Sunday, September 29, 2019

*ಹೆತ್ತವರ ಕುರುಡು ಪ್ರೀತಿಯೇ ಮಕ್ಕಳ ಭವಿಷ್ಯಕ್ಕೆ ಮಾರಕ


*ಹೆತ್ತವರ ಕುರುಡು ಪ್ರೀತಿಯೇ
      ಮಕ್ಕಳ ಭವಿಷ್ಯಕ್ಕೆ ಮಾರಕ
:::::::::::::::::::::::::::::::::::::::::::::

          ಕುರುಕ್ಷೇತ್ರ ಧರ್ಮ ಯುದ್ಧದ ನಂತರ ಧರ್ಮರಾಯ
ನಿಲ್ಲದ ಸಂದರ್ಭದಲ್ಲಿ ಭೀಮಾರ್ಜುನ ನಕುಲ - ಸಹದೇವ ರೊಡಗೂಡಿದಂತೆ
ಶ್ರೀ ಕೃಷ್ಣ ಪರಮಾತ್ಮನನ್ನು ವಂಧಿಸಿ ಮುಂಬರಲಿರುವ  ಕಲಿ
ಯುಗ ಹೇಗಿರುತ್ತದೆಯೆಂದು ತಿಳಿಯ ಬಯಸಿದಾಗ ಶ್ರೀ ಕೃಷ್ಣ ಪರಮಾತ್ಮ ನಾಲ್ಕು ಭಾಣಗಳನ್ನು ನಾಲ್ಕುಮೂಲೆಗಳಿಗೆ ಪ್ರಯೋಗಿ
ಸಿ ಧಿಕ್ಕಿಗೊಬ್ಬರಂತೆ ಕಳುಹಿಸಿ ಅಲ್ಲಿ ಭಾಣ ಬಿದ್ದಿರುವಲ್ಲಿಗೆ ಹೋಗಿ ಸಂಭವಿಸಿರುವ ಘಟನೆ
ಯನ್ನು ತಿಳಿದು ಯಥಾ ಭಾಣವ
ನ್ನು ತರಲು ತಿಳಿಸಿದಂತೆ ಆ ಭಾಣವನ್ನು ಹುಡುಕುತ್ತಾ ಹೊರಟ ನಕುಲನಿಗೆ ಭಾಣ ಲಭಿಸಿದ ಸ್ಥಳದಲ್ಲಿ ಒಂದು ಹಸು
/ಆಕಳು ತನ್ನ ಶೈಶಾವಸ್ಥೆಯಲ್ಲಿದ್ದ ಕರವನ್ನು ನಾಲಿಗೆಯಿಂದ ತೀವ್ರವಾಗಿ ನೆಕ್ಕುತ್ತಾ (ಅತಿಯಾದಪ್ರೀತಿಯಿಂದ) ಆ ಕರುವಿನ ದೇಹವೆಲ್ಲ ಗಾಯಗಳಾಗಿ ರಕ್ತ ಸ್ರಾವವಾಗುತ್ತಿತ್ತು. ಇದರ ಬಗ್ಗೆ
ತಿಳಿಯಬಯಸಿದ ನಕುಲನಿಗೆ
ಶ್ರೀ ಕೃಷ್ಣ ಪರಮಾತ್ಮನ ಉಪದೇಶ ಉಪದೇಶ ಇಂತಿದೆ :

          ಕಲಿಯುಗದಲ್ಲಿ ಹೆತ್ತವರಾದ ತಂದೆ-ತಾಯಿ ತಮ್ಮ
ಮಕ್ಕಳನ್ನು ಧೃತರಾಷ್ಟ್ರನಂತೆ ಅತಿಯಾಗಿ ಪ್ರೀತಿಸುವ ಮೂಲಕ ಹೊಗಳಿ ಹೊನ್ನಶೂಲಕ್ಕೇರಿಸಿ ಸೋಮಾರಿ /ತಿಂಡಿಪೋತರನ್ನಾಗಿಸಿ ಪಿತ್ರಾರ್ಜಿತ ಆಸ್ತಿಯ ಅನುಭೋಗದ ಉನ್ಮಾದದೊಂದಿಗೆ ಭೂಮಿಗೆ ಭಾರವಾಗಿ ರಾಷ್ಟಕ್ಕೆ ಹೊರೆಯಾಗುತ್ತಾರೆ.

          ಯಥಾನುಸಾರ ಬಹುಪಾಲು ಪೋಷಕರು ತಮ್ಮ ಮಕ್ಕಳ ಬಗ್ಗೆ ಅತಿಯಾದ ಕುರುಡು ಪ್ರೀತಿ ತೋರಿ ಅತಿಯಾಗಿ ಹೊಗಳಿ ಅವರ ಬಾಲ್ಯದ ತಪ್ಪುಗಳ ಬಗ್ಗೆ ಮೌಢ್ಯತೆಯ ಮೌನತಾಳಿ ಮಾಣಿಕ್ಯದಂತಹ ಮಕ್ಕಳ ಭವಿಷ್ಯಕ್ಕೆ ಮಾರಕವಾಗುವುದು ಖಂಡನಾರ್ಹ ಸಂಗತಿ.

              ಪೂಜ್ಯನೀಯ ಪೋಷಕರೆ, ನಿಮ್ಮ ಮಕ್ಕಳ ಬಗ್ಗೆ ನಿಮಗಿರುವ ಪ್ರೀತಿ /ಮೋಹ
ಹಲಸಿನ ಹಣ್ಣಿನ ಒಳಗಿರುವ ತೊಳೆಗಳಂತಿರಲಿ ಅವರ ಅಹಿತಕರ ವರ್ತನೆಗಳನ್ನು ತಿದ್ದಿ ತಿಳಿಸುವಾಗ ಹಲಸಿನ ಮೇಲಿರುವ ಮುಳ್ಳುಗಳಂತಿರಲಿ
ನಿಮ್ಮ ಸಮಯೋಚಿತ ಸ್ಪಂಧನೆ.

ಮಕ್ಕಳ ಮುಂದೆ ಮಾತಾಡೀಯ
ಎಚ್ಚರಿಕೆ!
ಪ್ರಣಾಮಗಳೊಂದಿಗೆ :
 ಜಿ. ಎಂ. ಆರ್.
ಆನೇಕಲ್.

 ಈ ಎಲ್ಲಾ ವಾಸ್ತವಿಕ ಅನುಭವದ ನುಡಿಗಳೊಂದಿಗೆ :
ಉಂಡುಂಡು ಕೇಡುಂಟಾಗಿಸಿದವರನ್ನು ಕೊಂಡಾಡುವುದು

ಉನ್ಮಾದದಿಂದ ದ್ವೇಷಿಸಿದವರನ್ನು ಪ್ರೀತಿಸುವುದು.

ದ್ರೋಹ ಬಗೆದವರಿಗೆ ದೈವಾನುಗ್ರಹ ಬಯಸುವ ಇರಾದೆ ನನ್ನದಾಗಿದೆ.
ಸರ್ವಂ ಶ್ರೀ ಕೃಷ್ಣಾರ್ಪಣ ಮಸ್ತು

ಪ್ರಣಾಮಗಳೊಂದಿಗೆ :

ಜಿ. ಎಂ. ಆರ್.
ಆನೇಕಲ್.

No comments:

Post a Comment