Sunday, September 29, 2019

* ಮೋಹದ ಬುದ್ಧಿ _ _ ಸರ್ವ ನಾಶದ ಸಿದ್ಧಿ *

* ಮೋಹದ ಬುದ್ಧಿ _
            _ ಸರ್ವ ನಾಶದ ಸಿದ್ಧಿ *
:::::::::::::::::::::::::::::::::::::::::::::

         ಮೋಹದ ದಾಹ ಎಂದೆಂ
ದಿಗೂ ನೀಗಿಸಲಾಗದ ತವನಿಧಿ.

ಮೋಹಪರವಶತೆಗೆ ಮಾನವರೇ ಅಲ್ಲದೆ ದೈವಾಂಶ ಸಂಭೂತರೂ
ಸಹಾಅಧೀನರಾಗಿದ್ದಾರೆ.

ಆದರೆ, ಮಾನವನ ಮೋಹ
ಸ್ವಾರ್ಥದ ಕೂಪವಾಗಿದ್ದರೆ,
ದೈವ ಲೀಲೆಯ ಮೋಹ ಮನುಕುಲಹಿತ ಪರ ಲೋಕ
ಕಲ್ಯಾಣಾರ್ಥವಾಗಿರುತ್ತೆ.

ಸ್ತ್ರೀ ಮೋಹದ ತಾಪಕ್ಕೆ ಬಲಿಯಾಗಿ ಅಳಿದ ರಾವಣ

ರಾಜಭೋಗದ ಮೋಹಕ್ಕೆ ಮಣಿದು ಮಡಿದ ಧುರ್ಯೋಧನ

ಸರ್ವಲೋಕಗಳ ಸಾರ್ವಭೌಮತೆಯ ಮೋಹಕ್ಕೆ
ಬಲಿಯಾದ ಹಿರಣ್ಯಕಶಿಪು

         ಅಂತಹ ನಿದರ್ಶನಗಳ
ಅರಿವಿದ್ದಾಗ್ಯೂ ಕಣ್ಣು ಕಾಣದ ಗಾವಿಲರಂತೆ ಮರ್ಧಿಸಿ ಮೋಹದ ಮತ್ತಿಗೆ ಮಾರುಹೋಗಿರುವ ಮಾನವ ಮಾನವೀಯತೆಯನ್ನು ಧೂಳೀಪಟವಾಗಿಸಿ ತನ್ನ ಜೀವನದಲ್ಲಿ ನೆಮ್ಮದಿಗೆ ನೆಲೆಇಲ್ಲದಾಗಿಸಿರುವುದು ಸ್ವಯಂಕೃತ ಅಪರಾಧವೇ ಆಗಿದೆ.

ದೇವರ ಮನೆಯು ಈ ಧರೆಯೆಲ್ಲಾ ಬಾಡಿಗೆದಾರರು
ನಾವುಗಳೆಲ್ಲಾ
                   ಎಂಬುದರ ಅರಿವಿದ್ದಾಗ್ಯೂ ತಾತ್ಕಾಲಿಕ ತಾಣಗಳಂತಿರುವ ಐಷಾರಾಮಿ
ಮನೆಗಳ ನಿರ್ಮಾಣಕ್ಕಾಗಿ ಅಪಾರ ಪ್ರಮಾಣದ ಹಣ ಖರ್ಚು ಮಾಡುವ ಪ್ರವೃತ್ತಿಯೂ
ಸಹಾ ಮೋಹದ ಉನ್ಮಾದವಾಗಿದೆ.

ಅಗತ್ಯಕ್ಕಿಂತಲೂ ಅಧಿಕವಾಗಿ ಶೇಖರಿಸಿ ದುಂದುವೆಚ್ಚಕ್ಕೆ ಸಜ್ಜಾಗಿ ಸಂಭ್ರಮಿಸುವುದು
ಮೋಹದ ದಾಹವೇ ಆಗದೆ.

ಮೋಹದ ಬುದ್ಧಿಯು ಸದಾ ಸರ್ವನಾಶದ ಸಿದ್ಧಿಯಾಗಿರುತ್ತದೆ.

             ಜೀವನದ ಕಲೆಯ ಬೆಲೆ ತಿಳಿದವನು ಮೋಹದ ಬುದ್ಧಿಯನ್ನು ಖಂಡಿಸಿ, ತನ್ನ ಉದಾರತೆಯನ್ನು ಮಂಡಿಸಿ
ಯುಕ್ತ ಭಾಳ್ವೆಗೆ ಸಶಕ್ತನಾಗುವುದು ಸತ್ವಯುತ.

Infatuation is an Assassination of the Purity and Charity.

ಪ್ರಣಾಮಗಳೊಂದಿಗೆ :
ಜಿ. ಎಂ. ಆರ್.
ಆನೇಕಲ್.
ಜ್ಞಾನೋದ್ದೀಪನ :

No comments:

Post a Comment