Friday, August 23, 2019

Knowledge Article 13:ಗುರು ಧೀಕ್ಷೆಯ ಮಹಿಮೆ :

*ಜ್ಞಾನೋದ್ದೀಪನ *
:::::::::::::::::::::::::::::::::::::::::::

:ಗುರು ಧೀಕ್ಷೆಯ ಮಹಿಮೆ :
*******

                   ಪಂಡಿತನಿಂದ - ಪಾಮರನವರೆವಿಗೂ   ಸಮಸ್ತರ  ಸರ್ವ ಸಾಧನೆಗೂ ಒಬ್ಬ ಯುಕ್ತ ಗುರುಧೀಕ್ಷೆಯ ಶ್ರೀರಕ್ಷೆ  ಸಾರ್ವಕಾಲಿಕವಾಗಿರುತ್ತದೆ.

          ಅಂತಹ ತ್ರಿಮೂರ್ತಿ ಸ್ವರೂಪಿ ಗುರುವರೇಣ್ಯರ ಪಾದಾರವಿಂದಗಳಿಗೆ ಶಿರಬಾಗಿ, ಉರಸ್ಪರ್ಶನಾಪೂರ್ವಕವಾಗಿ ಕರದ್ವಯಗಳಿಂದ ನಮಿಸಿ, ಅಂತಹ ಗುರುವಿತ್ತ ಶಿಕ್ಷೆ ನಮ್ಮ ಸಾತ್ವಿಕ ಬದುಕಿಗೆ ಶ್ರೀರಕ್ಷೆ ಎಂಬ
ದೀನತೆಯ ಧನ್ಯತೆಹೊಂದುವುದು ಯುಕ್ತ.

ಎಲ್ಲಾ ಋಷಿವರೇಣ್ಯರೂ ತಮ್ಮದೇ ಆದ ವಿಶಿಷ್ಟ ವಾಂಛಿತಫಲಪ್ರಾಪ್ತಿಗಾಗಿ ತಪೋನಿರತರಾಗಿ ಚಿರಸ್ಥಾಯಿಗಳಾಗಿದ್ದರೆ ವೇದವ್ಯಾಸ ಮಹರ್ಷಿಗಳೊಬ್ಬರು ಮಾತ್ರ   ಸರ್ವರಿಗೂ, ಸರ್ವಲೋಕಕ್ಕೂ -   ಸಾರ್ವಕಾಲಿಕವಾಗಿ ಅಗತ್ಯವಿರುವ ಜ್ಞಾನ ರಾಶಿಯನ್ನು ಋಗ್ವೇದ. ಯಜುರ್ವೇದ. ಸಾಮವೇದ. ಅಥರ್ವಣವೇದ ಎಂದು ವಿಭಾಗಿಸಿದಂತೆ ಮನುಕುಲಹಿತಕ್ಕಾಗಿ ಜ್ಞಾನಾಮೃತವನ್ನು  ಧಾರೆಯೆರೆದಿರುವುದರಿಂದ ಅವರ ಜನ್ಮ ದಿನವಾದ ಆಷಾಢ ಮಾಸದ ಶುದ್ಧ ಪೂರ್ಣಿಮ ದಿನವನ್ನು ಮಹರ್ಷಿ ವೇದವ್ಯಾಸ ಜಯಂತಿ /ಗುರು ಪೂರ್ಣಿಮಾ ಎಂದು ಶ್ರದ್ಧಾಭಕ್ತಿಯಿಂದ ನಮ್ಮ ಗುರು ಪರಂಪರೆಯ ತವರೂರಾದ ಭಾರತದಲ್ಲಿ ಆಚರಿಸಿ ಊರ್ಜಿತ ಗೊಳಿಸಿರುವುದು ಸ್ತುತ್ಯರ್ಹ.

ನಮ್ಮಲ್ಲಿ ಒಂದು ಸಂಕುಚಿತ ಮನೋಭಾವವಾದ ಶಾಲಾ _ಕಾಲೇಜಿನ ನಾಲ್ಕುಗೋಡೆಗಳ ನಡುವೆ ಪುಸ್ತಕದಲ್ಲಿ ನಮೂದಿಸಿ
ರುವ ವಿಷಯವನ್ನು ಬೋಧಿಸಿದವರು ಮಾತ್ರ ಗುರುಗಳೆಂದು ಪರಿಗಣಿಸಿರುವುದು ಪ್ರಸ್ತುತ. ಆದರೆ ಪ್ರಾಚೀನ ಗುರುಕುಲ ಪದ್ಧತಿಯಂತೆ 64 ವಿದ್ಯಾವಿಷಯಗಳನ್ನು ಕಲಿಸಿದಂತಹ (ಸಂಗೀತ. ನಾಟಕ. ನೃತ್ಯ. ಕರಕುಶಲ ಕೌಶಲ್ಯ. ತೋಟಗಾರಿಕ ಒಕ್ಕಲುತನ. ಚಾಲನೆ. ಪಾಲನೆ. ಆಗಮಶಾಸ್ತ್ರ. ಅಸ್ತ್ರ. ಶಸ್ತ್ರ. ಅಂತ್ರ. ತಂತ್ರ....) ಯಾವುದೇ ಬಗೆಯ ಶಿಕ್ಷಣವನ್ನೇ ಕಲಿಸಿದ್ದರೂ ಅವರೆಲ್ಲರೂ ನಮ್ಮ ಪಾಲಿಗೆ ಪೂಜ್ಯನೀಯ ಗುರುಗಳೆಂದು ಪರಿಗಣಿಸಿ ಗುರುದಕ್ಷಿಣೆಯನ್ನು  ಸಮರ್ಪಿಸಿ
ಗುರುವಿನ ಆಶೀರ್ವಾದ ಪಡೆದು
ಪುನೀತರಾಗುವುದು ನಮ್ಮ ಬದುಕಿನ ತವನಿಧಿಯಾಗಿರುತ್ತದೆ.

ಸಮಸ್ತರಿಗೂ ಗುರು ಪೌರ್ಣಮಿಯ ಶುಭಾಶಯ ತಿಳಿಸುತ್ತಾ  ಪ್ರಣಾಮಗಳೊಂದಿಗೆ :
ಜಿ. ಎಂ. ಆರ್.
ಆನೇಕಲ್.

No comments:

Post a Comment