Sunday, September 8, 2019

Knowledge Article 18: Power of Knowledge

:ನ  ಹಿ ಜ್ಞಾನೇನ ಸದೃಶಂ
          ಪವಿತ್ರಮಿಹ ವಿದ್ಯತೇ!
×××××××××××××××××××××


           ಭೂಲೋಕದಲ್ಲಿ ಕರ್ಮವೆಸಗಲು ಜನ್ಮಿಸಿದ ಪ್ರತಿಯೊಬ್ಬರೂ ಪರಿಪಾಲಿಸಿ ಪುನೀತರಾಗಲು ಶ್ರೀ ಕೃಷ್ಣ
ಪರಮಾತ್ಮ ಕುರುಕ್ಷೇತ್ರದ ಭೀಷ್ಮ ಪರ್ವದಲ್ಲಿ ಅರ್ಜುನನ ಮೂಲಕ ಇಡೀ ಜಗತ್ತಿಗೆ ಉಪದೇಶಿಸಿರುವ
ಭಗವದ್ಗೀತೆಯ  ಸಾರ ಸುಧೆ ಯಲ್ಲಿ ಜ್ಞಾನಕ್ಕೆ ಮಿಗಿಲಾದ ಪವಿತ್ರ ಸರಕು _ಸಂಪತ್ತು ಪ್ರಪಂಚದಲ್ಲಿ
ಲಬಿಸಲಾರದು ಎಂದು ಸಾರಿದ್ದಾರೆ.


          ಅಂತೆಯೇ, ಗಂಗಾಜಲವೂ ಪರಮ ಪವಿತ್ರವಾದುದೆ ಆಗಿದೆ.
ಆದರೆ, ಗಂಗಾಜಲವು ನಮ್ಮ ಶರೀರಕ್ಕೆ ಅಂಟಿಕೊಂಡಿರುವ ಕೊಳಕು /ಮಲೀನತೆಯನ್ನು ಪ್ರಕ್ಷಾಲನೆ
(ತೊಳೆದು ಸ್ವಚ್ಛಗೊಳಿಸುವುದು) ಮಾಡಿ ಶುದ್ಧೀಕರಿಸುತ್ತೆ.
ಈ ಶುದ್ಧೀಕರಣವು ಕ್ಷಣಿಕವಾದುದಾಗಿದ್ದು ಪುನಃ ನಮ್ಮ ಮೈಯಲ್ಲಿ ಧೂಳು /ಕೊಳಕು ಆವರಿಸಿ
ಮಲೀನಗೊಳ್ಳುವಿಕೆಯು ಪುನರಾವರ್ತಿಸುತ್ತಿರುತ್ತದೆ.
          ಆದರೆ, ಜ್ಞಾನವೆಂಬ ದೀವಟಿಗೆಯು ನಮ್ಮ ಅಜ್ಞಾನ ಅಳಿಸಿ ಸುಜ್ಞಾನ ಬೆಳೆಸಿ. ವಿವೇಕವನ್ನು ಬೆಳಗಿಸಿ
ನಮ್ಮ ಮನಸ್ಸು ಮತ್ತು ದೇಹಕ್ಕೆ ಅಂಟಿರುವ ಧೂಳು/ಕೊಳಕನ್ನು ತೊಳೆದು ಶುದ್ಧೀಕರಣ ಮಾಡುವುದರ
ಜೊತೆಗೆ ಮಂದೆ ಎಂದಿಗೂ ನಮ್ಮ ದೇಹ. ಮನಸ್ಸು & ಆತ್ಮವನ್ನು ಕೊಳಕು & ಪಾಪಕೃತ್ಯಗಳಿಂದ ದೂರವಿರಿಸಿ
ಸದಾ ನಿರ್ಮಲ/ನಿರ್ಮೋಹಿತಗೊಳಿಸಿ ಶಾಶ್ವತವಾಗಿ ತ್ರಿಕರಣ ಶುದ್ಧಿಯಿಂದ ಮೇಲ್ಮೆಗೊಳಿಸಿರುತ್ತದೆ.
ಅಂತೆಯೇ ಜ್ಞಾನ ತವನಿಧಿಯು ಸರ್ವೋತ್ಕೃಷ್ಟ & ಸರ್ವೋನ್ನತವಾದುದಾಗಿದೆ.


ಜೋ ಜ್ಞಾನ್ ಜಾನ್ ಕರ್
ಜಾಥಾ ಹೈ
ವೋ ಜಗ್ ಮೆ ಅಮರ್
ರಹತಾ ಹೈ.


ಪ್ರಣಾಮಗಳೊಂದಿಗೆ :
ಜಿ. ಎಂ. ಆರ್.

ಆನೇಕಲ್.

No comments:

Post a Comment