Sunday, September 29, 2019

:ದಶಾವತಾರ ವಿಚಾರಧಾರೆ :

:ದಶಾವತಾರ ವಿಚಾರಧಾರೆ :
++++++++++++++++++

           ಸಮಸ್ತ ಜೀವ ಸಂಕುಲ
ದ ಪಾಲನಕರ್ತನಾದ ಮಹಾ
ವಿಷ್ಣು ಯುಗಾನುಕ್ರಮದಲ್ಲಿ ಮನುಕುಲಕ್ಕೆ ದಾನವರಿಂದ ಉಪಟಳ ಉಂಟಾದಾಗಲೆಲ್ಲಾ ಸಮಯೋಚಿತವಾದ ತಕ್ಕಂತಹ
ಅವತಾರದಲ್ಲಿ ರೂಪತಾಳಿ ದೇವಗಣಕ್ಕೆ. ದೇವಗಣ, ಋಷಿಗಣ&ಮನುಕುಲಕ್ಕೆ ಕಂಟಕರಾಗಿದ್ದ ತಾಮಸಿ ಸ್ವಭಾವದ ರಾಕ್ಷಸರನ್ನು ಸಂಹರಿ ಸುವ ಮೂಲಕ ದುಷ್ಟರನ್ನು ಶಿಕ್ಷಿಸಿ, ಶಿಷ್ಟಾಧೀನರನ್ನು ರಕ್ಷಿಸುವಂತಹ ಲೋಕ ಕಲ್ಯಾಣಾರ್ಥವಾಗಿ ಕರ್ಮವೆಸಗಿದ ಶ್ರೀಮನ್ನಾರಾಯಣನ ಹತ್ತು ಅವತಾರಗಳ ಸಂಕ್ಷಿಪ್ತತೆ ಇಂತಿದೆ

1.ಪ್ರಥಮ ಅವತಾರ :
                 ಹಯಗ್ರೀವನೆಂಬ ರಾಕ್ಷಸನನ್ನು ಕೊಂದು ಜ್ಞಾನರಾಶಿಯಾದ ವೇದಗಳನ್ನು ಉದ್ದರಿಸಿದಂತಹ ಮತ್ಸ್ಯಾವತಾರ.
*****

2 ದ್ವಿತೀಯ ಅವತಾರ :
                 ಅಮೃತೋತ್ಪತ್ತಿಗಾಗಿ
ಸಮುದ್ರ ಮಂಥನ ಮಾಡುತ್ತಿದ್ದಂತೆ ಕಡಗೋಲಾಗಿದ್ದ ಮಂದಾರ ಪರ್ವತವು ಸಮುದ್ರದಲ್ಲಿ ಮುಳುಗತೊಡಗಿದಾಗ ಸಮಯೋಚಿತವಾಗಿ ಮಂದರಾಚಲವನ್ನು ತನ್ನ ಬೆನ್ನ ಮೇಲೆ ಹೊತ್ತು ಎತ್ತಿ ಅಮೃತ ಪ್ರಾಪ್ತಿಗೆ ಅನುವು ಮಾಡಿದಂತಹ ಕೂರ್ಮಾವತಾರ
*****

3.ತೃತೀಯ ಅವತಾರ :
                 ಭೂದೇವಿಯನ್ನು ದೈತ್ಯನಿಂದ ರಕ್ಷಿಸಿ ಉದ್ದರಿಸುವ ಸಲುವಾಗಿ ಹಿರಣ್ಯಾಕ್ಷನನ್ನು ಸಂಹರಿಸಿದ ವರಾಹ ಅವತಾರ.
                  *****

4.ಚತುರ್ಥ ಅವತಾರ :
                  ದ್ವಾದಶಾಧಿತ್ಯರಿಗೆ
ಉಪಟಳ ನೀಡುತ್ತಾ ಶ್ರೀಹರಿಯಕಡುವೈರಿಯಾಗಿದ್ದಂತಹ ಹಿರಣ್ಯಕಶಿಪುವನ್ನು ಸಂಹರಿಸಿದ ನರಸಿಂಹಾವತಾರ.
                  *****

5.ಪಂಚಮ ಅವತಾರ :
                   ದೇವಲೋಕಕ್ಕೆ ಮುತ್ತಿಗೆ ಹಾಕಿ ಮರ್ಧಿಸಿದಂತಹ
ದೈತ್ಯ ರಾಜ ಬಲಿಚಕ್ರವರ್ತಿಯನ್ನು ರಸಾತಳದಲ್ಲಿರಿಸಿ, ಇಂದ್ರನಿಗೆ ರಾಜ್ಯವನ್ನು ಮರುಪ್ರಾಪ್ತಿಗೊಳಿಸಿದಂತಹ
ವಾಮನ ಅವತಾರ
******

6.ಷಷ್ಠಿ ಅವತಾರ :
             ಹೈಹಯ ವಂಶದ ಕ್ಷತ್ರಿಯ ರಾಜರ ಹಾಹಾಕಾರ&ಅನಾಚಾರವನ್ನು
ಖಂಡಿಸಿ ಯಥಾ ಕ್ಷತ್ರಿಯ ಕುಲಾಂತಕರನ್ನುಅಂತ್ಯಗೊಳಿಸಿದ  ಪರಶುರಾಮಾವತಾರ
     *******

7.ಸಪ್ತಮಿ ಅವತಾರ :
                ಧರ್ಮಸಾರಮಿದಂ
ಜಗತ್  ಎಂದು ಸಾರಿದಂತೆ ಮೋಹದ ಬುದ್ದಿಯಿಂದ ಸರ್ವನಾಶ ಹೊಂದಿದ ರಾವಣನನ್ನು ಸಂಹರಿಸಿದಂತಹ
ರಾಮಾವತಾರ.
*****

8.ಅಷ್ಟಮಿ ಅವತಾರ :
                 ಯತೋಧರ್ಮ _
ತತೋಜಯ: ಎಂದು ಸಾರಿ
ಕುರುಕ್ಷೇತ್ರ ಧರ್ಯ ಯುದ್ಧದಲ್ಲಿ
ಏನೂಮಾಡದೆ ಎಲ್ಲವನ್ನೂ ಮಾಡಿಸಿದ ಕೃಷ್ಣಾವತಾರ.
                 ****

9.ನವಮಿ ಅವತಾರ :
                 ಪಂಡಿತರ ಭಾಷೆ
ಯಾಗಿದ್ದ ಸಂಸ್ಕೃತದಲ್ಲಿದ್ದ ವೇದಸಾರವನ್ನು ಅರಿಯದ ಜನಸಾಮಾನ್ಯರನ್ನು ಮೌಢ್ಯತೆಗೆ
ತಳ್ಳಿ ಮುಕ್ತಿಗಾಗಿ ದು:ಖಿಸುತ್ತಿದ್ದಾಗ ಅತಿಯಾದ ಆಸೆಯೇ ದು:ಖಕ್ಕೆ ಮೂಲ ಎಂದು ಉಪದೇಶಿಸಿದಂತಹ
ಬುದ್ದಾವತಾರ
****

10. ದಶಾವತಾರ :
               ಪ್ರಸ್ತುತವಾಗಿರುವ
ಕಲಿಯುಗದಲ್ಲಿ ನಡೆಯುತ್ತಿರುವ
ಅಧರ್ಮ. ಅನಾಹುತ.&ಘೋರ ಕೃತ್ಯಗಳು
ತೀವ್ರವಾಗಿ ಧರ್ಮ ಶೂನ್ಯಕ್ಕೆ ತಲುಪಿದಾಗ ಕಲಿಯುಗದ ಅಂತ್ಯದಲ್ಲಿನ  ಕಲ್ಕಿ ಅವತಾರ
                     ****

ಓಂ ನಮೋ ನಾರಾಯಣಾಯ

ಪ್ರಣಾಮಗಳೊಂದಿಗೆ :
 ಜಿ. ಎಂ. ಆರ್.
ಆನೇಕಲ್.

No comments:

Post a Comment