Sunday, September 29, 2019

*ಮಾತಿನ ಮಹಿಮೆ.... ..... ವ್ಯಕ್ತಿತ್ವದ ಹಿರಿಮೆ *


*ಮಾತಿನ ಮಹಿಮೆ....
       ..... ವ್ಯಕ್ತಿತ್ವದ ಹಿರಿಮೆ *
::::::::::::::::::::::::::::::::::::::::::::

              ಮಾತು ಮನುಕುಲದ
ಜ್ಯೋತಿ. ಮಾತಿನ ಮೂಲ ಯೋಚನಾ ಲಹರಿ. ಯೋಚನಾ ಲಹರಿಗೆ ಆದಿ ವಿವೇಚನಾಶೀಲತೆ
ಮಾತು ಮಾನವನ ಯೋಚನಾ ಲಹರಿಗೆ ತೊಡಿಸುವ ಉಡುಪಿನಂತಿರುತ್ತದೆ.
ಮಾತು ಮಾನವನಿಗೆ ದೈವದತ್ತವಾಗಿ ಪ್ರಾಪ್ತವಾಗಿರುವ
ಸಾರ್ವಭೌಮತ್ವದ ವರವಾಗಿದೆ.

ಮಾತು ಮಾಣಿಕ್ಯದಂತಹ ಆಭರಣ ವಾಗಿದೆ.
ಅಂತೆಯೇ, ಅರಿತು ನುಡಿದರೆ ಮಾತು. ಮರೆತು ಮರ್ಧಿಸಿ ನುಡಿದರೆ ಮೃತ್ಯು.
ಮಾತು ಮೃದುವಾಗಿ, ಮಧುರವಾಗಿ, ಹಿಂಪಾಗಿ & ಆಹ್ಲಾದಕರವಾಗಿದ್ದು  ಆಲಿಸುವವರಆನಂದಕ್ಕೆ ಪುಷ್ಟೀಕರಿಸುವಂತಿರಬೇಕು.

ಮಾತುಗಾರಿಕೆಯು ಮಾತುಗಾರರನ್ನು ಸಿದ್ಧ. ಬದ್ಧ &
ಶುದ್ಧ ವ್ಯಕ್ತಿಗಳನ್ನಾಗಿಸುತ್ತದೆ.

ಮಾತುಗಾರನ ಮಾತುಗಳು :
         ಮುತ್ತಿನ ಹಾರದಂತೆ,
         ಮಾಣಿಕ್ಯದ ದೀಪ್ತಿಯಂತೆ
        ಸ್ಪಟಿಕದ   ಶಲಾಕೆಯಂತೆ,
        ಕಿವಿಗೆ     ಹಿಂಪಾದಂತೆ
         ಮನಕ್ಕೆ ಮಧುರವಾದಂತೆ
        ಆತ್ಮಕ್ಕೆ ಆನಂದವಾದಂತೆ
                           ಇರ ಬೇಕು.

ವಾಕ್ಚಾತುರ್ಯ. ವಾಕ್ಪಟುತ್ವ.
ವಾಗ್ವಾದ. ವಾಗ್ದಾಳಿ. ವಾಕ್ಸಮರ
ವಾಕ್ಶಬ್ದಾಡಂಬರ. ಇವೆಲ್ಲವೂ ಸಹಾ ಮಾತಿನ ಮಹಿಮೆ ಗೆ ಪೂರಕವಾಗಿವೆ.

. ಮಾತಿನ ಪ್ರೌಡಿಮೆ. ತಾಳ್ಮೆ.
ಮೇಲ್ಮೆ. ಒಲುಮೆ. ನಲುಮೆ.
ಹಿರಿಮೆ ಗರಿಮೆ. ಗಹನತೆ &
ಮಹನತೆ ಈ ಸಂಕೀರ್ಣ ಸಮಾಜದಲ್ಲಿ ಎಂತಹ ಸಂಧಿಗ್ಧ ಸನ್ನಿವೇಶವನ್ನೂ ಸಹಾ ನಿಭಾಯಿಸುವ ಯುಕ್ತ ಶೀಲ
ಶಕ್ತಿಯನ್ನೊಂದಿದೆ.

ಹಿತಕರವಾದ ಸರ್ವೋತ್ಕೃಷ್ಟ
ಮಾತು :
ನಿಖರವಾಗಿ. ಸಮಗ್ರವಾಗಿ.
ಸ್ಪಷ್ಟವಾಗಿ. ಅಪ್ಪಟವಾಗಿ. ಸರಳವಾಗಿ. ಪ್ರಜ್ಞಾಪೂರ್ವಕವಾಗಿ
ದ್ವನಿ ಏರಿಳಿತ ವಾಗಿ
ಸಮಯೋಚಿತವಾಗಿ. ಭಾಷಾ ಹಿಡಿತದೊಂದಿಗೆ ಆಲಿಸುವವರಿಗೆ ಆಹ್ಲಾದಕರವಾಗಿರಬೇಕು.
ಮಾತು ಮನೋವೇದನೆಗೆ
ಅವಕಾಶ ನೀಡದಂತೆ ಮನಸ್ಸು & ಆತ್ಮಾನಂದಕ್ಕೆ ಪೂರಕವಾಗಿರ
ಬೇಕು.
Think before speak. Otherwise You are Blink
ಅರ್ಥಾತ್, ಮಾತಿಗೆ ಮೊದಲು ಯೋಚಿಸಿ ಮಾತನಾಡು ಇಲ್ಲವಾದರೆ ನೀನು ಮೂಡನಾಗುತ್ತೀಯ.

ನಮ್ಮ ನಡೆ ಮತ್ತು ನುಡಿ ಅಬೇಧ್ಯವಾಗಿ ಆದರ್ಶನೀಯವಾಗಿರಬೇಕು.

ಪ್ರಣಾಮಗಳೊಂದಿಗೆ :
 ಜಿ. ಎಂ. ಆರ್.
ಆನೇಕಲ್.



No comments:

Post a Comment