Friday, August 23, 2019

Knowledge Article 8::ಪಂಚ ತಂತ್ರಗಳ ಪರಿಪಾಲನೆ :

*ಜ್ಞಾನೋದ್ದೀಪನ *
:::::::::::::::::::::::::::::::::::::::::::

:ಪಂಚ ತಂತ್ರಗಳ  ಪರಿಪಾಲನೆ :
*********

             ಸಕಲ ಜೀವ ಸಂಕುಲ ದಲ್ಲಿ ಮನುಷ್ಯ ಅತ್ಯಂತ ಪ್ರಜ್ಞಾವಂತ ಹಾಗೂ ಬುದ್ಧಿ ಜೀವಿ ಎಂದು ಪರಿಗಣಿಸಿದ್ದಾಗ್ಯೂ ಪ್ರಸ್ತುತ ಮಾನವ ತಾನು ಪಾಲಿಸಿ ಮೇಲ್ಮೆಗೊಳಿಸ ಬೇಕಾದಂತಹ ಮಾನವೀಯತೆ ಖಂಡಿಸಿ. ಸಮಾಜದ ಮೌಲ್ಯಗಳನ್ನು ಧಿಕ್ಕರಿಸಿ. ಪರಮ ಪಾವನವಾದ ಮಾನವ ಜನ್ಮದ ಸಾತ್ವಿಕತೆಯ ಬಗ್ಗೆ ಲವಲೇಶವೂ ಭಯ - ಭಕ್ತಿ  ಇಲ್ಲದಂತೆ ಕ್ಷಣಿಕ ಉನ್ಮಾದಕ್ಕಾಗಿ ಮರ್ಧಿಸಿ ಅತಂತ್ರ. ಕುತಂತ್ರ. ಷಡ್ಯಂತ್ರ & ಪಾರತಂತ್ರಗಳಲ್ಲಿ ನಿರತನಾಗಿರುವ ಈ ಸಂಧಿಗ್ಧ ಪರಿಸ್ಥಿತಿಯಲ್ಲಿ ವಿಷ್ಣುಶರ್ಮಾ   
ವಿವೇಚನಾಶೀಲತೆಯಿಂದ ವಿಶ್ಲೇಷಿಸಿರುವ   ಪಂಚತಂತ್ರದ 
ಸಾರಸುಧೆಯನ್ನು ಸವಿದು ಸರ್ವರ ಬದುಕನ್ನು ಬಂಗಾರವಾಗಿಸೀಕೊಂಡು          ಸತ್ವೋತ್ಕೃಷ್ಠ ಆದರ್ಶ ಜೀವನ ಶೈಲಿಯ ನ್ನು ಔನ್ನತ್ಯಗೊಳಿಸುವುದಕ್ಕೆ ಪೂರಕ ಈ ಉಲ್ಲೇಖಿತ ಪಂಚತಂತ್ರ ಸಾರ :

1* ಮಿತ್ರಬೇದ :   ಆಪತ್ಕಾಲಕ್ಕಾದವನೆ ಆಪ್ತಮಿತ್ರ.
      ಆದರೆ, ಸ್ವಾರ್ಥವೇ ತುಂಬಿತುಳುಕುತ್ತಿರುವ ಪ್ರಸ್ತುತ ಸಮಾಜದಲ್ಲಿ ನಿಷ್ಕಪಟ ಮಿತ್ರರ
ಲಭ್ಯತೆ ಮರೀಚಿಕೆಯಾಗಿದೆ.
ಆದುದರಿಂದ, ಯಾರೊಂದಿಗೆ ಮಿತ್ರತ್ವ ಬೆಳೆಸಬೇಕು - ಯಾರೊಂದಿಗೆ ಮಿತ್ರತ್ವ ಬೆಳೆಸ  ಲ ಬಾರದು ಎಂಬ ವಿವೇಚನೆ ಅನಿವಾರ್ಯವಾಗಿದೆ.

*2.ಮಿತ್ರಪ್ರಾಪ್ತಿ :
         ಅಂತರಂಗದ ಮೋಸಗಾರ - ಬಹಿರಂಗದ ವೇಷಗಾರರೇ ಹೇರಳವಾಗಿರುವ ಪ್ರಸ್ತುತ ಸಮಾಜದಲ್ಲಿ ನಿಷ್ಕಪಟ. ನಿಸ್ವಾರ್ಥ & ನಿಷ್ಠಾವಂತ ಸ್ನೇಹಿತರನ್ನು ಹಂಸ ಪಕ್ಷಿ ನೀರಿನಲ್ಲಿ ಅಡಕವಾಗಿರುವ ಕ್ಷೀರವ (ಹಾಲ) ನ್ನು ಹೀರುವಂತೆ   ಅತ್ಯುತ್ತಮರೊಂದಿಗೆ ಗೆಳೆತನ ಬೆಳೆಸುವುದು ಯುಕ್ತ.

*3.ಕಾಕೋಲುಕೀಯಮ್ :
           ಕಾಗೆ&ಗೂಬೆಯ ನಡುವಿನ ವೈರತ್ವ ತಾರಕಕ್ಕೇರಿದ ವಿಚಾರ ಧಾರೆಯನ್ನು ಅರಿತು ಮಿತ್ರತ್ವ ಬೆಳೆಸಬೇಕು ಎಂಬ ವಿವೇಚನೆ ಪ್ರಸ್ತುತ.

*4.ಲಬ್ದ ಪ್ರಣಾಶನಮ್ :
          ಪ್ರಾಪ್ತಿಯಾದ ಹಣ /ಸಂಪತ್ತು ಹೇಗೆ ನಾಶವಾಗುತ್ತದೆ. ಸಕ್ರಮವಾಗಿ ಧರ್ಮ ರೀತಿಯಿಂದ ಶ್ರಮಿಸಿ ಗಳಿಸಿದ್ದು ಮಾತ್ರ ನಮ್ಮದಾಗಿರುತ್ತದೆ.          ಆದರೆ, ಮೋಸ - ವಂಚನಾಪೂರ್ವಕ ಅಧರ್ಮದ ಗಳಿಕೆ ನಮ್ಮ ಆತ್ಮಸಾಕ್ಷಿಗೂ ದ್ರೋಹ ಮಾಡಿದಂತೆ ನಮ್ಮನ್ನು ಬರಿದಾಗಿಸಿ ನಶಿಸುತ್ತದೆ.

*5. ಅಪರೀಕ್ಷಿತಕಾರಕಮ್ :
               ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಿ ನಿರ್ಧರಿಸಬೇಕು. ಆದರೆ, ಇಂದು ಬಹುಪಾಲು ಸಮಯೋಚಿತ ಸ್ವಾರ್ಥ ಕಾರ್ಯ ಸಾಧಕರ ಆಷಾಢ ಭೂತಿ ದೂರಿನ ಮಾತುಗಳಿಗೆ ಮರಳಾಗಿ ಉತ್ತಮೋತ್ತಮ ಸ್ನೇಹಿತರ ತೇಜೋವಧೆ ಮಾಡಿ ಗೆಳೆತನಕ್ಕೆ ಭಂಗ ತರುವ ಸಂಗತಿ ಅರಿತು ಅಂತಹ ಲಭ್ಯ ಉತ್ತಮ ಸ್ನೇಹಿತರ ಬಗ್ಗೆ ಸಮಗ್ರವಾಗಿ      ವಿಚಾರ ಮಾಡಿ ಸ್ವಂತ ವಿವೇಚನೆ ಯಿಂದ ವರ್ತಿಸುವುದು ಯುಕ್ತ.

ಪ್ರಣಾಮಗಳೊಂದಿಗೆ :
 ಜಿ. ಎಂ. ಆರ್.
ಆನೇಕಲ್.

No comments:

Post a Comment