಾಭಂಗಿ. ಸ್ತ್ರೀ ಪುರುಷ ಮನಸ್ಸತ್ವಗಳು. ರತಿಸಂಕೇತಗಳು & ಲೈಂಗಿಕ ತೃಷೆ ಈಡೇರಿಕೆಯ ಸಂಗತಿಗಳಿವೆ. ಆರೋಗ್ಯ ಪದ್ಧತಿ & ದೇಹ ಶಕ್ತಿ ವೃದ್ಧಿಸಿಕೊಳ್ಳುವ ಬಗ್ಗೆ ವಿವರಣೆ ಇದೆ.

8.* ಕಾಲಶಾಸ್ತ್ರ :
******

ಇದನ್ನು ಕಾರ್ತಿಕೇಯ ಮಹರ್ಷಿ
ಬರೆದಿದ್ದಾರೆ.
ಇದರಲ್ಲಿ ಸಮಯವನ್ನು ಕ್ಷಣ _ನಿಮಿಷ _ಘಂಟೆ _ದಿನ _ಆಯನ _ವರ್ಷ   ಮುಂತಾಗಿ ವಿಭಜಿಸಲಾಗಿದೆ. ಶುಭಾಶುಭ ಸಮಯ & ಸಮಯ ದೇವತೆಗಳ ಬಗ್ಗೆ ವಿವರಿಸಲಾಗಿದೆ.


Library is the Temple of Knowledge.
ಓದಿನ ಹಿರಿಮೆ ನಮ್ಮ ಬದುಕಿನ
ಮಹಿಮೆ.
ಅಂತೆಯೇ,
ಮೊಬೈಲ್ ಫೋನ್ ಬಿಡಿ. ಪುಸ್ತಕ ಹಿಡಿ.


9.*   ಗಜ ಶಾಸ್ತ್ರ.
      ::::::::::::::::::::

ಈ ಶಾಸ್ತ್ರವನ್ನು ಕುಮಾರಸ್ವಾಮಿ
ಬರೆದಿದ್ದಾರೆ.
ಇದರಲ್ಲಿ ಆನೆಗಳ ವಿವಿಧ ಜಾತಿಗಳು. ಶಾರೀರಿಕ ಲಕ್ಷಣಗಳು. ಕಾಡಾನೆಗಳನ್ನು ಸ್ವಾಧೀನಪಡಿಸಿಕೊಳ್ಳುವ ವಿಧಾನಗಳು. & ಆನೆಗಳ ಮನಸ್ಸು ತಿಳಿಯುವ ಪದ್ಧತಿಗಳನ್ನು ವಿವರಿಸಲಾಗಿದೆ.

10.*ಗಂಧರ್ವ ಶಾಸ್ತ್ರ.
     :::::::::::::::::::::::::::

ಈ ಶಾಸ್ತ್ರವನ್ನು ಭರತಮುನಿ ಬರೆದಿದ್ದಾರೆ.
ಇದರಲ್ಲಿ ನಾಟ್ಯ. ಸಂಗೀತ. ಗಾಯನ. ವಾದ್ಯತಾಳಗಳು. ನೃತ್ಯ ಶೈಲಿಗಳು. ಲಲಿತ ಕಲೆಗಳು
ಮುಂತಾದವುಗಳ ಬಗ್ಗೆ ವಿವರಿಸಲಾಗಿದೆ.

11.* ಚಿತ್ರ ಲೇಖನ ಶಾಸ್ತ್ರ.
       :::::::::::::::::::::::::::::::

ಇದನ್ನು ಭೀಮಋಷಿ ಬರೆದಿದ್ದಾರೆ.
ಚಿತ್ರ ಲೇಖನ ರಹಸ್ಯಗಳು ಈ ಶಾಸ್ತ್ರದಲ್ಲಿದೆ.
ಮನುಷ್ಯನ ಕೂದಲು & ಉಗುರುಗಳನ್ನು ನೋಡಿ ಮನುಷ್ಯನ ಚಿತ್ರವನ್ನು ಯಥಾವತ್ತಾಗಿ ಬರೆಯುವ ವಿಧಾನ ತಿಳಿಸಲಾಗಿದೆ.
200 ಚಿತ್ರಗಳ ವಿನ್ಯಾಸ ರಹಸ್ಯಗಳನ್ನು ತಿಳಿಸಿದ್ದಾರೆ.

ಪ್ರಣಾಮಗಳೊಂದಿಗೆ :
 ಜಿ. ಎಂ. ಆರ್.
ಆನೇಕಲ್.

Knowledge Article 13:ಗುರು ಧೀಕ್ಷೆಯ ಮಹಿಮೆ :

*ಜ್ಞಾನೋದ್ದೀಪನ *
:::::::::::::::::::::::::::::::::::::::::::

:ಗುರು ಧೀಕ್ಷೆಯ ಮಹಿಮೆ :
*******

                   ಪಂಡಿತನಿಂದ - ಪಾಮರನವರೆವಿಗೂ   ಸಮಸ್ತರ  ಸರ್ವ ಸಾಧನೆಗೂ ಒಬ್ಬ ಯುಕ್ತ ಗುರುಧೀಕ್ಷೆಯ ಶ್ರೀರಕ್ಷೆ  ಸಾರ್ವಕಾಲಿಕವಾಗಿರುತ್ತದೆ.

          ಅಂತಹ ತ್ರಿಮೂರ್ತಿ ಸ್ವರೂಪಿ ಗುರುವರೇಣ್ಯರ ಪಾದಾರವಿಂದಗಳಿಗೆ ಶಿರಬಾಗಿ, ಉರಸ್ಪರ್ಶನಾಪೂರ್ವಕವಾಗಿ ಕರದ್ವಯಗಳಿಂದ ನಮಿಸಿ, ಅಂತಹ ಗುರುವಿತ್ತ ಶಿಕ್ಷೆ ನಮ್ಮ ಸಾತ್ವಿಕ ಬದುಕಿಗೆ ಶ್ರೀರಕ್ಷೆ ಎಂಬ
ದೀನತೆಯ ಧನ್ಯತೆಹೊಂದುವುದು ಯುಕ್ತ.

ಎಲ್ಲಾ ಋಷಿವರೇಣ್ಯರೂ ತಮ್ಮದೇ ಆದ ವಿಶಿಷ್ಟ ವಾಂಛಿತಫಲಪ್ರಾಪ್ತಿಗಾಗಿ ತಪೋನಿರತರಾಗಿ ಚಿರಸ್ಥಾಯಿಗಳಾಗಿದ್ದರೆ ವೇದವ್ಯಾಸ ಮಹರ್ಷಿಗಳೊಬ್ಬರು ಮಾತ್ರ   ಸರ್ವರಿಗೂ, ಸರ್ವಲೋಕಕ್ಕೂ -   ಸಾರ್ವಕಾಲಿಕವಾಗಿ ಅಗತ್ಯವಿರುವ ಜ್ಞಾನ ರಾಶಿಯನ್ನು ಋಗ್ವೇದ. ಯಜುರ್ವೇದ. ಸಾಮವೇದ. ಅಥರ್ವಣವೇದ ಎಂದು ವಿಭಾಗಿಸಿದಂತೆ ಮನುಕುಲಹಿತಕ್ಕಾಗಿ ಜ್ಞಾನಾಮೃತವನ್ನು  ಧಾರೆಯೆರೆದಿರುವುದರಿಂದ ಅವರ ಜನ್ಮ ದಿನವಾದ ಆಷಾಢ ಮಾಸದ ಶುದ್ಧ ಪೂರ್ಣಿಮ ದಿನವನ್ನು ಮಹರ್ಷಿ ವೇದವ್ಯಾಸ ಜಯಂತಿ /ಗುರು ಪೂರ್ಣಿಮಾ ಎಂದು ಶ್ರದ್ಧಾಭಕ್ತಿಯಿಂದ ನಮ್ಮ ಗುರು ಪರಂಪರೆಯ ತವರೂರಾದ ಭಾರತದಲ್ಲಿ ಆಚರಿಸಿ ಊರ್ಜಿತ ಗೊಳಿಸಿರುವುದು ಸ್ತುತ್ಯರ್ಹ.

ನಮ್ಮಲ್ಲಿ ಒಂದು ಸಂಕುಚಿತ ಮನೋಭಾವವಾದ ಶಾಲಾ _ಕಾಲೇಜಿನ ನಾಲ್ಕುಗೋಡೆಗಳ ನಡುವೆ ಪುಸ್ತಕದಲ್ಲಿ ನಮೂದಿಸಿ
ರುವ ವಿಷಯವನ್ನು ಬೋಧಿಸಿದವರು ಮಾತ್ರ ಗುರುಗಳೆಂದು ಪರಿಗಣಿಸಿರುವುದು ಪ್ರಸ್ತುತ. ಆದರೆ ಪ್ರಾಚೀನ ಗುರುಕುಲ ಪದ್ಧತಿಯಂತೆ 64 ವಿದ್ಯಾವಿಷಯಗಳನ್ನು ಕಲಿಸಿದಂತಹ (ಸಂಗೀತ. ನಾಟಕ. ನೃತ್ಯ. ಕರಕುಶಲ ಕೌಶಲ್ಯ. ತೋಟಗಾರಿಕ ಒಕ್ಕಲುತನ. ಚಾಲನೆ. ಪಾಲನೆ. ಆಗಮಶಾಸ್ತ್ರ. ಅಸ್ತ್ರ. ಶಸ್ತ್ರ. ಅಂತ್ರ. ತಂತ್ರ....) ಯಾವುದೇ ಬಗೆಯ ಶಿಕ್ಷಣವನ್ನೇ ಕಲಿಸಿದ್ದರೂ ಅವರೆಲ್ಲರೂ ನಮ್ಮ ಪಾಲಿಗೆ ಪೂಜ್ಯನೀಯ ಗುರುಗಳೆಂದು ಪರಿಗಣಿಸಿ ಗುರುದಕ್ಷಿಣೆಯನ್ನು  ಸಮರ್ಪಿಸಿ
ಗುರುವಿನ ಆಶೀರ್ವಾದ ಪಡೆದು
ಪುನೀತರಾಗುವುದು ನಮ್ಮ ಬದುಕಿನ ತವನಿಧಿಯಾಗಿರುತ್ತದೆ.

ಸಮಸ್ತರಿಗೂ ಗುರು ಪೌರ್ಣಮಿಯ ಶುಭಾಶಯ ತಿಳಿಸುತ್ತಾ  ಪ್ರಣಾಮಗಳೊಂದಿಗೆ :
ಜಿ. ಎಂ. ಆರ್.
ಆನೇಕಲ್.

Happy Sri Krishna Janmastami

ಭಗವದ್ಗೀತೆಯ ಸಾರ ಒಂದು ಅಮೃತದ ಮಡುವಿನಂತೆ ಇದರಲ್ಲಿ ಮಿಂದವರು ಪುನೀತರಾಗುತ್ತಾರೆ.
ಇದೊಂದು ಹೊನ್ನಿನ ಖನಿ ಹೊಕ್ಕವರು ಹೊನ್ನಾಗುತ್ತಾರೆ
           ಇಂತಹ ಜ್ಞಾನ ಸಾರ ಸುಧೆಯ ತವನಿಧಿಯನ್ನು ಮನುಕುಲದ ಹಿತಕ್ಕಾಗಿ ದೈವಾನುಗ್ರಹಿಸಿರುವ ಶ್ರೀ ಕೃಷ್ಣ ಪರಮಾತ್ಮನ ಜಯಂತ್ಯುತ್ಸವದ ಶುಭಾಶಯಳೊಂದಿಗೆ ತಮಗೆ ಭಗವಂತನ ಅನುಗ್ರಹ ಸದಾ ಇರಲೆಂದು ಹಾರೈಸುತ್ತೇನೆ.
ಪ್ರಣಾಮಗಳೊಂದಿಗೆ :
ಜಿ. ಎಂ. ಆರ್.
ಆನೇಕಲ್.





Happy Independence Day