*ಗುಣಾತ್ಮಕ ಶಿಕ್ಷಣದ ವಿನಾಶವ
ವೇ  ರಾಷ್ಟ್ರದ  ವಿನಾಶ. *
++++++++++++++++++++
                  ಯಾವುದೇ ಒಂದು ರಾಷ್ಟ್ರದ ನಾಶಕ್ಕೆ ಅಣುಬಾಂಬ್
ಅಥವಾ ಬೃಹತ್ ಗಾತ್ರದ ಕ್ಷಿಪಣಿಗಳ ಬಳಕೆ ಅಗತ್ಯವಿರುವುದಿಲ್ಲ. ಬದಲಾಗಿ ಗುಣಾತ್ಮಕ ಶಿಕ್ಷಣವನ್ನು ಕೆಳಮಟ್ಠಕ್ಕೆ ಇಳಿಸುವುದರೊಂದಿಗೆ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ನಕಲು ಮಾಡಿ ಮೋಸಮಾಡಲು ಅನುವಾಗಿಸುವುದೊಂದೇ ಸಾಕು. (ಮಹಾಮಾನವತಾವಾದಿಯಾಗಿದ್ಧ ನೆಲ್ಸನ್ ಮಂಡೇಲಾ ರವರ
ಪ್ರಖ್ಯಾತ ಹೇಳಿಕೆ.)
ರಾಷ್ಟ್ರದ ಸರ್ವೋನ್ನತಿಯ  ಸಾಧಕ _ಬಾಧಕಗಳು ಆ ರಾಷ್ಟ್ರದಲ್ಲಿ ದೊರೆಯುವ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಅವಲಂಬಿಸಿರುತ್ತದೆ.
ಡೋಂಗಿ/ಅರೆಬುದ್ಧಿಯ ವೈಧ್ಯರ ಕೈಯಲ್ಲಿ ಸಾಯುವ ರೋಗಿಗಳನ್ನು, ಸ್ಪುಟವಾಗದ/ಸಂದೇಹಾಸ್ಪದವಾದ ಸ್ತಪತಿಗಳ
ಯೋಜನೆ ನಿರ್ಮಿಸಿದ ಕಟ್ಟಡಗಳು ಉರುಳುವ ಅಪಾಯವನ್ನು, ಅಪ್ರಾಮಾಣಿಕ ಬ್ಯಾಂಕ್ ಅಧಿಕಾರಿಗಳು, ಆರ್ಥಿಕ ತಜ್ಞರು. & ಲೆಕ್ಕಾಧಿಕಾರಿಗಳಿಂದ ಸೋರಿಕೆಯಾಗುವಂತಹ ಸಾರ್ವಜನಿಕರ ಹಣ, ಮಿಥ್ಯ /ಕಲ್ಪಿತ ಧಾರ್ಮಿಕ ವಿಧ್ವಾಂಸರ ಕೈಯಲ್ಲಿ ಹತ್ಯೆಯಾಗುತ್ತಿರುವ
ಮಾನವೀಯತೆ, ಭ್ರಷ್ಟ ಪೋಲೀಸ್ ಪಡೆಯಿಂದ ಕ್ಷೀಣಿಸುತ್ತಿರುವ ಕಾನೂನು & ಸುವ್ಯವಸ್ಥೆ. ಹಾಗೂ ಭ್ರಷ್ಠ ನ್ಯಾಯಮೂರ್ತಿಗಳ ಕೈಯಿಂದ ಕಣ್ಮರೆಯಾಗುತ್ತಿರುವ ನಿಷ್ಪಕ್ಷಪಾತವಾದ ನ್ಯಾಯವನ್ನು ನಿಗ್ರಹಿಸುವ ಸಲುವಾಗಿ ಶೀಲಸಂವರ್ಧಿಸುವ. ರಾಷ್ಟ ನಿರ್ಮಾಣ ಮಾಡುವಂತಹ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡುವ ಅನಿವಾರ್ಯತೆಯ 
ತೀವ್ರತೆ ಇದೆ. ಆದರೆ, ಪ್ರಸ್ತುತ ಲಭಿಸುತ್ತಿರುವ ಭೂಷಣ ರೂಪದ ಶಿಕ್ಷಣ ವ್ಯವಸ್ಥೆಯೇ
ರಾಷ್ಟ್ರವನ್ನು ವಿನಾಶದೆಡೆಗೆ ನೂಕುತ್ತಿರುವುದು ಶೋಚನೀಯ ಸಂಗತಿ ಆಗಿದೆ.
ಪ್ರಸ್ತುತ ನಮ್ಮ ಶಿಕ್ಷಣ ವ್ಯವಸ್ಥೆ ಪದವಿ /ಯೋಗ್ಯತಾ ಪತ್ರಗಳನ್ನು ನೀಡುತ್ತಿದೆಯೇ ಹೊರತು ಯೋಗ್ಯತೆಯನ್ನು ಪುಷ್ಟೀಕರಿಸುತ್ತಿಲ್ಲ.
ಪ್ರಸ್ತುತವಾಗಿರುವ ನಮ್ಮ ಡೋಂಗಿ ಶಿಕ್ಷಣ ವ್ಯವಸ್ಥೆ ಪರೀಕ್ಷೆ
ಗಳ ಕೇಂದ್ರಿತ ಶಿಕ್ಷಣ ಮತ್ತು ಅಂಕಗಳನ್ನು ಆಧರಿಸಿರುವ ಪರೀಕ್ಷೆಗಳಿಗೆ ಮಾತ್ರ ಸೀಮಿತವಾಗಿದೆಯೇ ಹೊರತು ಫಲಪ್ರಧಾಯಕ. ಪರಿಣಾಮಕಾರಿ. ಸೃಜನಶೀಲ.
ಶೀಲಸಂವರ್ಧಿಸುವ. ಮಾನವೀಯ ಮೌಲ್ಯಗಳನ್ನು ಅನುಸರಿಸುವಂತಹ ದೂರದೃಷ್ಟಿಯುಳ್ಳ ಶಿಕ್ಷಣ ಪೂರೈಕೆಯನ್ನು ಮೌಢ್ಯತೆಯಿಂದ ತಿರಸ್ಕರಿಸಿದೆ.
ಇಂದು ನಾವು ಹೇಗೆ & ಏನಾಗಿದ್ದೇವೆಯೋ? ಅದು ಹಿಂದೆ ನಾವು ಪಡೆದಿರುವ ಗುಣಾತ್ಮಕ ಶಿಕ್ಷಣದ ಪ್ರತಿಫಲವೇ ಆಗಿದೆ.
ಆದರೆ, ಇಂದಿನ ಶಿಕ್ಷಣ ಸಾಗುತ್ತಿರುವ ಹಾದಿಯ ಭವಿಷ್ಯ...........?
ಪ್ರಣಾಮಗಳೊಂದಿಗೆ :
 ಜಿ. ಎಂ. ಆರ್.
ಆನೇಕಲ್.
 
No comments:
Post a Comment