:ಜ್ಞಾನದ ಹತ್ಯೆ :
+++++++++++
ಜ್ಞಾನವೇ ಸಾಧಕರಿಗೆ ಅಮೂಲ್ಯ
                             ಸಂಪತ್ತು.
ಜ್ಞಾನದ ಯುಕ್ತ - ಮುಕ್ತ ಬಳಕೆಗೆ
             ಆಗ ಬಾರದು ಆಪತ್ತು.
ಜ್ಞಾನಕ್ಕಿಂತಲೂ ಪವಿತ್ರವಾದಂತ
ಹ   ಆಭರಣ ಬೇರೊಂದಿಲ್ಲ.
ಇದನ್ನು ಅರಿತು ಗಳಿಸಿದರೆ
ಲಭಿಸುವುದು ಪಾಂಡಿತ್ಯವೆಲ್ಲ
ಜ್ಞಾನವಂತನು ತಲೆ ಬಾಗುವನು
                           ಪಂಡಿತರಿಗೆ
ಅರೆಜ್ಞಾನಿ ಆರ್ಭಟಿಸುವನು
       ಪರಮಜ್ಞಾನಿಗಳ ಎದುರಿಗೆ
ಅಜ್ಞಾನಿ ಅವಿವೇಕಿತನದಿಂದ
ಸೊಕ್ಕಿಬಾಧಿಸುವನುಪಂಡಿತರಿಗೆ
ಶುಷ್ಕ ಜ್ಞಾನಿಯು ಪ್ರಶಂಸಿಸುವ
                   ನು ಗಾಂಪರಿಗೆ
ಜ್ಞಾನವಂತರಿಗೆ ಜ್ಞಾನವೇ ಶಕ್ತಿ.
ಅಜ್ಞಾನಿಗಳಿಗೆ ದರ್ಪವೇ ಯುಕ್ತಿ.
ಹಣವಂತನಿಗೆ ಅಹಂಕಾರವೇ
                            ಪೋಷಣೆ
ಪಾರಮಾರ್ಥಿಕ ಜ್ಞಾನಿಗಳಿಗೆ
             ಸತ್ಸಂಗವೇ ಭೂಷಣ
ಜ್ಞಾನಿಯ ಜ್ಞಾನದ ಸದ್ಬಳಕೆಯಾ
ಗ ಬೇಕು ಸಮಾಜದ ಉನ್ನತಿಗೆ.
ಜ್ಞಾನಿಯ ಜ್ಞಾನವನ್ನು ತಿರಸ್ಕರಿಸಿ
ಎಂದೂಬಿಗಿಯಬಾರದು ಕುತ್ತಿಗೆ
ಜ್ಞಾನಿಯ ಜ್ಞಾನದ ಮುಕ್ತ-ಯುಕ್ತ
     ಬಳಕೆಯೇ ಸಲ್ಲಿಸುವ ಭತ್ಯೆ.
ಜ್ಞಾನಿಯನ್ನುತಿರಸ್ಕರಿಸಿಮಾಡಬಾರದುಅಮೂಲ್ಯಜ್ಞಾನದಹತ್ಯೆ
ಜ್ಞಾನವೇ ಶಕ್ತಿ
                  ಸದ್ಗುಣವೇ ಜ್ಞಾನ
ಪ್ರಣಾಮಗಳೊಂದಿಗೆ :
 ಜಿ. ಎಂ. ಆರ್.
ಆನೇಕಲ್.
 
No comments:
Post a Comment