Sunday, September 29, 2019

Dr. GMR Inspirational Speeches in Different Events

Dr. GMR Inspirational Speeches in Different Events






DR.GMR Speech In MES Institutions



*ಗುಣಾತ್ಮಕ ಶಿಕ್ಷಣದ ವಿನಾಶವ ವೇ ರಾಷ್ಟ್ರದ ವಿನಾಶ. *


*ಗುಣಾತ್ಮಕ ಶಿಕ್ಷಣದ ವಿನಾಶವ
ವೇ  ರಾಷ್ಟ್ರದ  ವಿನಾಶ. *
++++++++++++++++++++

                  ಯಾವುದೇ ಒಂದು ರಾಷ್ಟ್ರದ ನಾಶಕ್ಕೆ ಅಣುಬಾಂಬ್
ಅಥವಾ ಬೃಹತ್ ಗಾತ್ರದ ಕ್ಷಿಪಣಿಗಳ ಬಳಕೆ ಅಗತ್ಯವಿರುವುದಿಲ್ಲ. ಬದಲಾಗಿ ಗುಣಾತ್ಮಕ ಶಿಕ್ಷಣವನ್ನು ಕೆಳಮಟ್ಠಕ್ಕೆ ಇಳಿಸುವುದರೊಂದಿಗೆ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ನಕಲು ಮಾಡಿ ಮೋಸಮಾಡಲು ಅನುವಾಗಿಸುವುದೊಂದೇ ಸಾಕು. (ಮಹಾಮಾನವತಾವಾದಿಯಾಗಿದ್ಧ ನೆಲ್ಸನ್ ಮಂಡೇಲಾ ರವರ
ಪ್ರಖ್ಯಾತ ಹೇಳಿಕೆ.)

ರಾಷ್ಟ್ರದ ಸರ್ವೋನ್ನತಿಯ  ಸಾಧಕ _ಬಾಧಕಗಳು ಆ ರಾಷ್ಟ್ರದಲ್ಲಿ ದೊರೆಯುವ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಅವಲಂಬಿಸಿರುತ್ತದೆ.

ಡೋಂಗಿ/ಅರೆಬುದ್ಧಿಯ ವೈಧ್ಯರ ಕೈಯಲ್ಲಿ ಸಾಯುವ ರೋಗಿಗಳನ್ನು, ಸ್ಪುಟವಾಗದ/ಸಂದೇಹಾಸ್ಪದವಾದ ಸ್ತಪತಿಗಳ
ಯೋಜನೆ ನಿರ್ಮಿಸಿದ ಕಟ್ಟಡಗಳು ಉರುಳುವ ಅಪಾಯವನ್ನು, ಅಪ್ರಾಮಾಣಿಕ ಬ್ಯಾಂಕ್ ಅಧಿಕಾರಿಗಳು, ಆರ್ಥಿಕ ತಜ್ಞರು. & ಲೆಕ್ಕಾಧಿಕಾರಿಗಳಿಂದ ಸೋರಿಕೆಯಾಗುವಂತಹ ಸಾರ್ವಜನಿಕರ ಹಣ, ಮಿಥ್ಯ /ಕಲ್ಪಿತ ಧಾರ್ಮಿಕ ವಿಧ್ವಾಂಸರ ಕೈಯಲ್ಲಿ ಹತ್ಯೆಯಾಗುತ್ತಿರುವ
ಮಾನವೀಯತೆ, ಭ್ರಷ್ಟ ಪೋಲೀಸ್ ಪಡೆಯಿಂದ ಕ್ಷೀಣಿಸುತ್ತಿರುವ ಕಾನೂನು & ಸುವ್ಯವಸ್ಥೆ. ಹಾಗೂ ಭ್ರಷ್ಠ ನ್ಯಾಯಮೂರ್ತಿಗಳ ಕೈಯಿಂದ ಕಣ್ಮರೆಯಾಗುತ್ತಿರುವ ನಿಷ್ಪಕ್ಷಪಾತವಾದ ನ್ಯಾಯವನ್ನು ನಿಗ್ರಹಿಸುವ ಸಲುವಾಗಿ ಶೀಲಸಂವರ್ಧಿಸುವ. ರಾಷ್ಟ ನಿರ್ಮಾಣ ಮಾಡುವಂತಹ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡುವ ಅನಿವಾರ್ಯತೆಯ 
ತೀವ್ರತೆ ಇದೆ. ಆದರೆ, ಪ್ರಸ್ತುತ ಲಭಿಸುತ್ತಿರುವ ಭೂಷಣ ರೂಪದ ಶಿಕ್ಷಣ ವ್ಯವಸ್ಥೆಯೇ
ರಾಷ್ಟ್ರವನ್ನು ವಿನಾಶದೆಡೆಗೆ ನೂಕುತ್ತಿರುವುದು ಶೋಚನೀಯ ಸಂಗತಿ ಆಗಿದೆ.

ಪ್ರಸ್ತುತ ನಮ್ಮ ಶಿಕ್ಷಣ ವ್ಯವಸ್ಥೆ ಪದವಿ /ಯೋಗ್ಯತಾ ಪತ್ರಗಳನ್ನು ನೀಡುತ್ತಿದೆಯೇ ಹೊರತು ಯೋಗ್ಯತೆಯನ್ನು ಪುಷ್ಟೀಕರಿಸುತ್ತಿಲ್ಲ.

ಪ್ರಸ್ತುತವಾಗಿರುವ ನಮ್ಮ ಡೋಂಗಿ ಶಿಕ್ಷಣ ವ್ಯವಸ್ಥೆ ಪರೀಕ್ಷೆ
ಗಳ ಕೇಂದ್ರಿತ ಶಿಕ್ಷಣ ಮತ್ತು ಅಂಕಗಳನ್ನು ಆಧರಿಸಿರುವ ಪರೀಕ್ಷೆಗಳಿಗೆ ಮಾತ್ರ ಸೀಮಿತವಾಗಿದೆಯೇ ಹೊರತು ಫಲಪ್ರಧಾಯಕ. ಪರಿಣಾಮಕಾರಿ. ಸೃಜನಶೀಲ.
ಶೀಲಸಂವರ್ಧಿಸುವ. ಮಾನವೀಯ ಮೌಲ್ಯಗಳನ್ನು ಅನುಸರಿಸುವಂತಹ ದೂರದೃಷ್ಟಿಯುಳ್ಳ ಶಿಕ್ಷಣ ಪೂರೈಕೆಯನ್ನು ಮೌಢ್ಯತೆಯಿಂದ ತಿರಸ್ಕರಿಸಿದೆ.

ಇಂದು ನಾವು ಹೇಗೆ & ಏನಾಗಿದ್ದೇವೆಯೋ? ಅದು ಹಿಂದೆ ನಾವು ಪಡೆದಿರುವ ಗುಣಾತ್ಮಕ ಶಿಕ್ಷಣದ ಪ್ರತಿಫಲವೇ ಆಗಿದೆ.
ಆದರೆ, ಇಂದಿನ ಶಿಕ್ಷಣ ಸಾಗುತ್ತಿರುವ ಹಾದಿಯ ಭವಿಷ್ಯ...........?

ಪ್ರಣಾಮಗಳೊಂದಿಗೆ :
 ಜಿ. ಎಂ. ಆರ್.
ಆನೇಕಲ್.

The collapse of Education is the Collapse of Nation :


The collapse of Education is
the Collapse of Nation :
*********

          Destroying any Nation does not require the use of the Atomic bombs or the long range Missiles. It requires only
lowering the Quality of Education & allowing cheating in the Examination by the students. (Efficacious & Eternal statement of the
Humanist NELSON MANDELA.)

Possibility & Impossibility of all round Development of the Nation is depending on the Quality of Education
availed in the Nation.

Qualitative, Efficacious and Effective Education is need of the hour in order to avoid the death of patients in the hands of Quack and Fake Doctors, Collapse of buildings at the hands of
Dubious Engineers, Leakage of money in the hands of dishonest Bankers. Economists &
Accountants, Humanity assassinates at the hands of pseudo Religious Scholars, Law&
Order determinates at the hands of Corrupted Police force. So, Justice
diminishes at the hands of Corrupted Judges. But
Education collapse the Nation by the Ornamental system of Education while neglecting the Efficacious Instrumental system of Education.

The present System of our Education is providing Marks Cards and Degree Certificates But not the Humanity, Quality, Gratitude, Attitude, Efficiency and Proficiency.

This dubious system of Education confines only to the process of Examinations oriented Education and Marks oriented Examinations.
So, Nobody is aware & caring the future Prosperity of our Nation.

What are We today? It is the outcome of the Education which We got in the Past.
The plight of the Future...?

With my Pranaams :
G. M. R.
Anekal.

:ದಶಾವತಾರ ವಿಚಾರಧಾರೆ :

:ದಶಾವತಾರ ವಿಚಾರಧಾರೆ :
++++++++++++++++++

           ಸಮಸ್ತ ಜೀವ ಸಂಕುಲ
ದ ಪಾಲನಕರ್ತನಾದ ಮಹಾ
ವಿಷ್ಣು ಯುಗಾನುಕ್ರಮದಲ್ಲಿ ಮನುಕುಲಕ್ಕೆ ದಾನವರಿಂದ ಉಪಟಳ ಉಂಟಾದಾಗಲೆಲ್ಲಾ ಸಮಯೋಚಿತವಾದ ತಕ್ಕಂತಹ
ಅವತಾರದಲ್ಲಿ ರೂಪತಾಳಿ ದೇವಗಣಕ್ಕೆ. ದೇವಗಣ, ಋಷಿಗಣ&ಮನುಕುಲಕ್ಕೆ ಕಂಟಕರಾಗಿದ್ದ ತಾಮಸಿ ಸ್ವಭಾವದ ರಾಕ್ಷಸರನ್ನು ಸಂಹರಿ ಸುವ ಮೂಲಕ ದುಷ್ಟರನ್ನು ಶಿಕ್ಷಿಸಿ, ಶಿಷ್ಟಾಧೀನರನ್ನು ರಕ್ಷಿಸುವಂತಹ ಲೋಕ ಕಲ್ಯಾಣಾರ್ಥವಾಗಿ ಕರ್ಮವೆಸಗಿದ ಶ್ರೀಮನ್ನಾರಾಯಣನ ಹತ್ತು ಅವತಾರಗಳ ಸಂಕ್ಷಿಪ್ತತೆ ಇಂತಿದೆ

1.ಪ್ರಥಮ ಅವತಾರ :
                 ಹಯಗ್ರೀವನೆಂಬ ರಾಕ್ಷಸನನ್ನು ಕೊಂದು ಜ್ಞಾನರಾಶಿಯಾದ ವೇದಗಳನ್ನು ಉದ್ದರಿಸಿದಂತಹ ಮತ್ಸ್ಯಾವತಾರ.
*****

2 ದ್ವಿತೀಯ ಅವತಾರ :
                 ಅಮೃತೋತ್ಪತ್ತಿಗಾಗಿ
ಸಮುದ್ರ ಮಂಥನ ಮಾಡುತ್ತಿದ್ದಂತೆ ಕಡಗೋಲಾಗಿದ್ದ ಮಂದಾರ ಪರ್ವತವು ಸಮುದ್ರದಲ್ಲಿ ಮುಳುಗತೊಡಗಿದಾಗ ಸಮಯೋಚಿತವಾಗಿ ಮಂದರಾಚಲವನ್ನು ತನ್ನ ಬೆನ್ನ ಮೇಲೆ ಹೊತ್ತು ಎತ್ತಿ ಅಮೃತ ಪ್ರಾಪ್ತಿಗೆ ಅನುವು ಮಾಡಿದಂತಹ ಕೂರ್ಮಾವತಾರ
*****

3.ತೃತೀಯ ಅವತಾರ :
                 ಭೂದೇವಿಯನ್ನು ದೈತ್ಯನಿಂದ ರಕ್ಷಿಸಿ ಉದ್ದರಿಸುವ ಸಲುವಾಗಿ ಹಿರಣ್ಯಾಕ್ಷನನ್ನು ಸಂಹರಿಸಿದ ವರಾಹ ಅವತಾರ.
                  *****

4.ಚತುರ್ಥ ಅವತಾರ :
                  ದ್ವಾದಶಾಧಿತ್ಯರಿಗೆ
ಉಪಟಳ ನೀಡುತ್ತಾ ಶ್ರೀಹರಿಯಕಡುವೈರಿಯಾಗಿದ್ದಂತಹ ಹಿರಣ್ಯಕಶಿಪುವನ್ನು ಸಂಹರಿಸಿದ ನರಸಿಂಹಾವತಾರ.
                  *****

5.ಪಂಚಮ ಅವತಾರ :
                   ದೇವಲೋಕಕ್ಕೆ ಮುತ್ತಿಗೆ ಹಾಕಿ ಮರ್ಧಿಸಿದಂತಹ
ದೈತ್ಯ ರಾಜ ಬಲಿಚಕ್ರವರ್ತಿಯನ್ನು ರಸಾತಳದಲ್ಲಿರಿಸಿ, ಇಂದ್ರನಿಗೆ ರಾಜ್ಯವನ್ನು ಮರುಪ್ರಾಪ್ತಿಗೊಳಿಸಿದಂತಹ
ವಾಮನ ಅವತಾರ
******

6.ಷಷ್ಠಿ ಅವತಾರ :
             ಹೈಹಯ ವಂಶದ ಕ್ಷತ್ರಿಯ ರಾಜರ ಹಾಹಾಕಾರ&ಅನಾಚಾರವನ್ನು
ಖಂಡಿಸಿ ಯಥಾ ಕ್ಷತ್ರಿಯ ಕುಲಾಂತಕರನ್ನುಅಂತ್ಯಗೊಳಿಸಿದ  ಪರಶುರಾಮಾವತಾರ
     *******

7.ಸಪ್ತಮಿ ಅವತಾರ :
                ಧರ್ಮಸಾರಮಿದಂ
ಜಗತ್  ಎಂದು ಸಾರಿದಂತೆ ಮೋಹದ ಬುದ್ದಿಯಿಂದ ಸರ್ವನಾಶ ಹೊಂದಿದ ರಾವಣನನ್ನು ಸಂಹರಿಸಿದಂತಹ
ರಾಮಾವತಾರ.
*****

8.ಅಷ್ಟಮಿ ಅವತಾರ :
                 ಯತೋಧರ್ಮ _
ತತೋಜಯ: ಎಂದು ಸಾರಿ
ಕುರುಕ್ಷೇತ್ರ ಧರ್ಯ ಯುದ್ಧದಲ್ಲಿ
ಏನೂಮಾಡದೆ ಎಲ್ಲವನ್ನೂ ಮಾಡಿಸಿದ ಕೃಷ್ಣಾವತಾರ.
                 ****

9.ನವಮಿ ಅವತಾರ :
                 ಪಂಡಿತರ ಭಾಷೆ
ಯಾಗಿದ್ದ ಸಂಸ್ಕೃತದಲ್ಲಿದ್ದ ವೇದಸಾರವನ್ನು ಅರಿಯದ ಜನಸಾಮಾನ್ಯರನ್ನು ಮೌಢ್ಯತೆಗೆ
ತಳ್ಳಿ ಮುಕ್ತಿಗಾಗಿ ದು:ಖಿಸುತ್ತಿದ್ದಾಗ ಅತಿಯಾದ ಆಸೆಯೇ ದು:ಖಕ್ಕೆ ಮೂಲ ಎಂದು ಉಪದೇಶಿಸಿದಂತಹ
ಬುದ್ದಾವತಾರ
****

10. ದಶಾವತಾರ :
               ಪ್ರಸ್ತುತವಾಗಿರುವ
ಕಲಿಯುಗದಲ್ಲಿ ನಡೆಯುತ್ತಿರುವ
ಅಧರ್ಮ. ಅನಾಹುತ.&ಘೋರ ಕೃತ್ಯಗಳು
ತೀವ್ರವಾಗಿ ಧರ್ಮ ಶೂನ್ಯಕ್ಕೆ ತಲುಪಿದಾಗ ಕಲಿಯುಗದ ಅಂತ್ಯದಲ್ಲಿನ  ಕಲ್ಕಿ ಅವತಾರ
                     ****

ಓಂ ನಮೋ ನಾರಾಯಣಾಯ

ಪ್ರಣಾಮಗಳೊಂದಿಗೆ :
 ಜಿ. ಎಂ. ಆರ್.
ಆನೇಕಲ್.

Jealousy of Callous


*Jealousy of Callous *
::::::::::::::::::::::::::::::::::::::::::::

Jealousy elevates the
             worst Quality.
As it has negative
                   Identity.
Jealousy spoils the
                   Charity.
As it does not care the
                    Humanity.

Jealousy affects the
                Adaptability.
As it intensifies the
                          Gravity.
Jealousy continues its
                           Eternity.
As it does not want the
                         Loyalty.

Jealousy does not have
                        Essentiality.
As it exists with the
                           Intensity.
Jealousy does not care
                   the Divinity. As it neglects the Sanctity.

Jealousy represents the
               colour Yellow.
As it disturbs the mind's
                           Mellow. Jealousy kills it's
                        Possessor.
As it creates the high
                        Pressure.

Jealousy increases the
                        Ignominity.
As it opposes the
                Magnanimity. Jealousy of Callous
                       must End.

If not it will agonise the
                          Mankind.

Authored & Circulated :
G. M. R.
Anekal.

*ಅಸೂಯೆ ಯ ನಿರ್ದಯತೆ

*ಅಸೂಯೆ ಯ ನಿರ್ದಯತೆ
++++++++++++++++++++

ಅಸೂಯೆ ಯು ನಿಕೃಷ್ಠ ಗುಣವನ್ನು ಔನ್ನತ್ತೀಕರಿಸುತ್ತೆ.
ಅಂತೆಯೇ ಇದು ಋಣಾತ್ಮಕತೆ-
              - ಯನ್ನು ಗುರುತಿಸುತ್ತೆ
ಅಸೂಯೆ ಚಾರಿತ್ರ್ಯವನ್ನು
                    ಹಾಳಾಗಿಸುತ್ತೆ.
ಅಂತೆಯೇ ಇದುಮಾನವೀಯ-
_ತೆಗೆ ಲಕ್ಷವನ್ನು ಧಿಕ್ಕರಿಸುತ್ತೆ.

ಅಸೂಯೆ ಹೊಂದಾಣಿಕೆಯನ್ನು
               ಅಡ್ಡಿಪಡಿಸುತ್ತೆ.
ಅಂತೆಯೇ ಗುರುತರ ಆಕರ್ಷಣೆ - ಯನ್ನು ಧಾರಣೆಗೊಳಿ ಸುತ್ತ್ತೆ.
ಅಸೂಯೆ ತನ್ನ ನಿರಂತರ-
_ತೆಯನ್ನು ಮುಂದುವರೆಸುತ್ತೆ.
ಅಂತೆಯೇ ಇದು ನಿಷ್ಠೆಯನ್ನು
                   ನಿರಾಕರಿಸುತ್ತೆ.

ಅಸೂಯೆಯು ಅಗತ್ಯತೆ
 ಹೊಂದುವುದನ್ನು ತಿರಸ್ಕರಿಸುತ್ತೆ
ಅಂತೆಯೇ ಇದು ಧಾರಣೆಯೊಂದಿಗೆ ಅಸ್ತಿತ್ವ_
_ವನ್ನು ಹೊಂದಿರುತ್ತೆ.
ಅಸೂಯೆಯು ದೈವತ್ವವನ್ನು
                ನಿಗ್ರಹಿಸುತ್ತೆ. ಅಂತೆಯೇ ಇದು ಪಾವೀತ್ರ_
_ತೆಯನ್ನು   ನಿರಾಕರಿಸುತ್ತೆ.

ಅಸೂಯೆಯು ಹಳದಿ ಬಣ್ಣವನ್ನು ಪ್ರತಿನಿಧಿಸುತ್ತದೆ.
ಅಂತೆಯೇ ಇದು ಮನಸ್ಸಿನ
ಸುಮಧುರತೆಗೆ ಅಡ್ಡಿಪಡಿಸುತ್ತೆ.

ಅಸೂಯೆಯು ಹೊಂದಿರುವ _
_ವನನ್ನು  ಕೊಳ್ಳುತ್ತದೆ.
ಅಂತೆಯೇ ಇದು ಅಧಿಕ
ಒತ್ತಡವನ್ನು ಸೃಷ್ಟಿಸುತ್ತೆ.
ಅಸೂಯೆಯು ಕ್ಷುಲ್ಲಕತನವನ್ನು
                     ಹೆಚ್ಚಿಸುತ್ತೆ.
ಅಂತೆಯೇ ಇದು  ಸುಕೃಷ್ಠತೆಯನ್ನು ವಿರೋಧಿಸುತ್ತೆ
ಅಸೂಯೆಯ ನಿರ್ದಯತೆಯ-
ನ್ನುಕೊನೆಗೊಳಿಸಲೇಬೇಕಾಗುತ್ತೆ
ಇಲ್ಲವಾದಲ್ಲಿ ಇದು ಮನುಕುಲ-
_ವನ್ನು  ನೋಯಿಸುತ್ತೆ.

ಜ್ಞಾನೋದ್ದೀಪನ *
ಪ್ರಣಾಮಗಳೊಂದಿಗೆ :
ಜಿ. ಎಂ. ಆರ್
ಆನೇಕಲ್

:ಭ್ರಷ್ಟಾಚಾರದ ಅನಾಚಾರ :

ಲಕ್ಷವನ್ನು ×
               ಲಕ್ಷ್ಯವನ್ನು _/

ಕೊಳ್ಳುತ್ತದೆ ×
                   ಕೊಲ್ಲುತ್ತೆ _/
*ಜ್ಞಾನೋದ್ದೀಪನ *
      :::::::::::::::::::::::::::
    :ಭ್ರಷ್ಟಾಚಾರದ ಅನಾಚಾರ :
     ++++++++++++++++++

ಭ್ರಷ್ಟತೆ ನಮ್ಮ ಸಮಾಜದ
                       ಅನಿಷ್ಟತೆ.
ಇದು ನಮ್ಮ ದೇಶಕ್ಕೆ ಅಂಟಿದ
                       ಜಾಡ್ಯತೆ.
ಎಂದಿಗೂ ಎಲ್ಲೆಲ್ಲೂ ಇದಕ್ಕಿಲ್ಲ
                          ಮಾನ್ಯತೆ.
ಅದನ್ನು ಅರಿಯಲು ಬೇಕು
                           ಯೋಗ್ಯತೆ.

ಭ್ರಷ್ಟತೆ ಆಗಿದೆ ಪಾತಾಳ ಗರಡಿ.
ಇದಕ್ಕೆಬೇಕಾಗಿದೆ ತೀವ್ರ ಗಾರುಡಿ
ಅದನ್ನು ನಿಗ್ರಹಕ್ಕೆ ಬೇಕು ಜರಡಿ
ಅಂತ್ಯಗೊಳಿಸಲು ಕತ್ತರಿಸ
                  ಬೇಕು ಇದರ ನಾಡಿ

ಭ್ರಷ್ಟಾಚಾರ ಹೇಸಿಗೆಯಸ್ವೀಕಾರ
ಇದಕ್ಕಿಲ್ಲಸಮಾಜದಲ್ಲಿ ಸಹಕಾರ
ಆದಾಗ್ಯೂಇದಕ್ಕಿದೆ ಮಮಕಾರ
ಸರ್ವರಿಗೂಇದರ ಹಾಹಾಕಾರ

ಭ್ರಷ್ಟತೆ ಒಂದು ಪಾಪ ಮತ್ತು
                            ಅಪಮಾನ
ಇದಕ್ಕೆ ಎಲ್ಲೂ ಯಾರಿಂದಲೂ
                ಸಲ್ಲದು ಸನ್ಮಾನ
ಇದನ್ನು ಬೇರುಸಮೇತ ಕಿತ್ತೆಸೆ
ಯಲುಬಿಡಬೇಕು ಬಿಗುಮಾನ
ಅದಕ್ಕಾಗಿ ಸರ್ವರಿಗೂ ಇರ
             ಬೇಕು ದೇಶಾಭಿಮಾನ

ದೇಶಾಭಿಮಾನಿಗಳು ಶ್ರಮಿಸಿದ
ರು  ಸಮಾಜದ ಉತ್ಕೃಷ್ಟತೆಗೆ
ದೇಶದ್ರೋಹಿಗಳು ಬದುಕಿದರು
        ಸಮಾಜದ ಭ್ರಷ್ಟತೆಗೆ
ದೇಶಭಕ್ತರಾದರು ಸಮಾಜದ
                          ಸೇವಕರು
ಭ್ರಷ್ಟತೆಯ ದ್ರೋಹಿಗಳಾದರು
              ಸಮಾಜದ ಘಾತಕರು

ಶಾಲೆಯಲ್ಲಿ ಗುರು ಕಲಿಸಿದ್ದು
            ಅಪ್ಪಟ ಪ್ರಾಮಾಣಿಕತೆ
ಸಮಾಜದಲ್ಲಿ ದಿಟವಾಗಿ
        ಕಂಡದ್ದು ಕಪಟ ಭ್ರಷ್ಟತೆ
ಬದುಕಿಗೆ ಆವರಿಸಿದ್ದು ಮೌಢ್ಯತೆ
ಮಾನವೀಯ ಮೌಲ್ಯಗಳಿಗಿಲ್ಲ
                 ಕಿಂಚಿತ್ತೂ ಮಾನ್ಯತೆ

ಓ ಬನ್ನಿ ಸೋದರರೆ ತೊಲಗಿ
             ಸಲು ಭ್ರಷ್ಟಾಚಾರ
ಓ ಬನ್ನಿ ದೇಶಭಕ್ತರೆ ದೂರವಾಗಿಸಲು ಅನಾಚಾರ
ಓ ಬನ್ನಿ ಯುವಕರೆ ಸ್ತಿರವಾಗಿ
                  ರಿಸಲು ಶಿಷ್ಟಾಚಾರ
ಓ ಬನ್ನಿ ಮನುಜರೆ ಮೇಲ್ಮೆಗೊ
ಳಿಸಲು ಮಾನವತೆಯ ಆಚಾರ.

 ಜಿ. ಎಂ. ಆರ್.
ಆನೇಕಲ್.

*ಜ್ಞಾನೋದ್ದೀಪನ * :ಜ್ಞಾನದ ಹತ್ಯೆ :



:ಜ್ಞಾನದ ಹತ್ಯೆ :
+++++++++++

ಜ್ಞಾನವೇ ಸಾಧಕರಿಗೆ ಅಮೂಲ್ಯ
                             ಸಂಪತ್ತು.
ಜ್ಞಾನದ ಯುಕ್ತ - ಮುಕ್ತ ಬಳಕೆಗೆ
             ಆಗ ಬಾರದು ಆಪತ್ತು.
ಜ್ಞಾನಕ್ಕಿಂತಲೂ ಪವಿತ್ರವಾದಂತ
ಹ   ಆಭರಣ ಬೇರೊಂದಿಲ್ಲ.
ಇದನ್ನು ಅರಿತು ಗಳಿಸಿದರೆ
ಲಭಿಸುವುದು ಪಾಂಡಿತ್ಯವೆಲ್ಲ


ಜ್ಞಾನವಂತನು ತಲೆ ಬಾಗುವನು
                           ಪಂಡಿತರಿಗೆ
ಅರೆಜ್ಞಾನಿ ಆರ್ಭಟಿಸುವನು
       ಪರಮಜ್ಞಾನಿಗಳ ಎದುರಿಗೆ
ಅಜ್ಞಾನಿ ಅವಿವೇಕಿತನದಿಂದ
ಸೊಕ್ಕಿಬಾಧಿಸುವನುಪಂಡಿತರಿಗೆ
ಶುಷ್ಕ ಜ್ಞಾನಿಯು ಪ್ರಶಂಸಿಸುವ
                   ನು ಗಾಂಪರಿಗೆ

ಜ್ಞಾನವಂತರಿಗೆ ಜ್ಞಾನವೇ ಶಕ್ತಿ.
ಅಜ್ಞಾನಿಗಳಿಗೆ ದರ್ಪವೇ ಯುಕ್ತಿ.
ಹಣವಂತನಿಗೆ ಅಹಂಕಾರವೇ
                            ಪೋಷಣೆ
ಪಾರಮಾರ್ಥಿಕ ಜ್ಞಾನಿಗಳಿಗೆ
             ಸತ್ಸಂಗವೇ ಭೂಷಣ

ಜ್ಞಾನಿಯ ಜ್ಞಾನದ ಸದ್ಬಳಕೆಯಾ
ಗ ಬೇಕು ಸಮಾಜದ ಉನ್ನತಿಗೆ.
ಜ್ಞಾನಿಯ ಜ್ಞಾನವನ್ನು ತಿರಸ್ಕರಿಸಿ
ಎಂದೂಬಿಗಿಯಬಾರದು ಕುತ್ತಿಗೆ
ಜ್ಞಾನಿಯ ಜ್ಞಾನದ ಮುಕ್ತ-ಯುಕ್ತ
     ಬಳಕೆಯೇ ಸಲ್ಲಿಸುವ ಭತ್ಯೆ.
ಜ್ಞಾನಿಯನ್ನುತಿರಸ್ಕರಿಸಿಮಾಡಬಾರದುಅಮೂಲ್ಯಜ್ಞಾನದಹತ್ಯೆ

ಜ್ಞಾನವೇ ಶಕ್ತಿ
                  ಸದ್ಗುಣವೇ ಜ್ಞಾನ

ಪ್ರಣಾಮಗಳೊಂದಿಗೆ :
 ಜಿ. ಎಂ. ಆರ್.
ಆನೇಕಲ್.

*ಮಾತಿನ ಮಹಿಮೆ.... ..... ವ್ಯಕ್ತಿತ್ವದ ಹಿರಿಮೆ *


*ಮಾತಿನ ಮಹಿಮೆ....
       ..... ವ್ಯಕ್ತಿತ್ವದ ಹಿರಿಮೆ *
::::::::::::::::::::::::::::::::::::::::::::

              ಮಾತು ಮನುಕುಲದ
ಜ್ಯೋತಿ. ಮಾತಿನ ಮೂಲ ಯೋಚನಾ ಲಹರಿ. ಯೋಚನಾ ಲಹರಿಗೆ ಆದಿ ವಿವೇಚನಾಶೀಲತೆ
ಮಾತು ಮಾನವನ ಯೋಚನಾ ಲಹರಿಗೆ ತೊಡಿಸುವ ಉಡುಪಿನಂತಿರುತ್ತದೆ.
ಮಾತು ಮಾನವನಿಗೆ ದೈವದತ್ತವಾಗಿ ಪ್ರಾಪ್ತವಾಗಿರುವ
ಸಾರ್ವಭೌಮತ್ವದ ವರವಾಗಿದೆ.

ಮಾತು ಮಾಣಿಕ್ಯದಂತಹ ಆಭರಣ ವಾಗಿದೆ.
ಅಂತೆಯೇ, ಅರಿತು ನುಡಿದರೆ ಮಾತು. ಮರೆತು ಮರ್ಧಿಸಿ ನುಡಿದರೆ ಮೃತ್ಯು.
ಮಾತು ಮೃದುವಾಗಿ, ಮಧುರವಾಗಿ, ಹಿಂಪಾಗಿ & ಆಹ್ಲಾದಕರವಾಗಿದ್ದು  ಆಲಿಸುವವರಆನಂದಕ್ಕೆ ಪುಷ್ಟೀಕರಿಸುವಂತಿರಬೇಕು.

ಮಾತುಗಾರಿಕೆಯು ಮಾತುಗಾರರನ್ನು ಸಿದ್ಧ. ಬದ್ಧ &
ಶುದ್ಧ ವ್ಯಕ್ತಿಗಳನ್ನಾಗಿಸುತ್ತದೆ.

ಮಾತುಗಾರನ ಮಾತುಗಳು :
         ಮುತ್ತಿನ ಹಾರದಂತೆ,
         ಮಾಣಿಕ್ಯದ ದೀಪ್ತಿಯಂತೆ
        ಸ್ಪಟಿಕದ   ಶಲಾಕೆಯಂತೆ,
        ಕಿವಿಗೆ     ಹಿಂಪಾದಂತೆ
         ಮನಕ್ಕೆ ಮಧುರವಾದಂತೆ
        ಆತ್ಮಕ್ಕೆ ಆನಂದವಾದಂತೆ
                           ಇರ ಬೇಕು.

ವಾಕ್ಚಾತುರ್ಯ. ವಾಕ್ಪಟುತ್ವ.
ವಾಗ್ವಾದ. ವಾಗ್ದಾಳಿ. ವಾಕ್ಸಮರ
ವಾಕ್ಶಬ್ದಾಡಂಬರ. ಇವೆಲ್ಲವೂ ಸಹಾ ಮಾತಿನ ಮಹಿಮೆ ಗೆ ಪೂರಕವಾಗಿವೆ.

. ಮಾತಿನ ಪ್ರೌಡಿಮೆ. ತಾಳ್ಮೆ.
ಮೇಲ್ಮೆ. ಒಲುಮೆ. ನಲುಮೆ.
ಹಿರಿಮೆ ಗರಿಮೆ. ಗಹನತೆ &
ಮಹನತೆ ಈ ಸಂಕೀರ್ಣ ಸಮಾಜದಲ್ಲಿ ಎಂತಹ ಸಂಧಿಗ್ಧ ಸನ್ನಿವೇಶವನ್ನೂ ಸಹಾ ನಿಭಾಯಿಸುವ ಯುಕ್ತ ಶೀಲ
ಶಕ್ತಿಯನ್ನೊಂದಿದೆ.

ಹಿತಕರವಾದ ಸರ್ವೋತ್ಕೃಷ್ಟ
ಮಾತು :
ನಿಖರವಾಗಿ. ಸಮಗ್ರವಾಗಿ.
ಸ್ಪಷ್ಟವಾಗಿ. ಅಪ್ಪಟವಾಗಿ. ಸರಳವಾಗಿ. ಪ್ರಜ್ಞಾಪೂರ್ವಕವಾಗಿ
ದ್ವನಿ ಏರಿಳಿತ ವಾಗಿ
ಸಮಯೋಚಿತವಾಗಿ. ಭಾಷಾ ಹಿಡಿತದೊಂದಿಗೆ ಆಲಿಸುವವರಿಗೆ ಆಹ್ಲಾದಕರವಾಗಿರಬೇಕು.
ಮಾತು ಮನೋವೇದನೆಗೆ
ಅವಕಾಶ ನೀಡದಂತೆ ಮನಸ್ಸು & ಆತ್ಮಾನಂದಕ್ಕೆ ಪೂರಕವಾಗಿರ
ಬೇಕು.
Think before speak. Otherwise You are Blink
ಅರ್ಥಾತ್, ಮಾತಿಗೆ ಮೊದಲು ಯೋಚಿಸಿ ಮಾತನಾಡು ಇಲ್ಲವಾದರೆ ನೀನು ಮೂಡನಾಗುತ್ತೀಯ.

ನಮ್ಮ ನಡೆ ಮತ್ತು ನುಡಿ ಅಬೇಧ್ಯವಾಗಿ ಆದರ್ಶನೀಯವಾಗಿರಬೇಕು.

ಪ್ರಣಾಮಗಳೊಂದಿಗೆ :
 ಜಿ. ಎಂ. ಆರ್.
ಆನೇಕಲ್.