*ಅಸೂಯೆ ಯ ನಿರ್ದಯತೆ
++++++++++++++++++++
ಅಸೂಯೆ ಯು ನಿಕೃಷ್ಠ ಗುಣವನ್ನು ಔನ್ನತ್ತೀಕರಿಸುತ್ತೆ.
ಅಂತೆಯೇ ಇದು ಋಣಾತ್ಮಕತೆ-
- ಯನ್ನು ಗುರುತಿಸುತ್ತೆ
ಅಸೂಯೆ ಚಾರಿತ್ರ್ಯವನ್ನು
ಹಾಳಾಗಿಸುತ್ತೆ.
ಅಂತೆಯೇ ಇದುಮಾನವೀಯ-
_ತೆಗೆ ಲಕ್ಷವನ್ನು ಧಿಕ್ಕರಿಸುತ್ತೆ.
ಅಸೂಯೆ ಹೊಂದಾಣಿಕೆಯನ್ನು
ಅಡ್ಡಿಪಡಿಸುತ್ತೆ.
ಅಂತೆಯೇ ಗುರುತರ ಆಕರ್ಷಣೆ - ಯನ್ನು ಧಾರಣೆಗೊಳಿ ಸುತ್ತ್ತೆ.
ಅಸೂಯೆ ತನ್ನ ನಿರಂತರ-
_ತೆಯನ್ನು ಮುಂದುವರೆಸುತ್ತೆ.
ಅಂತೆಯೇ ಇದು ನಿಷ್ಠೆಯನ್ನು
ನಿರಾಕರಿಸುತ್ತೆ.
ಅಸೂಯೆಯು ಅಗತ್ಯತೆ
ಹೊಂದುವುದನ್ನು ತಿರಸ್ಕರಿಸುತ್ತೆ
ಅಂತೆಯೇ ಇದು ಧಾರಣೆಯೊಂದಿಗೆ ಅಸ್ತಿತ್ವ_
_ವನ್ನು ಹೊಂದಿರುತ್ತೆ.
ಅಸೂಯೆಯು ದೈವತ್ವವನ್ನು
ನಿಗ್ರಹಿಸುತ್ತೆ. ಅಂತೆಯೇ ಇದು ಪಾವೀತ್ರ_
_ತೆಯನ್ನು ನಿರಾಕರಿಸುತ್ತೆ.
ಅಸೂಯೆಯು ಹಳದಿ ಬಣ್ಣವನ್ನು ಪ್ರತಿನಿಧಿಸುತ್ತದೆ.
ಅಂತೆಯೇ ಇದು ಮನಸ್ಸಿನ
ಸುಮಧುರತೆಗೆ ಅಡ್ಡಿಪಡಿಸುತ್ತೆ.
ಅಸೂಯೆಯು ಹೊಂದಿರುವ _
_ವನನ್ನು ಕೊಳ್ಳುತ್ತದೆ.
ಅಂತೆಯೇ ಇದು ಅಧಿಕ
ಒತ್ತಡವನ್ನು ಸೃಷ್ಟಿಸುತ್ತೆ.
ಅಸೂಯೆಯು ಕ್ಷುಲ್ಲಕತನವನ್ನು
ಹೆಚ್ಚಿಸುತ್ತೆ.
ಅಂತೆಯೇ ಇದು ಸುಕೃಷ್ಠತೆಯನ್ನು ವಿರೋಧಿಸುತ್ತೆ
ಅಸೂಯೆಯ ನಿರ್ದಯತೆಯ-
ನ್ನುಕೊನೆಗೊಳಿಸಲೇಬೇಕಾಗುತ್ತೆ
ಇಲ್ಲವಾದಲ್ಲಿ ಇದು ಮನುಕುಲ-
_ವನ್ನು ನೋಯಿಸುತ್ತೆ.
ಜ್ಞಾನೋದ್ದೀಪನ *
ಪ್ರಣಾಮಗಳೊಂದಿಗೆ :
ಜಿ. ಎಂ. ಆರ್
ಆನೇಕಲ್
No comments:
Post a Comment