Sunday, September 8, 2019

Knowledge Article 15:🙏ಶಿಕ್ಷಕರ ದಿನಾಚರಣೆ 🙏


*ಜ್ಞಾನೋದ್ದೀಪನ *
:::::::::::::::::::::::::::::::::::::::::::::


🙏ಶಿಕ್ಷಕರ  ದಿನಾಚರಣೆ 🙏
*********


*ಬಹುಮುಖ ಪ್ರತಿಭೆಗಳೊಂದಿಗೆ ಮಿನುಗುವ ವಜ್ರ.


*ಭೌದ್ಧಿಕವಾಗಿ ಸರ್ವಾಧಿಕಾರಿ.


*ದಾರ್ಶನಿಕವಾಗಿ ಏಕೇಶ್ವರವಾದಿ.


*ಐತಿಹಾಸಿಕವಾಗಿ ಸಾರ್ವಕಾಲಿಕ ಚಿರಸ್ಥಾಯಿ.


*ಭೌಗೋಳಿಕವಾಗಿ ಗೋಳ.


*ಸಾಂಸ್ಕೃತಿಕವಾಗಿ ವಿಶ್ವಸಂಪ್ರೀತ.


*ಮಾನವೀಯ ಸ್ವಭಾವದಲ್ಲಿ ಅವಿಭಾಜ್ಯ.


*ಶೈಕ್ಷಣಿಕವಾಗಿ ಪ್ರೌಢ ಪಾಂಡಿತ್ಯವಂತ


*ಬೋಧನೆಯಲ್ಲಿ ಅದ್ವಿತೀಯ
ನಿಷ್ಣಾತ.......
                   ಆಗಿದ್ದಂತೆ  ಸ್ವತಂತ್ರ್ಯ ಭಾರತದ ರಾಷ್ಟ್ರಪತಿ ಯಾಗಿ ಪರಮೋತ್ಕಷ್ಠವಾದ ರಾಷ್ಟದ ಪ್ರಥಮ
ಪ್ರಜೆಯ
ಸ್ಥಾನಕ್ಕೆ ಭಾಜನರಾಗಿದ್ದ ಭುವನದ ಗುರು ಡಾ:ಎಸ್. ರಾಧಾಕೃಷ್ಣನ್ ರವರ ಜಯಂತಿಯ ಫಲಶೃತಿಯಾಗಿ
1962 ರಿಂದ ಗುರುವೃಂದಕ್ಕೆ ಪ್ರಾಪ್ತಿಯಾಗಿರುವ "ಶಿಕ್ಷಕರ ದಿನಾಚರಣೆ" ಈ ಶುಭದಿದಂದು
ಪೂಜ್ಯನೀಯ ರಾಧಾಕೃಷ್ಣನ್ ರವರಲ್ಲಿದ್ದಂತಹ ಅವಿಚ್ಛಿನ್ನವಾದ ಮೌಲ್ಯಗಳಲ್ಲಿ
ಕೆಲವನ್ನಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ವೃತ್ತಿಯಲ್ಲಿ ಅನುಷ್ಠಾನಗೊಳಿಸಿಕೊಳ್ಳುವುದರ
ಮೂಲಕ
ಶಿಕ್ಷಕರ ದಿನಾಚರಣೆಯನ್ನು ಫಲಪ್ರಧಾಯಕವಾಗಿಸೋಣ.


ತಮವ ಕಳೆದು ಬೆಳಕು ತಂದ ಶುದ್ಧ ಬದ್ಧ ನಿಷ್ಠಾವಂತ ಸಮಸ್ತ
ಗುರುವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ಭಕ್ತಿಪೂರ್ವಕ ಪ್ರಣಾಮಗಳೊಂದಿಗೆ :
 ಜಿ. ಎಂ. ಆರ್.
ಆನೇಕಲ್.

No comments:

Post a Comment